ಅಂತರಾಷ್ಟ್ರೀಯ

ವಿಶ್ವಸಂಸ್ಥೆಯಲ್ಲಿ ಸ್ವಾಮಿ ವಿವೇಕಾನಂದರ ಶಾಂತಿ ಸಂದೇಶ ಸಾರಿದ ಮೋದಿ

Pinterest LinkedIn Tumblr


ನ್ಯೂಯಾರ್ಕ್​: ಭಾರತ ಜಗತ್ತಿನ ಅತಿ ದೊಡ್ಡ ಸ್ವಚ್ಛ ಕಾರ್ಯಕ್ರಮವನ್ನು ಐದು ತಿಂಗಳಲ್ಲಿ ಪೂರ್ಣಗೊಳಿಸಿದೆ. ಮತ್ತು 11 ಕೋಟಿ ಶೌಚಾಲಯಗಳನ್ನು ನಿರ್ಮಿಸಿದೆ ಎಂದು ಪ್ರಧಾನಿ ಮೋದಿ ಹೇಳಿದರು.

ವಿಶ್ವಸಂಸ್ಥೆಯ 74ನೇ ಸಾಮಾನ್ಯ ಸಭೆಯಲ್ಲಿ ಪಾಲ್ಗೊಂಡು, ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಸಬ್​ ಕಾ ಸಾಥ್​ ಸಬ್​ ಕಾ ವಿಕಾಸ್​ ಘೋಷಣೆ ಮೊಳಗಿಸಿದರು. ಇದರಿಂದಲೇ ಸರ್ಕಾರ ಸ್ಪೂರ್ತಿಗೊಂಡಿದೆ. ಜನರ ಕಲ್ಯಾಣದ ಜೊತೆಗೆ ಜನರ ಪಾಲ್ಗೊಳ್ಳುವಿಕೆ ನಮ್ಮ ಉದ್ದೇಶ ಎಂದು ಹೇಳಿದರು.

ಮುಂದಿನ ಐದು ವರ್ಷಗಳಲ್ಲಿ ನಾವು 15 ಕೋಟಿ ಜನರಿಗೆ ನೀರಿನ ಸಂಪರ್ಕ ನೀಡಲಿದ್ದೇವೆ. 1.15 ಲಕ್ಷ ಕಿ.ಮೀ. ಹೆಚ್ಚುವರಿ ರಸ್ತೆಯನ್ನು ನಿರ್ಮಿಸಲಿದ್ದೇವೆ. 2022ರಲ್ಲಿ ನಾವು 75ನೇ ಸ್ವಾತಂತ್ರ್ಯೋತ್ಸವ ಪೂರ್ಣಗೊಳಿಸಲಿದ್ದೇವೆ. ಈ ಅವಧಿಯೊಳಗೆ ನಾವು ಬಡ ಜನರಿಗಾಗಿ 2 ಕೋಟಿಗೂ ಅಧಿಕ ಮನೆಗಳನ್ನು ನಿರ್ಮಿಸಲಿದ್ದೇವೆ. 2025ರೊಳಗೆ ಭಾರತ ಕ್ಷಯ ರೋಗದಿಂದ ಮುಕ್ತಿ ಹೊಂದುವ ಉದ್ದೇಶವನ್ನು ಹೊಂದಿದ್ದೇವೆ ಎಂದು ಹೇಳಿದರು.

ನಾನು ಇಲ್ಲಿಗೆ ಬರುವಾಗ ವಿಶ್ವಸಂಸ್ಥೆಯ ಗೋಡೆಗಳಲ್ಲಿ ಬರೆದಿದ್ದ ಸಣ್ಣ ಪ್ಲಾಸ್ಟಿಕ್​ ತುಂಡನ್ನು ಬಳಸುವುದಿಲ್ಲ ಬರೆಹವನ್ನು ಓದಿದೆ. ನಾನು ಇಲ್ಲಿ ಎಲ್ಲರ ಗಮನಕ್ಕೆ ತರಲು ಇಚ್ಛಿಸುತ್ತೇನೆ, ಭಾರತದಲ್ಲಿ ಪ್ಲಾಸ್ಟಿಕ್​ ಬಳಸದಂತೆ ಬಹುದೊಡ್ಡ ಅಭಿಯಾನವನ್ನೇ ಮಾಡಲಾಗುತ್ತಿದೆ ಎಂದು ಮೋದಿ ಹೇಳಿದರು.

ಹವಾಮಾನ ಬದಲಾವಣೆ ವಿರುದ್ಧ ಹೋರಾಡುತ್ತಿರುವ ದೇಶಗಳಲ್ಲಿ ಭಾರತ ಕೂಡ ಪ್ರಮುಖ ದೇಶವಾಗಿದೆ. ನಮ್ಮ ಸರ್ಕಾರ ಹವಾಮಾನ ಬದಲಾವಣೆಗೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದರು.

ಜಗತ್ತಿಗೆ ಬೆದರಿಕೆ ಒಡ್ಡಿರುವ ಭಯೋತ್ಪಾದನೆ ನಿಗ್ರಹಕ್ಕೆ ಇಡೀ ಜಗತ್ತು ಒಗ್ಗಟ್ಟಾಗಿ ಹೋರಾಡಬೇಕಿರುವುದು ಇಂದಿನ ತುರ್ತಾಗಿದೆ. ವಿಶ್ವಸಂಸ್ಥೆಯ ಶಾಂತಿ ಕಾಪಾಡಲು ಭಾರತ ಎಲ್ಲ ರೀತಿಯ ಸಹಕಾರ ನೀಡುತ್ತದೆ ಮತ್ತು ಭಯೋತ್ಪಾದನೆ ವಿರುದ್ಧ ಹೋರಾಡುತ್ತದೆ ಎಂದು ಅವರು, ಭಾರತ ಜಗತ್ತಿಗೆ ಬುದ್ಧನನ್ನು ನೀಡಿದೆ, ಯುದ್ಧವನ್ನಲ್ಲ ಎಂದು ಶಾಂತಿ ಮಂತ್ರ ಜಪಿಸಿದರು. ಬಳಿಕ ಸ್ವಾಮಿ ವಿವೇಕಾನಂದ ಅವರನ್ನು ನೆನಪಿಸಿಕೊಂಡ ಅವರು, ವಿವೇಕಾನಂದ ಅವರು ಅಮೆರಿಕದ ಚಿಕಾಗೋ ಸಮ್ಮೇಳನದಲ್ಲಿ ಭಾಗವಹಿಸಿ, ಇಡೀ ವಿಶ್ವಕ್ಕೆ ಸಾಮರಸ್ಯ ಮತ್ತು ಶಾಂತಿಯನ್ನು ಸಾರಿದರು. ನಮ್ಮ ಮಂತ್ರ ಕೂಡ ಸಾಮರಸ್ಯ ಮತ್ತು ಶಾಂತಿ ಎಂದು ಹೇಳಿದರು.

Comments are closed.