ಮನೋರಂಜನೆ

‘ಬೆಂಗಳೂರು 69’ ನಲ್ಲಿ ಗ್ಲಾಮರಸ್ ಆಗಿ ಕಾಣಿಸಿಕೊಂಡ ಅನಿತಾ ಭಟ್

Pinterest LinkedIn Tumblr


ಅನಿತಾ ಭಟ್ ಇತ್ತೀಚೆಗೆ ಯೋಗ ಮಾಡಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದರು. ಅಷ್ಟೇ ಅಲ್ಲದೆ ಈಗ ‘ಬೆಂಗಳೂರು 69’ ಸಿನಿಮಾ ಕೂಡ ಮಾಡುತ್ತಿದ್ದಾರೆ. ಈ ಚಿತ್ರದ ಶೂಟಿಂಗ್ ಮುಗಿದಿದೆ. ಪೋಸ್ಟ್ ಪ್ರೊಡಕ್ಷನ್ ಕೆಲಸಗಳೂ ಕೂಡ ಮುಗಿದಿವೆ.

ಹಲವು ತಿಂಗಳ ಹಿಂದೆಯೇ ಈ ಸಿನಿಮಾ ಸೆಟ್ಟೇರಿದ್ದರೂ ಕೂಡ ಇದರ ಬಗ್ಗೆ ಸ್ವಲ್ಪವೂ ಅಪ್‌ಡೇಟ್ಸ್ ಸಿಕ್ಕಿರಲಿಲ್ಲ. ಇತ್ತೀಚೆಗಷ್ಟೇ ಈ ಚಿತ್ರದ ಪೋಸ್ಟರ್ ಮತ್ತು ಟೈಟಲ್ ಬಿಡುಗಡೆ ಮಾಡಲಾಗಿತ್ತು. ಈ ಚಿತ್ರದಲ್ಲಿ ಅನಿತಾ ಭಟ್ ಜೊತೆಗೆ ಪವನ್ ಶೆಟ್ಟಿ ಕೂಡ ನಟಿಸುತ್ತಿದ್ದಾರೆ. ಅನಿತಾ ಭಟ್ ಈ ಚಿತ್ರದಲ್ಲಿ ಸಿಕ್ಕಾಪಟ್ಟೆ ಗ್ಲಾಮರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕ್ರಾಂತಿ ಚೈತನ್ಯ ಈ ಚಿತ್ರದ ನಿರ್ದೇಶಕ, ಇದು ಇವರ ಮೊದಲ ನಿರ್ದೇಶನದ ಚಿತ್ರ.

ಒಂದು ಹಾಡಿನಲ್ಲಿ ಮಾತ್ರ ಅನಿತಾ ಭಟ್ ಗ್ಲಾಮರಸ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ, ಇದೊಂದು ಸಸ್ಪೆನ್ಸ್ ಥ್ರಿಲ್ಲರ್ ಚಿತ್ರ. ಕಬಿನಿಯಲ್ಲಿ ಈ ಹಾಡಿನ ಚಿತ್ರೀಕರಣ ನಡೆದಿದೆ. ಸಿನಿಮಾದಲ್ಲಿ ಈ ಹಾಡು ಯಾಕೆ ಅನ್ನೋದು ಸಿನಿಮಾ ನೋಡಿಯೇ ತಿಳಿದುಕೊಳ್ಳಬೇಕಂತೆ. ಅನಿತಾ ಭಟ್ ಸ್ವಿಮ್ಮಿಂಗ್ ಡ್ರೆಸ್‌ ಹಾಕಿಕೊಂಡ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿತ್ತು. ಶ್ರೀಮಂತ ಹುಡುಗಿಯೊಬ್ಬಳನ್ನು ಇಬ್ಬರು ಹುಡುಗರು ಕಿಡ್ನ್ಯಾಪ್ ಮಾಡುತ್ತಾರೆ, ಮುಂದೇನಾಗುತ್ತದೆ? ಮುಂತಾದ ಪ್ರಶ್ನೆಗಳಿಗೆ ಈ ಸಿನಿಮಾ ಉತ್ತರ ನೀಡುತ್ತದೆ. ಕಿಡ್ನ್ಯಾಪ್ ಆದ ಹುಡುಗಿ ಪಾತ್ರದಲ್ಲಿ ಅನಿತಾ ಭಟ್ ಕಾಣಿಸಿಕೊಳ್ಳಲಿದ್ದಾರೆ.

ಈ ಸಿನಿಮಾದಲ್ಲಿ ಬಹುಭಾಷಾ ನಟ ಶಫಿ ಕಾಣಿಸಿಕೊಳ್ಳಲಿದ್ದಾರೆ. ಅಭಿನಯಕ್ಕೆ ಹೆಚ್ಚು ಒತ್ತು ನೀಡುವ ಪಾತ್ರ ಇಲ್ಲಿರೋದರಿಂದ ಈ ಸಿನಿಮಾ ಒಪ್ಪಿಕೊಂಡರಂತೆ ನಟಿ ಅನಿತಾ ಭಟ್. ಡಿಸೆಂಬರ್ ಅಥವಾ 2020ರ ಆರಂಭದಲ್ಲಿ ಈ ಸಿನಿಮಾ ತೆರೆಕಾಣುವ ಸಾಧ್ಯತೆ ಇದೆ.

Comments are closed.