ಮನೋರಂಜನೆ

ಕನ್ನಡ ಬಿಗ್ ಬಾಸ್ ನಲ್ಲಿ ಮೊದಲ ದಿನವೇ ಕಿಸ್ ರಾಮಾಯಣ!

Pinterest LinkedIn Tumblr

‘ಬಿಗ್​ ಬಾಸ್​’ ಸೀಸನ್​ ಏಳನೇ ಆವೃತ್ತಿ ಆರಂಭವಾಗಿದೆ. 18 ಸ್ಪರ್ಧಿಗಳು ಮನೆ ಸೇರಿದ್ದು, ದಿನ ಬಳಕೆ ವಸ್ತುಗಳನ್ನು ಪಡೆಯಲು ಮೊದಲ ದಿನ ಎಲ್ಲರೂ ಟಾಸ್ಕ್​ ಎದುರಿಸಿದ್ದಾರೆ. ನಟಿ ಭೂಮಿ ಶೆಟ್ಟಿ ಕ್ಯಾಪ್ಟನ್​ ಆಗಿ ನೇಮಕಗೊಂಡಿದ್ದಾರೆ. ಅಚ್ಚರಿ ಎಂದರೆ ಮೊದಲ ದಿನವೇ ಬಿಗ್​ ಬಾಸ್​ ಮನೆಯಲ್ಲಿ ಕಿಸ್​ ರಾಮಾಯಣ ನಡೆದಿದೆ! ಅಷ್ಟಕ್ಕೂ ಕಿಸ್​ ಕೊಟ್ಟವರು ಅಗ್ನಿಸಾಕ್ಷಿ ವಿಲನ್​ ಖ್ಯಾತಿಯ ಪ್ರಿಯಾಂಕಾ! ಅವರು ಕೊಟ್ಟ ಮುತ್ತನ್ನು ಪಡೆದವರಾರು ಎಂಬುದು ಮಾತ್ರ ಇನ್ನೂ ಪ್ರಶ್ನೆಯಾಗೇ ಉಳಿದಿದೆ!

ಅರೆ ಇದೇನು ವಿಚಿತ್ರ ಎಂದುಕೊಂಡಿರಾ? ಇದಕ್ಕೂ ಕಾರಣವಿದೆ. ಪ್ರಿಯಾಂಕಾ ಹಾಗೂ ಕುರಿ ಪ್ರತಾಪ್​ ಒಟ್ಟಿಗೆ ಇದ್ದರು. ಈ ವೇಳೆ ಪ್ರಿಯಾಂಕಾ ‘ಇಷ್ಟವಿಲ್ಲ ಎಂದಾದರೆ ಮುಖವನ್ನು ಮತ್ತೊಂದೆಡೆ ತಿರುಗು’ ಎಂದು ಕ್ಯಾಮರಾಗೆ ಅವಾಜ್​ ಹಾಕಿದ್ದಾರೆ. ‘ಏನು ಕ್ಯಾಮೆರಾಗೆ ಅವಾಜ್​ ಹಾಕ್ತೀರಾ’ ಎಂದು ಪ್ರಶ್ನಿಸಿದ್ದಾರೆ ಕುರಿ ಪ್ರತಾಪ್​.

ಆಗ ಕ್ಯಾಮರಾ ಬಳಿ ಬಂದ ಪ್ರಿಯಾಂಕಾ ಕ್ಯಾಮರಾಗೆ ಮುತ್ತಿಟ್ಟಿದ್ದಾರೆ. ಆಗ ಕುರಿ ಪ್ರತಾಪ್ ‘ಕ್ಯಾಮೆರಾ ಎದುರು ಕುಳಿತವರು ರಸಿಕರು’ ಎಂದು ಕಾಲೆಳೆಯುವ ಪ್ರಯತ್ನ ಮಾಡಿದ್ದಾರೆ. ಆಗ ಪ್ರಿಯಾಂಕಾ ಬಿಗ್​ಬಾಸ್​ ಶೋ ಮುಗಿದ ನಂತರ ಕ್ಯಾಮರಾ ಹಿಂದೆ ಕುಳಿತವರು ನನಗೊಮ್ಮೆ ಸಿಗಬೇಕು ಎಂದು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಸಾಮಾಜಿಕ ಜಾಲತಾಣದಲ್ಲಿ ಅನೇಕರು ಮೊದಲ ದಿನವೇ ಕಿಸ್​ ರಾಮಾಯಣ ನಡೆದಿದೆ ಎಂದು ನಕ್ಕಿದ್ದಾರೆ.

ಮೊದಲ ವಾರ ಗುರುಲಿಂಗ ಸ್ವಾಮೀಜಿ ಅವರು ನಾಮಿನೇಟ್​ ಆಗಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿರುವ ಅಭ್ಯರ್ಥಿಗಳು

ಕುರಿ ಪ್ರತಾಪ್
ಪ್ರಿಯಾಂಕಾ
ರವಿ ಬೆಳಗೆರಿ
ಚಂದನಾ ಅನಂತಕೃಷ್ಣ
ಸಂಗೀತ ನಿರ್ದೇಶಕ / ಗಾಯಕ ವಾಸುಕಿ ವೈಭವ್​
ನಟಿ ದೀಪಿಕಾ ದಾಸ್
ನಟ ಜೈ ಜಗದೀಶ್
ಗುರುಲಿಂಗ ಸ್ವಾಮೀಜಿ
ನಟಿ ಭೂಮಿ ಶೆಟ್ಟಿ
ಕಿಶನ್ ಬೆಳಗಲಿ
ನಟಿ ದುನಿಯಾ ರಶ್ಮಿ
ಚಂದನ್ ಆಚಾರ್
ಕಿರುತೆರೆ ನಟಿ ಸುಜಾತಾ
ರಾಜು ತಾಳಿಕೋಟೆ
ನಿರೂಪಕಿ ಚೈತ್ರಾ ವಾಸುದೇವ್
ಚೈತ್ರ ಕೊಟೂರು
ನಟ ಶೈನ್ ಶೆಟ್ಟಿ
ನಟ ಹರೀಶ್ ರಾಜ್

Comments are closed.