
ಸ್ಯಾಂಡಲ್ ವುಡ್ ನಲ್ಲಿ ಕಿರಿಕ್ ಪಾರ್ಟಿ ಚಿತ್ರ ಮೂಲಕ ಕರುನಾಡಿನ ಕ್ರಶ್ ಆದವರು ರಶ್ಮಿಕಾ ಮಂದಣ್ಣ . ಕನ್ನಡತಿ ಮತ್ತು ಕನ್ನಡದ ನಟಿ ಎನ್ನುವ ಅಭಿಮಾನದಿಂದ ಕನ್ನಡ ಚಿತ್ರರಂಗದ ಪ್ರೇಕ್ಷಕರು ಅವರನ್ನು ಎತ್ತರಕ್ಕೆ ಬೆಳೆಸಿದ್ದಾರೆ. ಈಗ ಅವರು ಪರಭಾಷೆಗಳಲ್ಲಿ ಅವಕಾಶ ಗಿಟ್ಟಿಸುವ ಸಲುವಾಗಿ ತಮಿಳು ಮಾಧ್ಯಮದಲ್ಲಿ ಸಂದರ್ಶನ ನೀಡುವಾಗ ‘ನನಗೆ ಕನ್ನಡವೆಂದರೆ ಕಷ್ಟ. ಬೇರೆ ಎಲ್ಲಾ ಭಾಷೆಗಳು ತುಂಬಾ ಸರಳ’ ಎಂದು ಹೇಳಿಕೆ ನೀಡುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದರು. ಆದರೆ ಇದೀಗ ಇನ್ನೊಂದು ಹಂತದ ಉದ್ಧಟತನ ಮೆರೆದಿದ್ದು, ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ. ಕೋರ್ಟ್ನಲ್ಲಿ ನೋಡ್ಕೋತೀನಿ ಎಂದು ಉಡಾಫೆ ತೋರಿದ್ದಾರೆ.
ಹೌದು ತಮಿಳಿನ ಸಂದರ್ಶನದಲ್ಲಿ ರಶ್ಮಿಕಾ, ತನಗೆ ಕನ್ನಡ ಸರಿಯಾಗಿ ಬರುವುದಿಲ್ಲ, ಕನ್ನಡದಲ್ಲೂ ಡಬ್ಬಿಂಗ್ ಮಾಡುವುದು ಕೂಡ ಕಷ್ಟ ಎಂದಿದ್ದರು. ಈ ವಿಡಿಯೋ ರಾತ್ರೋರಾತ್ರಿ ಸಖತ್ ವೈರಲ್ ಆಗಿತ್ತು. ಕನ್ನಡದ ಮೂಲಕ ಕೆರಿಯರ್ ಆರಂಭಿಸಿ ಕನ್ನಡಕ್ಕೆ ಅವಮಾನ ಮಾಡಿದ ರಶ್ಮಿಕಾ ವಿರುದ್ಧ ಕರವೇ ಸೇರಿದಂತೆ ಕನ್ನಡ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದ್ದವು.
ಇನ್ನು ಸಾಮಾಜಿಕ ಜಾಲತಾಣದಲ್ಲಿ ಕಿರಿಕ್ ಬೆಡಗಿ ವಿರುದ್ಧ ಆಕ್ರೋಶಗಳನ್ನು ವ್ಯಕ್ತವಾಗಿದ್ದಲ್ಲದೆ, .ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ನಟಿ ಪರರಾಜ್ಯದಲ್ಲಿ ಮಾತೃಭಾಷೆ ಬರುವುದಿಲ್ಲ ಎಂದಿರುವುದು ಸರಿಯಲ್ಲ. ಅವರಿಗೆ ನೆಲೆ ನೀಡಿರುವುದು ಕನ್ನಡ ಚಿತ್ರರಂಗ. ‘ಕಿರಿಕ್ ಪಾರ್ಟಿ’ ಮೂಲಕ ಕೆರಿಯರ್ ಕಂಡುಕೊಂಡ ರಶ್ಮಿಕಾ ಇದೀಗ ಉತ್ತುಂಗಕ್ಕೆ ಏರುತ್ತಿದ್ದಂತೆ ಭಾಷೆಯ ಬಗ್ಗೆ ಅಸಡ್ಡೆ ತೋರಿದ್ದು.ರಶ್ಮಿಕಾ ಮೇಲೆ ಕ್ರಮ ಕೈಗೊಳ್ಳುವಂತೆ ಕನ್ನಡ ಪರ ಹೋರಾಟಗಾರರು ವಾಣಿಜ್ಯ ಮಂಡಳಿಗೆ ದೂರು ನೀಡಿದ್ದು ಈ ಕುರಿತು ರಶ್ಮಿಕಾ ಮಂದಣ್ಣ ಅವರನ್ನು ಕರೆದು ಮಾತುಕತೆ ನಡೆಸುವುದಾಗಿ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್ ಹೇಳಿದ್ದರು.
ಆದರೆ ಈ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಕಿರಿಕ್ ಹುಡುಗಿ ರಶ್ಮಿಕಾ, ನಾನು ಯಾವ ತಪ್ಪು ಮಾಡಿಲ್ಲ. ಕ್ಷಮೆ ಕೇಳಲ್ಲ. ಕೇಸ್ ಆದರೆ ಕೋರ್ಟ್ನಲ್ಲಿ ನೋಡಿಕೊಳ್ಳುತ್ತಿನಿ ಎನ್ನುವ ಮೂಲಕ ಕನ್ನಡಿಗರಿಗೆ ಡೋಂಟ್ ಕೇರ್ ಎಂದಿದ್ದು, ಆಕ್ರೋಶ ಮತ್ತಷ್ಟು ಹೆಚ್ಚಿದೆ.
Comments are closed.