
ಬಾಲಿವುಡ್ ನಲ್ಲಿ ಇತ್ತೀಚೆಗೆ ತೆರೆಕಂಡು ಬಾಲಿವುಡ್ ಬಾಕ್ಸ್ ಆಫಿಸ್ ಕೊಳ್ಳೆ ಹೊಡೆದ ಚಿತ್ರವೆಂದರೆ ಅದು ಶಾಹಿದ್ ಕಪೂರ್ ಹಾಗೂ ಕಿಯಾರಾ ಅಡ್ವಾಣಿ ಅಭಿನಯದ ಕಬೀರ್ ಸಿಂಗ್ ಚಿತ್ರ. ಅಲ್ಲದೆ ಈ ಚಿತ್ರ ಟಾಲಿವುಡ್ ನ ಅರ್ಜುನ್ ರೆಡ್ಡಿ ಚಿತ್ರದ ರಿಮೇಕ್ . ಸೋಲಿನಿಂದ ಕೆಂಗಟ್ಟಿದ್ದ ಶಾಹಿದ್ ಗೆ ಮತ್ತೊಮ್ಮೆ ಬಾಲಿವುಡ್ ನಲ್ಲಿ ಡಿಮ್ಯಾಂಡ್ ತಂದು ಕೊಟ್ಟಿತ್ತು. ಈ ಚಿತ್ರ ಶಾಹಿದ್ ಗೆ ಎಷ್ಟು ಬೇಡಿಕೆ ತಂದು ಕೊಟ್ಟಿತೊ ಅಷ್ಟೇ ಬೇಡಿಕೆ ಈ ಚಿತ್ರದಲ್ಲಿ ಪ್ರೀತಿ ಪಾತ್ರದಲ್ಲಿ ನಟಿಸಿದ್ದ ಕಿಯಾರಾ ಅಡ್ವಾಣಿಗೂ ಅಷ್ಟೇ ನೇಮು, ಫ್ರೆಮ್ ತಂದುಕೊಟ್ಟಿದೆ. ಅಷ್ಟಕ್ಕೂ ಈಗ ಹೇಳಲು ಹೊರಟಿರುವುದಾದರೂ ಏನು ಅಂತನಾ..
ಹೌದು ಕಬೀರ್ ಚಿತ್ರದ ನಂತರ ನಟಿ ಕಿಯಾರಾ ಅಡ್ವಾಣಿ ಎಷ್ಟು ಫೇಮಸ್ ಆದರೋ ಹಾಗೆಯೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುವ ಮೂಲಕ ಫೇಮಸ್ ಆಗುತ್ತಿದ್ದಾರೆ. ಇದಕ್ಕೆ ಕಾರಣ ಅವರು ಇನ್ ಸ್ಟಾಗ್ರಾಂ ನಲ್ಲಿ ಹಾಕಿರುವ ಅವರ ನ್ಯೂ ಪೋಟೋ..
ಯೆಸ್ ನಟಿ ಕಿಯಾರಾ ಅಡ್ವಾಣಿ ರೀಸೆಂಟ್ ಆಗಿ ಫೋಟೋಶೂಟ್ ಮಾಡಿಸಿದ್ದಾರೆ. ಅಂದ್ಹಗೆ ಈ ಫೋಟೋ ಶೂಟ್ ನಲ್ಲಿ ಹಳದಿ ಬಣ್ಣದ ಗೌನ್ ಧರಿಸಿದ್ದು, ಡ್ರೆಸ್ ಫುಲ್ ಫೆದರ್ಸ್ ಮತ್ತು ಫ್ರಿಂಜಿಸ್ ನಿಂದ ವಿನ್ಯಾಸಗೊಂಡಿದೆ.ಅಲ್ಲದೇ ಕೂದಲನ್ನು ಕೊಂಚ ಕರ್ಲಿ ಮಾಡಿಸಿದ್ದು, ಸ್ಲೈಟ್ ಮೆಕಪ್ ಟಚ್ಕೊಡಿಸಿದ್ದು, ಫೋಟೋಗೆ ಸಾಸ್ಸಿ ಪೋಸ್ ಕೊಟ್ಟಿದ್ದಾರೆ. ಇನ್ನೂ ತಮ್ಮ ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ. ಅದರಲ್ಲೂ ಕೆಲವರಂತೂ ‘ನಮಗೆ ನಿಮ್ಮ ಡ್ರೆಸ್ ನೋಡಿದ್ರೆ ಮ್ಯಾಗಿ, ನೂಡಲ್ಸ್ ತಿನ್ನೋ ಆಸೆ ಆಗುತ್ತೆ’ ಎಂದು ಹೇಳುವ ಮೂಲಕ ಕಿಯಾರ ಕಾಲೆಳೆಯುತ್ತಿದ್ದಾರೆ.
Comments are closed.