ಮನೋರಂಜನೆ

ಬಹುಭಾಷಾ ನಟಿ ಇಲಿಯಾನಾಗಿದೆಯಂತೆ ವಿಚಿತ್ರ ಕಾಯಿಲೆ…!

Pinterest LinkedIn Tumblr


ತೆಲುಗು, ಹಿಂದಿ ಸಿನಿಮಾಗಳಲ್ಲಿ ಸಿಕ್ಕಾಪಟ್ಟೆ ಹೆಸರು ಮಾಡಿ, ತನ್ನ ತಳುಕು ಬಳುಕಿನ ಮೈಮಾಟದಿಂದ ಪಡ್ಡೆ ಹುಡುಗರ ನಿದ್ದೆ ಗೆಡಿಸಿರುವ ಬಹುಭಾಷಾ ನಟಿ ಇಲಿಯಾನಾ ಡಿಕ್ರೂಜ್ ಳ ಆರೋಗ್ಯದಲ್ಲಿ ಏರು ಪೇರುಂಟಾಗಿದೆ! ಹೌದು ಈ ರೀತಿಯ ಶಾಕಿಂಗ್ ಸುದ್ದಿಯನ್ನ ಸ್ವತಃ ಇಲಿಯಾನಾ ಟ್ವೀಟ್​ ಮಾಡುವುದರ ಮೂಲಕ ತನಗಿರುವ ಗಂಭೀರ ಕಾಯಿಲೆ ಬಗ್ಗೆ ಬಹಿರಂಗಪಡಿಸಿದ್ದಾರೆ.

ಇತ್ತೀಚೆಗೆ ಲಂಡನ್ ಮೂಲದ ಫೋಟೋಗ್ರಾಫರ್​ ಆಂಡ್ಯ್ರೂ ನೀಬೋನ್​ ಎನ್ನವವನ ಜೊತೆ ಬ್ರೇಕ್ ಅಪ್ ಮಾಡಿಕೊಂಡ ಸಖತ್ ಸುದ್ದಿಯಾಗಿದ್ದ ಮುದ್ದು ಮೊಗದ ಚೆಲುವೆ ಇಲಿಯಾನ, ಇದೀಗ ತನಿಗಿರುವ ಒಂದು ಗಂಭೀರ ಕಾಯಿಲೆ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಒಂದನ್ನು ಅಪ್ ಲೋಡ್ ಮಾಡುವುದರ ಮೂಲಕ ಮತ್ತೆ ಸಖತ್ ಸುದ್ದಿಯಾಗಿದ್ದಾರೆ.

ಬಿಂಕದ ಸಿಂಗಾರಿ ಇಲಿಯಾನಾಳ ಟ್ವೀಟ್ ಇದೀಗ ಸಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಇಷ್ಟಕ್ಕೂ ಮಾದಕ ನಟಿ ಇಲಿಯಾನಾಳಿಗಿರುವ ಆ ಗಂಭೀರ ಕಾಯಿಲೆ ಏನು ಗೊತ್ತಾ? ಅದು ಮತ್ತೇನು ಅಲ್ಲ ನಿದ್ದೆಯಲ್ಲಿ ನಡೆದಾಡುವ ಕಾಯಿಲೆಯಂತೆ!.

ಹೌದು ಈ ರೀತಿಯ ಶಾಕಿಂಗ್ ಸುದ್ದಿಯನ್ನು ಸೌಂದರ್ಯದ ಕಣಜವಾಗಿರುವ ಇಲಿಯಾನ ತಿಳಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಇಲಿಯಾನ ‘ನನಗೆ ನಿದ್ದೆಯಲ್ಲಿ ನಡೆದಾಡುವ ಕಾಯಿಲೆ ಇದೆ ಎಂದು ಒಂದು ಒಪ್ಪಿಕೊಂಡಿದ್ದೇನೆ. ಇದರಿಂದಾಗಿ ಬೆಳಿಗ್ಗೆ ಎದ್ದಾಗ ನನ್ನ ಕಾಲಿನಲ್ಲಿ ಊತ ಕಾಣಿಸಿಕೊಳ್ಳುವುದರೊಂದಿಗೆ ಕಾಲಿಗೆ ಗಾಯಗಳಾಗಿರುತ್ತವೆ’ ಎಂದು ಬರೆದುಕೊಂಡಿದ್ದಾರೆ.

ತಮಗಿರುವ ಸಮಸ್ಯೆ ಬಗ್ಗೆ ಇಲಿಯಾನಾ ಬಹಿರಂಗವಾಗಿ ಬರೆದುಕೊಂಡಿರುವುದಕ್ಕೆ ಕೆಲ ಅಭಿಮಾನಿಗಳು ಚಿಂತೆಗೀಡಾಗಿದ್ದಾರೆ. ಮತ್ತೆ ಕೆಲವರು ಅವರಿಗೆ ವೈದ್ಯರ ಬಳಿ ಹೋಗುಂತೆ ಹಾಗೂ ಅವರ ಕೋಣೆಯೊಳಗೆ ಕ್ಯಾಮೆರಾ ಹಾಕಿಸಿಕೊಳ್ಳುವಂತೆ ಹಾಸ್ಯಾಸ್ಪದವಾಗಿ ಸಲಹೆ ನೀಡಿದ್ದಾರೆ.

Comments are closed.