ಅಂತರಾಷ್ಟ್ರೀಯ

ಸೌದಿ ಅರೇಬಿಯಾದ ರಾಜನ ಅಂಗರಕ್ಷನ ಗುಂಡಿಟ್ಟು ಹತ್ಯೆ

Pinterest LinkedIn Tumblr


ರಿಯಾದ್‌: ಸೌದಿ ಅರೇಬಿಯಾದ ಅರಸ ಸಲ್ಮಾನ್‌ ಅವರ ಅಂಗರಕ್ಷಕ, ಜ| ಅಬ್ದುಲ್‌ ಅಜೀಜ್‌ ಅಲ್‌ ಫಾಗ್ಮನ್‌ ಎಂಬಾತನನ್ನು ಗುಂಡಿಟ್ಟು ಹತ್ಯೆಗೈಯಲಾಗಿದೆ.

ಅಚ್ಚರಿಯೆಂದರೆ ಅಬ್ದುಲ್‌ ಅವರ ಸ್ನೇಹಿತ ಮಮದೂ ಬಿನ್‌ ಮೆಶಾಲ್‌ ಅಲ್‌ ಅಲಿ ಎಂಬಾತನೇ ಈ ಕೆಲಸ ಮಾಡಿದ್ದಾಗಿ ಹೇಳಲಾಗಿದೆ.

ಶನಿವಾರ ಇಬ್ಬರ ಮಧ್ಯೆ ಜಗಳವಾಗಿದ್ದು ಜೆದ್ದಾದ ಮನೆಗೆ ಹೋದ ಅಲಿ ಗನ್‌ ತೆಗೆದುಕೊಂಡು ಬಂದು ಗುಂಡಿಕ್ಕಿದ್ದಾಗಿ ಹೇಳಲಾಗಿದೆ. ಅಬ್ದುಲ್‌ ಅವರನ್ನು ಕೂಡಲೇ ಆಸ್ಪತ್ರೆಗೆ ಸೇರಿಸಲಾಯಿತಾದರೂ ತೀವ್ರ ಗಾಯದಿಂದಾಗಿ ಅವರು ನಿಧನರಾಗಿದ್ದಾರೆ.

ಅಬ್ದುಲ್‌ ಅವರು ಅರಸನಿಗೆ ತೀವ್ರ ಆಪ್ತನಾಗಿದ್ದು, ಮಾಜಿ ಅರಸ ಅಬ್ದುಲ್ಲಾ ಅವರಿಗೂ ನಿಕಟವರ್ತಿ ಮತ್ತು ಅಂಗರಕ್ಷಕನಾಗಿದ್ದರು.

Comments are closed.