ಮನೋರಂಜನೆ

ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ‘ಹಾಟ್’ ಉಡುಗೊರೆ ನೀಡಿದ ಇಲಿಯಾನಾ

Pinterest LinkedIn Tumblr


ಗೋವಾ ಚೆಲುವೆ ಇಲಿಯಾನಾ ಡಿಕ್ರೂಸ್ ಜನುಮ ದಿನವನ್ನು (ನವೆಂಬರ್ 1) ಕಲರ್‌ಫುಲ್ ಆಗಿ ಸೆಲೆಬ್ರೇಟ್ ಮಾಡಿದ್ದಾರೆ. ಮೂವತ್ತ ಮೂರನೇ ವರ್ಷಕ್ಕೆ ಅಡಿಯಿಟ್ಟಿದ್ದಾರೆ ಈ ಬೆಡಗಿ. ಆದರೆ ಹುಟ್ಟುಹಬ್ಬದ ಸೆಲೆಬ್ರೇಷನ್ ಒಂದು ದಿನ ಮುಂಚಿತವಾಗಿಯೇ ಆಚರಿಸಿಕೊಂಡು ಸಂಭ್ರಮಿಸಿದ್ದಾರೆ.

ಗುರುವಾರ ಹ್ಯಾಲೋವೀನ್ ಡೇ ಸಂದರ್ಭದಲ್ಲಿ ಭಯಂಕರವಾದ ಮೇಕಪ್‌ನಲ್ಲಿ ದರ್ಶನ ನೀಡಿದ್ದರು ಇಲಿಯಾನಾ. ಕಣ್ಣಿಗೆ ದಟ್ಟವಾಗಿ ಕಾಡಿಗೆ ಹಚ್ಚಿಕೊಂಡು ಕಪ್ಪು ಬಟ್ಟೆ ಧರಿಸಿ ದೆವ್ವದ ರೀತಿ ಕಾಣಿಸಿಕೊಂಡು ಅಭಿಮಾನಿಗಳನ್ನು ಬೆಚ್ಚಿ ಬೀಳಿಸಿದ್ದಾರೆ. ಆದರೆ ಈ ಮೇಕಪ್ ಅವರು ಹೀರೋಯಿನ್ ಆಗಿರುವ ‘ಪಾಗಲ್ ಪಂತಿ’ ಸಿನಿಮಾಗಾಗಿ ಎಂಬುದು ವಿಶೇಷ.

ನಾನು ಪ್ರೆಗ್ನೆಂಟ್‌ ಆಗಿಲ್ಲ ಎಂದ ಇಲಿಯಾನಾ

ಪಾಗಲ್ ಪಂತಿ ಪೋಸ್ಟರ್‌ನಲ್ಲಿ ಭಯಂಕರವಾಗಿ ಕಾಣಿಸಿದ್ದ ಇಲಿಯಾನಾ ತನ್ನ ಇನ್‌ಸ್ಟಾಗ್ರಾಮ್‌ನಲ್ಲಿ ಮಾತ್ರ ಅಭಿಮಾನಿಗಳನ್ನು ಹೃದಯ ಗೆದ್ದಿದ್ದಾರೆ. ತನ್ನ ಹುಟ್ಟುಹಬ್ಬಕ್ಕೂ ಮುಂಚೆ ಹಾಟ್ ಫೋಟೋ ಮೂಲಕ ಟ್ರೀಟ್ ನೀಡಿದ್ದಾರೆ.

ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದೆ: ಇಲಿಯಾನಾ

ಇದು ಅಂತಿಂತಹ ಟ್ರೀಟ್ ಅಲ್ಲ, ಗ್ಲಾಮರ್ ಟ್ರೀಟ್. ಬಿಕಿನಿಯಲ್ಲಿ ಸನ್ ಬಾತ್ ಮಾಡುತ್ತಾ ಸೆಲ್ಫಿ ವಿಡಿಯೋವನ್ನು ಇನ್‍ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಬಿಕಿನಿಯಲ್ಲಿ ಸಿಕ್ಕಾಪಟ್ಟೆ ಹಾಟ್ ಆಗಿ ಕಾಣಿಸಿಕೊಂಡು ಪಡ್ಡೆಗಳನ್ನು ಕೆಣಕಿದ್ದಾರೆ. ನೀಲಿ ಬಣ್ಣದ ಬಿಕಿನಿಯಲ್ಲಿ ಮಿಂಚಿದ್ದಾರೆ. ಈ ಪೋಸ್ಟ್‌ಗೆ ಈಗಾಗಲೆ 1.8 ಮಿಲಿಯನ್ ಲೈಕ್ಸ್ ಬಂದಿವೆ. ಕಾಮೆಂಟ್‌ಗಳಂತೂ ‘ಫೈರ್’ ಎಂದು ಬರುತ್ತಿವೆ.

ಇನ್ನು ಗುರುವಾರ ರಾತ್ರಿ ಫ್ರೆಂಡ್ಸ್ ಜತೆಗೆ ಪಾರ್ಟಿಯನ್ನು ಜೋರಾಗಿಯೇ ಸೆಲೆಬ್ರೇಟ್ ಮಾಡಿದ್ದಾರೆ. ತನ್ನ ಇನ್‍ಸ್ಟಾಗ್ರಾಮ್ ಸ್ಟೋರಿಯಲ್ಲಿ ತುಂಬಾ ಫೋಟೋಗಳು, ವಿಡಿಯೋಗಳನ್ನು ಪೋಸ್ಟ್ ಮಾಡಿದ್ದಾರೆ. ಫ್ರೆಂಡ್ಸ್ ಎಲ್ಲರೂ ಹ್ಯಾಲೋವೀನ್ ಮೂಡ್‌ನಲ್ಲಿರುವುದನ್ನು ಕಾಣಬಹುದು.

ಇನ್ನು ಇಲಿಯಾನಾ ಅಭಿನಯದ ಪಾಗಲ್ ಪಂತಿ ಸಿನಿಮಾ ನವೆಂಬರ್ 22ರಂದು ರಿಲೀಸ್ ಆಗುತ್ತಿದೆ. ಈ ಸಿನಿಮಾವನ್ನು ಅನೀಸ್ ಬಾಜ್ಮಿ ನಿರ್ದೇಶನ ಮಾಡಿದ್ದಾರೆ. ಈಗಾಗಲೆ ಟ್ರೇಲರ್ ರಿಲೀಸ್ ಆಗಿದೆ. ಸಾಲುಸಾಲು ಸಿನಿಮಾಗಳ ಫ್ಲಾಪ್‌ನಿಂದ ಕಂಗೆಟ್ಟಿರುವ ಇಲಿಯಾನಾ ಕರಿಯರ್ ಈ ಸಿನಿಮಾ ಮೂಲಕ ಮತ್ತೆ ಹೊಸ ತಿರುವು ಪಡೆಯಬಹುದು ಎಂದು ನಿರೀಕ್ಷಿಸಲಾಗಿದೆ.

Comments are closed.