
ಸ್ಯಾಂಡಲ್ವುಡ್ಗೆ ಸ್ಟಾರ್ ವಾರ್ ಹೊಸದೇನಲ್ಲ. ಈ ಮೊದಲು ಸಾಕಷ್ಟು ಸ್ಟಾರ್ ನಟರ ನಡುವೆ ತಿಕ್ಕಾಟ ನಡೆದ ಉದಾಹರಣೆ ಇದೆ. ಇತ್ತೀಚೆಗೆ ದರ್ಶನ್ ಹಾಗೂ ಸುದೀಪ್ ನಡುವೆ ತಣ್ಣನೆಯ ವಾರ್ ನಡೆಯುತ್ತಿದೆ ಎನ್ನಲಾಗುತ್ತಿದೆ. ಈಗ ಮತ್ತೆ ಸ್ಯಾಂಡಲ್ವುಡ್ನಲ್ಲಿ ಸ್ಟಾರ್ ಸಮರ ನಡೆಯುವ ಲಕ್ಷಣ ಗೋಚರವಾಗಿದೆ! ಇದರಿಂದಾಗಿ ಅಭಿಮಾನಿಗಳ ನಡುವೆಯೂ ಕಿತ್ತಾಟ ಆರಂಭಗೊಂಡಿದೆ.
ಅಷ್ಟಕ್ಕೂ ಯಾರ ನಡುವೆ ಈ ಸಮರ? ಯಶ್ ಹಾಗೂ ದರ್ಶನ್! ಹೌದು, ಬಾಸ್ ವಿಚಾರಕ್ಕೆ ಸಂಬಂಧಿಸಿದಂತೆ ಯಶ್ ಹಾಗೂ ದರ್ಶನ್ ಫ್ಯಾನ್ಗಳ ನಡುವೆ ಕಿತ್ತಾಟ ನಡೆಯುತ್ತಲೇ ಇದೆ. ದರ್ಶನ್ ಇಂಡಸ್ಟ್ರಿಗೆ ಮೊದಲು ಬಂದವರು. ಅವರು ನಮ್ಮ ಬಾಸ್ ಎಂದು ಅವರ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ರಾಕಿಂಗ್ ಸ್ಟಾರ್ ಅಭಿಮಾನಿಗಳು ‘ಯಶ್’ ನಮ್ಮ ಬಾಸ್ ಎಂದು ಬೀಗುತ್ತಿದ್ದಾರೆ.
ಈ ವಿಚಾರಕ್ಕೆ ಇಬ್ಬರ ಅಭಿಮಾನಿಗಳ ನಡುವೆ ತಿಕ್ಕಾಟ ಇದ್ದೇ ಇದೆ. ಈಗ ಯಶ್ ಮಾಡಿದ ಟ್ವೀಟ್ ಸಾಮಾಜಿಕ ಜಾಲತಾಣದಲ್ಲಿ ಫ್ಯಾನ್ವಾರ್ಗೆ ಕಾರಣವಾದರೂ ಆಶ್ಚರ್ಯವಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಗಡ್ಡದ ವಿಚಾರಕ್ಕೆ ಸಂಬಂಧಿಸಿ ಯಶ್ ಟ್ವೀಟ್ ಒಂದನ್ನು ಮಾಡಿದ್ದರು. ಅದು ಬಿಯಾರ್ಡೋ ಆಯಿಲ್ನ ಜಾಹೀರಾತಿಗೆ ಸಂಬಂಧಿಸಿದ್ದು. ಇದರಲ್ಲಿ #BeardoBoss ಎನ್ನುವ ಹ್ಯಾಶ್ಟ್ಯಾಗ್ ಬಳಕೆ ಮಾಡಿದ್ದಾರೆ ಯಶ್. ಇದರಲ್ಲಿ ಬಾಸ್ ಎನ್ನುವ ವಿಚಾರ ಬಂದಿದ್ದೇ ತಡ, ಯಶ್ ಅಭಿಮಾನಿಗಳು #YashBoss ಹ್ಯಾಶ್ಟ್ಯಾಗ್ ಅಡಿಯಲ್ಲಿ ಟ್ವೀಟ್ ಮಾಡಲು ಆರಂಭಿಸಿದ್ದಾರೆ.
ಇದು ದರ್ಶನ್ ಅಭಿಮಾನಿಗಳನ್ನು ಕೆಣಕಿದೆ. “ನೀವು ಏನೇ ಹೇಳಿದರೂ ದರ್ಶನ್ ಅವರೇ ನಿಜವಾದ ಬಾಸ್. ಅವರನ್ನು ಬಿಟ್ಟು ಇಲ್ಲಿ ಬೇರೆ ಯಾವ ಬಾಸ್ ಇಲ್ಲ,” ಎಂದು ಅವರು ಹೇಳಿದ್ದಾರೆ.
Comments are closed.