ಮನೋರಂಜನೆ

ಇದು 90ರ ದಶಕದ ಹೈಸ್ಕೂಲು ಪ್ರೇಮದ ‘ಗಂಟುಮೂಟೆ’!

Pinterest LinkedIn Tumblr


ಬೆಂಗಳೂರು: ಕನ್ನಡ ಚಿತ್ರರಂಗದಲ್ಲಿ ಇದೀಗ ಚಾಲ್ತಿಯಲ್ಲಿರುವ ಹೊಸಾ ಅಲೆಯ ಚಿತ್ರಗಳ ಸಾಲಿಗೆ ಸೇರ್ಪಡೆಯಾಗುವಂಥಾ ಗಂಟುಮೂಟೆಯೀಗ ಎಲ್ಲೆಡೆ ಸದ್ದು ಮಾಡುತ್ತಿದೆ. ಈಗಾಗಲೇ ಹೈಸ್ಕೂಲು ಪ್ರೇಮದ, ಹದಿಹರೆಯದ ಆವೇಗದ ಕಥೆಯ ಸುಳಿವಿನೊಂದಿಗೆ ಈ ಚಿತ್ರ ಜೋರಾಗಿಯೇ ಸದ್ದು ಮಾಡುತ್ತಿದೆ. ಇದೀಗ ರೂಪಾ ರಾವ್ ನಿರ್ದೇಶನ ಮಾಡಿರೋ ‘ಗಂಟುಮೂಟೆ’ಯ ಟ್ರೇಲರ್ ಬಿಡುಗಡೆಯಾಗಿದೆ.

ಸಾಮಾನ್ಯವಾಗಿ ಪ್ರೇಮ ಕಥೆಗಳು ಹುಡುಗಕನ ದೃಷ್ಟಿಕೋನದಿಂದಲೇ ಬಿಚ್ಚಿಕೊಳ್ಳುತ್ತವೆ. ಆದರೆ ಹದಿಹರೆಯದ ಪುಳಕ, ತಲ್ಲಣಗಳ ಕಥೆ ಹೊಂದಿರೋ ಗಂಟುಮೂಟೆಯ ಕಥೆ ಹುಡುಗಿಯೊಬ್ಬಳ ಬಿಂದುವಿನಿಂದ ತೆರೆದುಕೊಳ್ಳುತ್ತದೆ. ನಿರ್ದೇಶಕಿ ರೂಪಾ ರಾವ್ ಈ ಹಿಂದೆಯೇ ಇಂಥಾ ಹಿಂಟ್ ಕೊಟ್ಟಿದ್ದರು. ಈ ಟ್ರೇಲರ್ ಮೂಲಕ ಅದು ಪರಿಣಾಮಕಾರಿಯಾಗಿಯೇ ಜಾಹೀರಾಗಿದೆ. ತುಸು ಬೋಲ್ಡ್ ಆಗಿಯೇ ಹೆಣ್ಣೊಬ್ಬಳ ಕೇಂದ್ರದಿಂದ ಪ್ರೇಮಕಥಾನಕದ ಗುಟ್ಟು ಬಿಟ್ಟುಕೊಡುವಂತಿರೋ ಈ ಸಿನಿಮಾದ ಟ್ರೇಲರ್ ಪರಿಣಾಮಕಾರಿಯಾದ ಹಿಒನ್ನೆಲೆ ಧ್ವನಿ, ಅದರಲ್ಲಿ ಕೇಳಿ ಬಂದಿರೋ ವಿಚಾರಗಳು ಮತ್ತು ಅದಕ್ಕೆ ಪೂರಕವಾದ ದೃಷ್ಯಾವಳಿಗಳಿಂದಲೇ ಭರವಸೆ ಮೂಡಿಸಿದೆ.

ಗಂಟುಮೂಟೆ ರೂಪಾ ರಾವ್ ನಿರ್ದೇಶನದಲ್ಲಿ ಮೂಡಿ ಬಂದಿರೋ ಮೊದಲ ಚಿತ್ರ. ಈಗಾಗಲೇ ಹಲವಾರು ವೆಬ್ ಸೀರೀಸ್ ಮೂಲಕ ಬೇರೆ ಭಾಷೆಗಳಲ್ಲಿಯೂ ಹೆಸರು ಮಾಡಿರೋ ಅವರೀಗ ಈ ಚಿತ್ರದ ಮೂಲಕ ಹೈಸ್ಕೂಲು ಮನೋಲೋಕದ ಭಿನ್ನ ಪದರುಗಳನ್ನು ಪ್ರೇಕ್ಷಕರ ಮುಂದೆ ಅನಾವರಣಗೊಳಿಸಲು ಮುಂದಾಗಿದ್ದಾರೆ. ಈಗ ಬಂದಿರೋ ಟ್ರೇಲರ್ ಈ ಕಥೆ ಬೇರೆಯದ್ದೇ ಜಾಡಿನದ್ದೆಂಬುದನ್ನು ಜಾಹೀರು ಮಾಡುವಂತಿದೆ. ಈಗಾಗಲೇ ಟಂತಾರಾಷ್ಟ್ರೀಯ ಮಟ್ಟದಲ್ಲಿಯೂ ಗುರುತು ಮೂಡಿಸಿ ಟಾಕ್ ಕ್ರಿಯೇಟ್ ಮಾಡಿರೋ ಗಂಟುಮೂಟೆಯೀಗ ಟ್ರೇಲರ್ ಮೂಲಕ ನಿರ್ಣಾಯಕವಾಗಿಯೇ ಸದ್ದು ಮಾಡುತ್ತಿದೆ

Comments are closed.