ಮನೋರಂಜನೆ

ಸುದೀಪ್ ಅಭಿನಯದ ಪೈಲ್ವಾನ್​ಗೆ ಏನಂದ್ರು ಪ್ರೇಕ್ಷಕರು..?

Pinterest LinkedIn Tumblr


ಬೆಂಗಳೂರು: ನಿರೀಕ್ಷಿಸಿದಂತೆ ಪೈಲ್ವಾನ್​ ಸಿನಿಮಾ ದೊಡ್ಡ ಮಟ್ಟದಲ್ಲಿ ತೆರೆಗಪ್ಪಳಿಸಿದೆ. ಭರ್ಜರಿ ರೆಸ್ಪಾನ್ಸ್​ ಗಿಟ್ಟಿಸಿಕೊಂಡು ಗ್ರ್ಯಾಂಡ್​ ಓಪನಿಂಗ್​ ಪಡ್ಕೊಂಡಿದೆ. ಮುಂಜಾನೆಯಿಂದ್ಲೇ ಹಲವೆಡೆ ಫಸ್ಟ್​ ಶೋ ಶುರುವಾಗಿದೆ. ಪರಭಾಷೆಗಳಲ್ಲೂ ದೇಶ ವಿದೇಶದಲ್ಲಿ ಪೈಲ್ವಾನ್​ ಸಿನಿಮಾ ತೆರೆಕಂಡಿದೆ.

ಪೈಲ್ವಾನ್​ ಹಿಂದಿ ವರ್ಷನ್​ ಒಂದು ದಿನ ತಡವಾಗಿ ರಿಲೀಸ್​ ಆಗ್ತಿದ್ದು, ಇನ್ನುಳಿದಂತೆ ವಿಶ್ವದಾದ್ಯಂತ ಪೈಲ್ವಾನ್​ ಸಿನಿಮಾ ಬಿಡುಗಡೆಯಾಗಿದೆ. ಬೆಳಗಿನ ಜಾವ 5.30ಕ್ಕೆ ಹಲವೆಡೆ ಫಸ್ಟ್ ಶೋ ಶುರುವಾಯ್ತು. ಆನ್​ಲೈನ್​ನಲ್ಲಿ ಟಿಕೆಟ್​ ಬುಕ್​ ಮಾಡಿಕೊಂಡಿದ್ದ ಫ್ಯಾನ್ಸ್​​ ಸೂರ್ಯ ಹುಟ್ಟೋಕ್ಕು ಮೊದ್ಲೆ ಥಿಯೇಟರ್​ ಅಂಗಳದಲ್ಲಿ ಜಮಾಯಿಸಿದರು. ಪಟಾಕಿ ಹೊಡೆದು ಜೈಕಾರ ಹಾಕಿ ಪೈಲ್ವಾನ್​ಗೆ ಭವ್ಯ ಸ್ವಾಗತ ಕೋರಿದರು.

ಮೊದಲ ದಿನ ಪೈಲ್ವಾನ್​ ಕನ್ನಡ ವರ್ಷನ್ 610 ಅಧಿಕ ಶೋಗಳು ಪ್ರದರ್ಶನ ಕಾಣ್ತಿದ್ದು, 60ಕ್ಕೂ ಅಧಿಕ ಅರ್ಲಿ ಮಾರ್ನಿಂಗ್​ ಶೋಗಳನ್ನು ಹಾಕಲಾಗಿತ್ತು. ಕನ್ನಡದ ಮಟ್ಟಿದೆ ಬೆಂಗಳೂರಿನಲ್ಲಿ ಪೈಲ್ವಾನ್​ ಸಿನಿಮಾ ಹೊಸ ದಾಖಲೆ ಬರೆದಿದೆ. ಕಾರ್ತಿಕ್ ಗೌಡ ಅವರ ಕೆಆರ್​ಜಿ ಸ್ಟುಡಿಯೋಸ್​ ಸಂಸ್ಥೆ ಪೈಲ್ವಾನ್ ಕನ್ನಡ ವರ್ಷನ್​ ವಿತರಣೆ ಮಾಡ್ತಿದ್ದು, ವಿದೇಶದಲ್ಲೂ ದೊಡ್ಡ ಮಟ್ಟದಲ್ಲಿ ಸಿನಿಮಾ ರಿಲೀಸ್ ಆಗಿದೆ.

ಮೊದಲ ದಿನ ಪೈಲ್ವಾನ್​ ಅಬ್ಬರ ನೋಡಿದ ಫ್ಯಾನ್ಸ್ ಥ್ರಿಲ್ಲಾಗಿದ್ದಾರೆ. ಬಾರೋ ಪೈಲ್ವಾನ್​ ಹಾಡಿಗೆ ಬೆಳ್ಳಿ ಪರದೆ ಮುಂದೆ ಕುಣಿದು ಕುಪ್ಪಳಿಸಿದರು. ಕಿಚ್ಚನ ಲುಕ್, ಖದರ್​ ನೋಡಿ ಎಂಜಾಯ್​ ಮಾಡಿದ ಫ್ಯಾನ್ಸ್​​ ಡೈಲಾಗ್​ಗಳಿಗೆ ಶಿಳ್ಳೆ ಚಪ್ಪಾಲೆ ಹೊಡೆದು ಸಂಭ್ರಮಿಸಿದರು.

ಕೆಜಿ ರಸ್ತೆಯ ಸಂತೋಷ್​ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಂಭ್ರಮ ಮುಗುಲು ಮುಟ್ಟಿತ್ತು. ಥಿಯೇಟರ್​ ಮುಂದೆ 70 ಅಡಿ ಎತ್ತರದ ಎರಡೆರಡು ಪೈಲ್ವಾನ್​ ಕಟೌಟ್​ಗಳನ್ನ ನಿಲ್ಲಿಸಲಾಗಿದೆ. 2000 ಕೆಜಿ ಹೂವಿನಿಂದ ಕಟೌಟ್​​ಗಳನ್ನ ಸಿಂಗರಿಸಿದ್ದು, ಪಟಾಕಿ ಹೊಡೆದು ಚಿತ್ರಕ್ಕೆ ಸ್ವಾಗತ ಕೋರಿದರು.

ಕಾವೇರಿ ಮತ್ತು ವೀರೇಶ್​ ಚಿತ್ರಮಂದಿರಗಳಲ್ಲೂ ಅಭಿಮಾನಿಗಳ ಸಡಗರ ಜೋರಾಗಿತ್ತು. ಕಳೆದ ಒಂದೂವರೆ ವರ್ಷದಿಂದ ಪೈಲ್ವಾನ್​ ಚಿತ್ರಕ್ಕಾಗಿ ಅಭಿಮಾನಿಗಳು ಕಾಯ್ತಿದರು. ಅವರ ಕಾತರಕ್ಕೆ ಬ್ರೇಕ್​ ಬಿದ್ದಿದ್ದು, ನೆಚ್ಚಿನ ನಟನನ್ನು ಕುಸ್ತಿ ಪೈಲ್ವಾನ್​ ಅವತಾರದಲ್ಲಿ ನೋಡಿ ಸಂಭ್ರಮಿಸಿದರು.

ಇನ್ನು ಸಂತೋಷ್​ ಚಿತ್ರಮಂದಿರದಲ್ಲಿ ಅಭಿಮಾನಿಗಳ ಜೊತೆ ಕಿಚ್ಚ ಸುದೀಪ್​ ಫ್ಯಾಮಿಲಿ ಪೈಲ್ವಾನ್​ ಸಿನಿಮಾ ವೀಕ್ಷಿಸಿದರು. ಸುದೀಪ್​ ಪುತ್ರಿ ಸಾನ್ವಿ ಕೂಡ ಪೈಲ್ವಾನ್​ ಸಿನಿಮಾ ನೋಡಿ ಸಂತಸಪಟ್ಟರು.

ಒಟ್ಟಾರೆ ಸ್ಯಾಂಡಲ್ವುಡ್​ ಅಂಗಳದಲ್ಲಿ ಪೈಲ್ವಾನ್​ ಹಬ್ಬ ಜೋರಾಗಿದೆ. ಕರ್ನಾಟಕ ಮಾತ್ರವಲ್ಲದೇ ತೆಲುಗು ರಾಷ್ಟ್ರಗಳಲ್ಲಿ, ತಮಿಳುನಾಡು, ಕೇರಳ ಸೇರಿದಂತೆ ವಿಶ್ವದಾದ್ಯಂತ ಪೈಲ್ವಾನ್ ಸಿನಿಮಾ ತೆರೆಕಂಡಿದೆ. ಪೈಲ್ವಾನ್​ ಹಿಂದಿ ವರ್ಷನ್​ ರಿಲೀಸ್​ಗೆ ಕ್ಷಣಗಣನೆ ಶುರುವಾಗಿದೆ. ಮೊದಲ ದಿನ ಭರ್ಜರಿ ಪ್ರಶಂಸೆ ಗಿಟ್ಟಿಸಿಕೊಂಡು, ಬಾಕ್ಸಾಫೀಸ್​ನಲ್ಲಿ ಧೂಳೆಬ್ಬಿಸಿರೋ ಪೈಲ್ವಾನ್​ ಮುಂದೆ ಹೇಗೆ ಸೌಂಡ್ ಮಾಡ್ತಾನೆ ಕಾದು ನೋಡಬೇಕು.

Comments are closed.