
ಮುಂಬೈ: ಸ್ಯಾಂಡಲ್ವುಡ್ ಯಶಸ್ವಿ ಚಿತ್ರ ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆ.ಜಿ.ಎಫ್ ಚಾಪ್ಟರ್ 1ರ ಹಿಂದಿ ಅವತರಣಿಕೆ “ಗಲಿ ಗಲಿ” ಐಟಂ ಸಾಂಗ್ಗೆ ಸೊಂಟ ಬಳುಕಿಸಿದ್ದ ಬಾಲಿವುಡ್ ನಟಿ ಮೌನಿ ರಾಯ್ ಸೆ.28ರಂದು 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಬರ್ತ್ಡೇ ಆಚರಣೆಗೆಂದೆ ಥಾಯ್ಲೆಂಡ್ಗೆ ಹಾರಿರುವ ಮೌನಿ ರಾಯ್ ಸಖತ್ ಎಂಜಾಯ್ ಮಾಡುತ್ತಿದ್ದು, ಸೆರೆಹಿಡಿದ ಒಂದಷ್ಟು ಫೋಟೊಗಳನ್ನು ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಮೌನಿ ರಾಯ್ ಶೇರ್ ಮಾಡಿರುವ ಬಿಕಿನಿ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮೌನಿ ಲುಕ್ಗೆ ಫಿದಾ ಆಗಿದ್ದಾರೆ. ಥಾಯ್ಲೆಂಡ್ನ ಸೊನೆವಾ ಕಿರಿಯಲ್ಲಿರುವ ನಾರ್ಥ್ ಬೀಚ್ನಲ್ಲಿ ಪಿಂಕ್ ಬಣ್ಣದ ಬಿಕಿನಿ ತೊಟ್ಟು ಮೌನಿ ಕ್ಯಾಮರಾಗೆ ಪೋಸ್ ನೀಡಿದ್ದಾರೆ.
ಇದೇ ವೇಳೆ ಹುಟ್ಟುಹಬ್ಬಕ್ಕೆ ಶುಭಕೋರಿದ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿರುವ ಮೌನಿ, ನಿಮ್ಮ ಬರ್ತ್ಡೇ ಸಂದೇಶ ಓದಿ ಕಣ್ಣೀರಿನ ಜತೆ ಆನಂದವಾಯಿತು. ನಿಮಗೆ ಹೇಗೆ ಕೃತಜ್ಞತೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಎಲ್ಲರಿಗೂ ಧನ್ಯವಾದಗಳು ಎಂದು ತಿಳಿಸಿದ್ದಾರೆ.
ಮೌನಿ ರಾಯ್ ಟೆಲಿವಿಷನ್ನ ನಾಗಿನ್ ಶೋ ಮೂಲಕ ಬಾಲಿವುಡ್ನಲ್ಲಿ ಪ್ರಖ್ಯಾತಿ ಪಡೆದರು. ಅಕ್ಷಯ್ ಕುಮಾರ್ ಅವರ ಗೋಲ್ಡ್ ಚಿತ್ರದ ಮೂಲಕ ಸಿನಿ ಕ್ಷೇತ್ರಕ್ಕೆ ಪ್ರವೇಶ ಪಡೆದರು. ಸದ್ಯ ಮೇಡ್ ಇನ್ ಚೀನಾ ಚಿತ್ರದಲ್ಲಿ ಅಭಿನಯಿಸಿರುವ ಮೌನಿ ಚಿತ್ರ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ.
Comments are closed.