ರಾಷ್ಟ್ರೀಯ

ಜನರ ಮುಂದೆ ಮೆಟ್ರೋದಲ್ಲಿ ಜೋಡಿ ಕಿಸ್!

Pinterest LinkedIn Tumblr


ನವದೆಹಲಿ: ಪ್ರೇಮಿಗಳು ಪಾರ್ಕ್ ಗಳಲ್ಲಿ ಸುತ್ತಾಡೋದು, ಒಬ್ಬರಿಗೊಬ್ಬರು ಕಿಸ್ ಮಾಡಿಕೊಳ್ಳೋದು ಸಾಮಾನ್ಯ. ಆದರೆ ಜೋಡಿಯೊಂದು ಮೆಟ್ರೋದಲ್ಲಿ ತುಂಬಿದ ಜನರ ಮಧ್ಯೆಯೇ ಕಿಸ್ ಮಾಡಿಕೊಂಡ ಪ್ರಸಂಗವೊಂದು ದೆಹಲಿಯಲ್ಲಿ ನಡೆದಿದೆ.

ಜೋಡಿ ಕಿಸ್ ಮಾಡಿಕೊಳ್ಳುತ್ತಿರುವ ದೃಶ್ಯವನ್ನು ಸಹಪ್ರಯಾಣಿಕರು ತಮ್ಮ ಮೊಬೈಲಿನಲ್ಲಿ ಚಿತ್ರೀಕರಿಸಿದ್ದು, ಇದೀಗ ಆ ವಿಡಿಯೋ ಸಾಕಷ್ಟು ವೈರಲ್ ಆಗುತ್ತಿದೆ. ಅಲ್ಲದೇ ಸಾವಿರಾರು ಪರ-ವಿರೋಧ ಕಮೆಂಟ್ ಗಳು ಬರುತ್ತಿದ್ದು ಭಾರೀ ಚರ್ಚೆಗೆ ಗ್ರಾಸವಾಗಿದೆ.

ವಿಡಿಯೋದಲ್ಲೇನಿದೆ?
4 ಸೆಕೆಂಡಿನ ಈ ವಿಡಿಯೋದಲ್ಲಿ ಪ್ರಯಾಣಿಕರು ತುಂಬಿದ್ದ ಮೆಟ್ರೋದಲ್ಲಿ ಹುಡುಗ ಹಾಗೂ ಹುಡುಗಿ ಲೋಕದ ಪರಿಜ್ಞಾನವೇ ಇಲ್ಲದಂತೆ ತಮ್ಮ ಪಾಡಿಗೆ ಒಬ್ಬರಿಗೊಬ್ಬರು ಕಿಸ್ ಮಾಡಿಕೊಳ್ಳುತ್ತಿದ್ದಾರೆ. ಈ ಜೋಡಿಯ ಪಕ್ಕವೇ ಯುವಕನೊಬ್ಬ ಕಿವಿಗೆ ಇಯರ್ ಫೋನ್ ಹಾಕಿಕೊಂಡು ತನ್ನ ಪಾಡಿಗೆ ತಾನು ಕುಳಿತುಕೊಂಡಿದ್ದು, ಸುತ್ತಮುತ್ತ ಏನು ನಡೆಯುತ್ತಿದೆ ಎಂಬುದರ ಬಗ್ಗೆ ತಲೆಕೆಡಿಸಿಕೊಳ್ಳದೇ ಇರುವುದನ್ನು ಗಮನಿಸಬಹುದು. ಆದರೆ ಕೆಲವು ಪ್ರಯಾಣಿಕರು ಈ ಜೋಡಿಗೆ ಪಾಠ ಕಲಿಸಬೇಕೆಂಬ ನಿಟ್ಟಿನಲ್ಲಿ ಅವರ ಮುಖ ಸಮೇತವಾಗಿ ತಮ್ಮ ಮೊಬೈಲಿನಲ್ಲಿ ವಿಡಿಯೋ ಮಾಡಿಕೊಂಡಿದ್ದಾರೆ.

ಈ ವಿಡಿಯೋವನ್ನು ಟ್ವಿಟ್ಟರ್ ಬಳಕೆದಾರ ರೋಹಿತ್ ಶರ್ಮಾ ಎಂಬವರು ಶೇರ್ ಮಾಡಿಕೊಂಡಿದ್ದು, ವಿಡಿಯೋವನ್ನು ದೆಹಲಿ ಪೊಲೀಸ್, ದೆಹಲಿ ಮೆಟ್ರೋ ರೈಲ್ ಕಾರ್ಪೋರೇಶನ್ ಹಾಗೂ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗೆ ಟ್ಯಾಗ್ ಮಾಡಿ ಇಂತಹ ಕ್ರಿಯೆಗಳಿಗೆ ಮೆಟ್ರೋದೊಳಗೆ ಅವಕಾಶ ಇದೆಯಾ ಎಂದು ಪ್ರಶ್ನಿಸಿದ್ದಾರೆ.

ಮತ್ತೊಬ್ಬರು ಇದನ್ನು ಸಾರ್ವಜನಿಕವಾಗಿ ಮಾಡುವುದು ಸರಿಯೇ ಅಥವಾ ತಪ್ಪೇ ಎಂಬುದರ ಬಗ್ಗೆ ಡಿಬೇಟ್(ಚರ್ಚೆ) ನಡೆಯಬಹುದು. ಆದರೆ ಇದು ಪಕ್ಕಾ ತಪ್ಪು. ಅದರಲ್ಲೂ ಅದನ್ನು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಕ್ಕೆ ಹರಿಯಬಿಟ್ಟಿರುವುದು ಮಹಾ ತಪ್ಪು ಎಂದು ಕಮೆಂಟ್ ಮಾಡಿದ್ದಾರೆ.

ಇನ್ನು ಕೆಲವರು ಜೋಡಿಗೆ ಗೊತ್ತಿಲ್ಲದಂತೆ ವಿಡಿಯೋ ಮಾಡಿ ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಹರಿಯಬಿಟ್ಟಿರುವುದು ಸಾರ್ವಜನಕ ಸ್ಥಳಗಳಲ್ಲಿ ಚುಂಬಿಸುವುದಕ್ಕಿಂತಲೂ ಕೆಟ್ಟದಾಗಿದೆ ಎಂದು ಪ್ರತಿಕ್ರಿಯಿಸಿದ್ದಾರೆ.

ಭಾರತದಲ್ಲಿ ಇದನ್ನು ಸಾರ್ವಜನಿಕವಾಗಿ ಅಸಭ್ಯ ಎಂದು ಪರಿಗಣಿಸಲಾಗುತ್ತಿದೆ. ನಮಗೆ ಇದೂವರೆಗೂ ಶಾಲೆಯಲ್ಲಿ ಸೆಕ್ಸ್ ಬಗ್ಗೆ ಪಾಠ ಹೇಳಿಕೊಟ್ಟಿಲ್ಲ. ಬದಲಾಗಿ ಹಕ್ಕಿ, ಜೇಣು ನೋಣಗಳ ಬಗ್ಗೆ ಹೇಳಿಕೊಟ್ಟಿದ್ದಾರೆ. ಖಾಸಗಿಯಾಗಿ ಯಾರೂ ಏನು ಮಾಡಲು ಅವಕಾಶವಿದೆ. ಆದರೆ ಸಾರ್ವಜನಿಕವಾಗಿ ಈ ರೀತಿ ಮಾಡುವುದು ತಪ್ಪು ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

Comments are closed.