ಮನೋರಂಜನೆ

ನನ್ನ ಜೀವನದಲ್ಲಿ ಯಾಕೆ ಬಂದೆ?; ಬಾಲಿವುಡ್ ನಟ ರಣವೀರ್​ ಸಿಂಗ್​

Pinterest LinkedIn Tumblr


ಬಾಲಿವುಡ್​ ನಟ ರಣವೀರ್​ ಸಿಂಗ್ ಸದಾ ಜಾಲಿ ಮೂಡ್​ನಲ್ಲಿರುತ್ತಾರೆ. ಮಾಧ್ಯಮಗಳ ಎದುರಂತೂ ಅವರು ಸಿಟ್ಟಾಗಿದ್ದೇ ಇಲ್ಲ. ಆದರೆ, ಅಚ್ಚರಿ ಎಂಬಂತೆ ರಣವೀರ್​ ಸಿಂಗ್​ ಈಗ ಸಿಟ್ಟಾಗಿ ಬೈದಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಅಷ್ಟಕ್ಕೂ ರಣವೀರ್​ ಬೈದಿದ್ದು ಯಾರಿಗೆ? ಅವರು ಬಯ್ಯಲು ಕಾರಣವೇನು? ಎಂಬುದಕ್ಕೆ ಇಲ್ಲಿದೆ ಉತ್ತರ.

ರಣವೀರ್​ ಸದಾ ಅಭಿಮಾನಿಗಳ ಜೊತೆ ಸಂವಹನ​ ನಡೆಸುತ್ತಲೇ ಇರಿಸುತ್ತಾರೆ. ಈ ಕಾರಣಕ್ಕೆ ಸಮಯವಿದ್ದಾಗೆಲ್ಲ ಅವರು ಇನ್​​ಸ್ಟಾಗ್ರಾಂನಲ್ಲಿ ಲೈವ್​ ಬರುತ್ತಾರೆ. ಇತ್ತೀಚೆಗೂ ಅವರು ಹಾಗೆಯೇ ಮಾಡಿದ್ದರು. ಕಾರಿನಲ್ಲಿ ಹೋಗುವಾ ಸಾಂಗ್ ಕೇಳುತ್ತಾ ಅವರು ಲೈವ್​ ಬಂದಿದ್ದರು.

ರಣವೀರ್​ ಕಾರಿನಲ್ಲಿ ಸಾಂಗ್​ ಹಚ್ಚಿಕೊಂಡಿದ್ದರು ಎನ್ನುವ ಕಾರಣಕ್ಕೆ ಅನೇಕರು ಸಿಟ್ಟಾಗಿದ್ದರು. ಅಷ್ಟೇ ಅಲ್ಲ, ಲೈವ್​ನಲ್ಲಿಯೇ ಸಾಂಗ್​ ಬಂದ್​ ಮಾಡುವಂತೆ ಕಮೆಂಟ್​ ಹಾಕಿದ್ದರು. ಇದನ್ನು ರಣವೀರ್​ ಗಮನಿಸಿದ್ದಾರೆ. ಅಷ್ಟೇ ಅಲ್ಲ, ಈ ವಿಚಾರವಾಗಿ ವಿಡಿಯೋ ಒಂದನ್ನು ಮಾಡಿದ್ದಾರೆ. ಇದನ್ನು ರಣವೀರ್​ ಫ್ಯಾನ್​ ಕ್ಲಬ್​ಗಳು ಹಂಚಿಕೊಂಡಿವೆ.

“ನಿಮಗೆ ಹಿಂದಿ ಬರಲ್ವಾ? ಮ್ಯೂಸಿಕ್​ ಬಂದ್​ ಮಾಡು, ಜೋಕರ್​ ರೀತಿ ಕಾಣ್ತಾ ಇದೀಯಾ ಎಂಬಿತ್ಯಾದಿ ಕಮೆಂಟ್​ಗಳು ಬರುತ್ತಿವೆ. ನಿಮಗೆ ಮಾಡಲು ಬೇರೆ ಕೆಲಸ ಇಲ್ಲವೇ? ಇದನ್ನು ಬೇರೆ ಎಲ್ಲದಾರೂ ಹೋಗಿ ಮಾಡಿ. ನನ್ನ ಲೈಫ್​ನಲ್ಲೇಕೆ ಬರ್ತೀರಾ,” ಎಂದು ಸಿಟ್ಟಾಗಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

ಸಿನಿಮಾ ವಿಚಾರಕ್ಕೆ ಬರುವುದಾದರೆ, ರಣವೀರ್​ ‘83’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. 1983ರಲ್ಲಿ ಭಾರತ ವಿಶ್ವಕಪ್​ ಗೆದ್ದಿತ್ತು. ಇದಕ್ಕೆ ಕಾರಣವಾಗಿದ್ದು ಅಂದಿನ ಟೀಂ ಇಂಡಿಯಾ ನಾಯಕ ಕಪಿಲ್​ ದೇವ್​.​ ಅವರ ಪಾತ್ರದಲ್ಲಿ ರಣವೀರ್ ಕಾಣಿಸಿಕೊಳ್ಳುತ್ತಿದ್ದಾರೆ. ರಣವೀರ್​ ಪತ್ನಿ ದೀಪಿಕಾ, ‘ಚಪಾಕ್​’ ಸಿನಿಮಾದಲ್ಲಿ ಬಣ್ಣ ಹಚ್ಚುತ್ತಿದ್ದಾರೆ. ಆ್ಯಸಿಡ್​ ಸಂತ್ರಸ್ತೆಯ ಪಾತ್ರಕ್ಕೆ ಅವರು ಜೀವ ತುಂಬುತ್ತಿದ್ದಾರೆ.

Comments are closed.