ಮನೋರಂಜನೆ

ತಾಯಿಯಾದ ಬಳಿಕ ಬೆಳ್ಳಿಪರದೆಗೆ ರಿ ಎಂಟ್ರಿ ಕೊಟ್ಟ ನಟಿ!

Pinterest LinkedIn Tumblr


ನಿರ್ದೇಶಕ ಮಂಜು ಸ್ವರಾಜ್​ ನಿರ್ದೇಶನಲ್ಲಿ ಸಿದ್ಧವಾದ ‘ಮನೆ ಮಾರಾಟಕ್ಕಿದೆ‘ ಸಿನಿಮಾವು ಬಿಡುಗಡೆಗೆ ಸಿದ್ದವಾಗಿದೆ. ಸದ್ಯ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದ್ದು, ನೋಡುಗರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ.

‘ಮನೆ ಮಾರಾಟಕ್ಕಿದೆ‘ ಸಿನಿಮಾವು ಹಾರರ್​ ಮತ್ತು ಕಾಮಿಡಿ ಮಿಶ್ರಿತ ಸಿನಿಮಾವಾಗಿದ್ದು, ಚಿತ್ರದಲ್ಲಿ ಸಾಧು ಕೋಕಿಲ, ಚಿಕ್ಕಣ್ಣ, ರವಿಶಂಕರ್​ ಗೌಡ, ಕುರಿ ಪ್ರತಾಪ್​ ಮುಖ್ಯ ಪಾತ್ರದಲ್ಲಿ ಮಿಂಚಿದ್ದಾರೆ. ಅಂತೆಯೇ ನಾಯಕಿಯಾಗಿ ಶೃತಿ ಹರಿಹರನ್​ ಮತ್ತು ಕಾರುಣ್ಯ ರಾಮ್​​​ ಅಭಿನಯಿಸಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೆ ಚಿತ್ರ ಹಾಡೊಂದು ರಿಲೀಸ್​ ಆಗಿದ್ದು, ವೀಕ್ಷಕರಿಂದ ಉತ್ತಮ ಪತಿಕ್ರಿಯೆ ಬಂದಿದೆ. ಇದೀಗ ಚಿತ್ರದ ಟ್ರೈಲರ್​ ಬಿಡುಗಡೆಯಾಗಿದೆ.

ಒಂದು ಸಿನಮಾದಲ್ಲಿ ಇಬ್ಬರು ಅಥಬಾ ಒಬ್ಬರು ಹಾಸ್ಯ ನಟರು ಅಭಿನಯಿಸುತ್ತಾರೆ. ಆದರೆ ‘ಮನೆ ಮಾರಾಟಕ್ಕಿದೆ‘ ಸಿನಿಮಾದಲ್ಲಿ ಕನ್ನಡ ಪ್ರಮುಖ ಹಾಸ್ಯ ನಟರನ್ನು ಸೇರಿಸಿಕೊಂಡು ಮಂಜು ಸ್ವರಾಜ್​ ಸಿನಿಮಾ ಮಾಡಿದ್ದಾರೆ.ಈ ಸಿನಿಮಾವು ನ.15 ರಂದು ಬಿಡುಗಡೆಯಾಗುತ್ತಿದ್ದು, ಚಿತ್ರಕ್ಕೆ ಎಸ್​.ವಿ ಬಾಬು ಬಂಡವಾಳ ಹೂಡಿದ್ದಾರೆ.

Comments are closed.