ಮನೋರಂಜನೆ

ನಟ ಅನಿಲ್ ಕಪೂರ್ ಚಿರಯುವಕನಂತೆ ಕಾಣುತ್ತಿರುವುದರ ಹಿಂದಿನ ರಹಸ್ಯ ಬಯಲು !

Pinterest LinkedIn Tumblr

ಬಾಲಿವುಡ್ ನಟ ಅನಿಲ್ ಕಪೂರ್ ಈಗಲೂ ಚಿರಯುವಕನಂತೆ ಕಾಣುತ್ತಿದ್ದು, ಇದರ ಹಿಂದಿನ ರಹಸ್ಯ ಕೊನೆಗೂ ಅವರು ಬಯಲು ಮಾಡಿದ್ದಾರೆ.

ದಕ್ಷಿಣ ಭಾರತದ ತಿಂಡಿತಿನಸೆಂದರೆ ನನಗೆ ಬಹಳ ಇಷ್ಟ. ಅದನ್ನು ಹಲವು ವರ್ಷಗಳಿಂದ ತಿನ್ನುತ್ತಿದ್ದು, ಇದೇ ನನ್ನ ಆಹಾರದ ಗುಟ್ಟಾಗಿದೆ. ಇಡ್ಲಿ, ಸಾಂಬಾರ್, ಚಟ್ನಿ, ದೋಸಾ, ವಿವಿಧ ಬಗೆಯ ಉಪ್ಪಿನ ಕಾಯಿಯನ್ನು ಅನ್ನ, ರಸಂ, ಮೊಸರಿನೊಟ್ಟಿಗೆ ಸೇವಿಸುತ್ತಿದ್ದು ಇದೇ ನನ್ನನ್ನು ಚಿರ ಯುವಕನಂತೆ ಕಾಣುವಂತೆ ಮಾಡಿದೆ ಎಂದು 62 ವರ್ಷ ವಯಸ್ಸಿನ ಅನಿಲ್ ಕಪೂರ್ ಹೇಳಿದ್ದಾರೆ.

ದಕ್ಷಿಣ ಭಾರತದ ತಿಂಡಿ-ತಿನಸು, ಆಹಾರ ಆರೋಗ್ಯದ ದೃಷ್ಟಿಯಿಂದ ತುಂಬಾ ಒಳ್ಳೆಯದು. ಅನಾರೋಗ್ಯಕ್ಕೀಡಾದಾಗ ಇಡ್ಲಿ ತಿಂದರೆ ದೇಹಕ್ಕೆ ಉತ್ತಮ. ಆದ್ದರಿಂದಲೇ ನನಗೆ ದಕ್ಷಿಣ ಭಾರತದ ತಿಂಡಿ-ತಿನಸು ಇಷ್ಟಪಡುತ್ತೇನೆ ಎಂದು ಹೇಳಿದ್ದಾರೆ.

Comments are closed.