ಮನೋರಂಜನೆ

ಜೀವವನ್ನು ಪಣಕ್ಕಿಟ್ಟು ಬಾಲಿವುಡ್ ನಟ ಹೃತಿಕ್​ ರೋಷನ್ ಮಾಡಿದ್ದೇನು ಗೊತ್ತಾ..!

Pinterest LinkedIn Tumblr


ಹಾಲಿವುಡ್​ ರೇಂಜ್​ ಆ್ಯಕ್ಷನ್​ ಥ್ರಿಲ್ಲರ್​​ ವಾರ್​ ಬಾಕ್ಸಾಫೀಸ್​​​ನಲ್ಲಿ ಹೊಸ ದಾಖಲೆ ಬರೆದಿದೆ. ಕೋಟಿ ಕೋಟಿ ಕೊಳ್ಳೆ ಹೊಡೆದು, ಬ್ಲಾಕ್​ ಬಸ್ಟರ್​ ಹಿಟ್​ ಲಿಸ್ಟ್​ ಸೇರಿದೆ. ರಾ ಏಜೆಂಟ್​​ ಗುರು-ಶಿಷ್ಯರಾಗಿ ಹೃತಿಕ್​ ಮತ್ತು ಟೈಗರ್​ ಶ್ರಾಫ್​ ಅಬ್ಬರಿಸಿದ್ದಾರೆ.

ಇವರಿಬ್ಬರ ಪೈಪೋಟಿ ಪ್ರೇಕ್ಷಕರಿಗೆ ಸಖತ್​ ಮಜಾ ಕೊಡ್ತಿದೆ. ಸೋಲ್ಜರ್​ಗಳಾಗಿ ಇವರಿಬ್ಬರ ಫಿಜಿಕ್​​ ಎಲ್ಲರ ಹುಬ್ಬೇರಿಸಿದೆ. ಸಿಕ್ಸ್​​​ಪ್ಯಾಕ್​ ಹ್ಯಾಬ್ಸ್​​ನಲ್ಲಿ ಇಬ್ರು ಶರ್ಟ್​​ ಲೆಸ್ಸಾಗಿ ಹೊಡೆದಾಡಿ ಸಖತ್​ ಕಿಕ್​ ಕೊಡ್ತಿದ್ಧಾರೆ. ಕಬೀರ್​ ಪಾತ್ರಕ್ಕಾಗಿ ಹೃತಿಕ್​​ ರೋಷನ್​ ಟಾನ್ಸ್​​ಫರ್​ಮೇಷನ್​ ಅಂತೂ ಸಿಂಪ್ಲಿ ಸೂಪರ್ಬ್ ಆಗಿದೆ​​.

ಬಾಲಿವುಡ್​​ನ ಗ್ರೀಕ್​ ಗಾಡ್​ ಅಂತ್ಲೇ ಫೇಮಸ್​ ಆಗಿರೋ ಹೃತಿಕ್​ ರೋಷನ್​, ಫಿಟ್ನೆಸ್​​, ವರ್ಕೌಟ್​​​ ಬಗ್ಗೆ ದೂಸ್ರಾ ಮಾತಿಲ್ಲ. ಸೆಕ್ಸಿಯೆಸ್ಟ್ ಏಷ್ಯನ್ ಮ್ಯಾನ್​, ಹಾಟೆಸ್ಟ್​ ಮ್ಯಾನ್​ ಆನ್​ ಪ್ಲಾನೆಟ್​​ ಅನ್ನೋ ಬಿರುದುಗಳನ್ನು ಪಡ್ಕೊಂಡಿರೋ ಹೃತಿಕ್​​, ತಮ್ಮ ಸಿಕ್ಸ್​​ಪ್ಯಾಕ್​​​ ಟೋನ್ಡ್​​ ಬಾಡಿಯಿಂದ ಬಾಲಿವುಡ್​ನ ಬಲು ಆಕರ್ಷಕ ನಟ ಅಂತ್ಲೇ ​​ಗುರ್ತಿಸಿಕೊಂಡಿದ್ದಾರೆ. ಆದರೆ, ಸೂಪರ್​ 30 ಚಿತ್ರದ ಪಾತ್ರಕ್ಕಾಗಿ ಹೃತಿಕ್ ಕೊಂಚ ತೂಕ ಹೆಚ್ಚಿಕೊಂಡಿದರು. ಇದೇ ಹೃತಿಕ್,​​ ವಾರ್​ ಸಿನಿಮಾದಲ್ಲಿ ಕಬೀರ್​ ಪಾತ್ರ ಮಾಡ್ಬೇಕು ಅಂದಾಗ ತೂಕ ಇಳಿಸಿಕೊಳ್ಳೋದು ಅನಿವಾರ್ಯವಾಗಿತ್ತು.

ಸಿಕ್ಸ್​​ ಪ್ಯಾಕ್​ ಬಾಡಿ ಬಿಲ್ಡ್​ ಮಾಡೋದು ಅಷ್ಟು ಸುಲಭದ ಮಾತಲ್ಲ. ಟೈಗರ್​​ ಶ್ರಾಫ್​​ ತಮ್ಮ ಟೋನ್ಡ್​ ಬಾಡಿಯಿಂದ್ಲೇ ಫೇಮಸ್​. ವಾರ್​ ಸಿನಿಮಾದಲ್ಲಿ ನಟಿಸೋ ಹೊತ್ತಿಗೆ ಹೃತಿಕ್​​ ಸೊಂಟದ ಸುತ್ತಾ ಇದ್ದ ಬೊಜ್ಜನ್ನು ಕರಗಿಸಲೇಬೇಕಿತ್ತು. ಅದಕ್ಕಾಗಿ ಹಗಲು ರಾತ್ರಿ ಜಿಮ್​ನಲ್ಲಿ ಬೆವರಿಳಿಸಿದ್ದಾರೆ. ಜಿಮ್​ ಟ್ರೈನರ್​​ನ ಮನಸ್ಸಿನಲ್ಲೇ ಶಪಿಸುತ್ತಾ ಪರ್ಫೆಕ್ಟ್​ ಬಾಡಿ ಹೊಂದಲು ಹೋರಾಟ ನಡೆಸಿದ್ದಾರೆ.

ಹೃತಿಕ್​ ಜಿಮ್​ನಲ್ಲಿ ವರ್ಕ್​ಔಟ್​ ಮಾಡಿದ್ಧಾರೆ. ತಿಂಗಳುಗಟ್ಟಲೇ ಜಿಮ್​ ವರ್ಕ್​​ಔಟ್​, ಡ್ಯಾನ್ಸ್​ ಅಂತ ದೇಹವನ್ನು ವಿಧವಿಧವಾಗಿ ದಂಡಿಸಿದ್ದಾರೆ. ಒಂದು ವರ್ಷ ಮಾಡಬೇಕಾದ ಕಸರತ್ತನ್ನ ವಾರ್​ ಚಿತ್ರಕ್ಕಾಗಿ ಒಂದೆರಡು ತಿಂಗಳಲ್ಲಿ ಮಾಡಿ ಮುಗಿಸಿದ್ದಾರೆ. ಅದರ ಪ್ರತಿಫಲವನ್ನೇ ಈಗ ಪ್ರೇಕ್ಷಕರು ತೆರೆಮೇಲೆ ನೋಡ್ತಿದ್ದಾರೆ. ಅದಕ್ಕಾಗಿ ನಡೆಸಿದ ಇಂಟೆನ್ಸ್​​​ ವರ್ಕ್​ಔಟ್​​​ ಸೆಷನ್​ ವಿಡಿಯೋವನ್ನು ಸ್ವತ: ಹೃತಿಕ್​ ರೋಷನ್​ ಶೇರ್​ ಮಾಡಿದ್ದಾರೆ.

ಹೃತಿಕ್​ ರೋಷನ್​ ದೇಹ ಕಟ್ಟೋದಕ್ಕೆ ತಂದೆ ರಾಕೇಶ್​ ರೋಷನ್​ ಸಹಾಯ ಮಾಡಿದ್ದಾರೆ. ಅಡಿಗಡಿಗೂ ಜೊತೆಗಿದ್ದು, ಪರ್ಫೆಕ್ಟ್​​ ಟೋನ್ಡ್​ ಬಾಡಿ ಶೇಪ್​ ಬರುವಂತೆ ನೋಡಿಕೊಂಡಿದ್ದಾರೆ. ಸದ್ಯ ಹೃತಿಕ್​ ರೋಷನ್​ ಟಾನ್ಸ್​ಫರ್​ಮೇಷನ್​ ವೀಡಿಯೋ ಸಿಕ್ಕಾಪಟ್ಟೆ ವೈರಲ್ಲಾಗಿದೆ. ರಾ ಏಜೆಂಟ್​ ಕಬೀರ್​ ಮತ್ತೊಂದು ಮುಖವನ್ನ ನೋಡಿ ಫಿದಾ ಆಗಿದ್ದಾರೆ.

Comments are closed.