
ನವದೆಹಲಿ: ತನ್ನನ್ನು ನೋಡಲು 900 ಕಿ.ಮೀ ನಡೆದುಕೊಂಡು ಬಂದ ಅಭಿಮಾನಿಯ ಆಸೆಯನ್ನು ಬಾಲಿವುಡ್ ನಟ ಈಡೇರಿಸಿದ್ದಾರೆ.
ಈ ನಟ ಮತ್ಯಾರು ಅಲ್ಲ ಆಕ್ಷನ್ ಹೀರೋ ಅಕ್ಷಯ್ ಕುಮಾರ್. ಗುಜರಾತಿನ ಪರ್ಬತ್ ಎನ್ನುವ ಹುಡುಗ ಅಕ್ಷಯ್ ಕುಮಾರ್ ಅವರನ್ನು ಭೇಟಿಯಾಗಬೇಕೆಂಬ ಉದ್ದೇಶದಿಂದ ದ್ವಾರಕಾದಿಂದ 18 ದಿನಗಳಿಂದ 900 ಕೀ.ಮಿ ದೂರ ನಡೆದುಕೊಂಡೇ ಮುಂಬಯಿವರೆಗೆ ಬಂದಿದ್ದಾನೆ. ತನ್ನ ಅಭಿಮಾನಿಯ ಮನದಾಸೆಗೆ ಅಕ್ಷಯ್ ತಣ್ಣಿರೆರಚದೆ ಕೆಲಸದ ಒತ್ತಡದ ನಡುವೆಯೂ ಭೇಟಿಯಾಗಿ ಒಂದಷ್ಟು ಕ್ಷಣ ಆತನ ಜೊತೆ ಕಳೆದಿದ್ದಾರೆ.
ಅಭಿಮಾನಿಯ ಕಥೆಯನ್ನು ಅಕ್ಷಯ್ ಕುಮಾರ್ ತಮ್ಮ ಇನ್ಸ್ಟಾ ಗ್ರಾಮ್ ಖಾತೆಯಲ್ಲಿ ಬರೆದುಕೊಂಡಿದ್ದು, ಮತ್ತೊಮ್ಮೆ ಈ ರೀತಿ ಮಾಡಬೇಡ. ತನ್ನ ಶಕ್ತಿ, ಸಮಯ ಹಾಗೂ ಸಂಪನ್ಮೂಲವನ್ನು ನಿನ್ನ ಜೀವನದ ಸದುಪಯೋಗಕ್ಕೆ ಬಳಸು ಎಂದು ಬುದ್ಧಿಮಾತು ಹೇಳಿದ್ದಾರೆ.
ತಾನು ಯಾವಗಲೂ ಶಾರೀರಿಕವಾಗಿ ಸಧೃಡವಾಗಿ ಇರಲು ಬಯಸುತ್ತೇನೆ. ಅದಕ್ಕಾಗಿ ನಿಮ್ಮನ್ನು ಭೇಟಿಯಾಗಲು ಇಷ್ಟು ದೂರ ನಡೆದುಕೊಂಡು ಬಂದಿದ್ದೇನೆ ಎನ್ನುತ್ತಾರೆ ಪರ್ಬತ್.
Comments are closed.