
ತಂದೆಯ ಸಮಸ್ತ ಆಸ್ತಿ ಗಂಡು ಮಗನ ಪಾಲಾಗೋದು ಸಾಮಾನ್ಯವಾದ ನಿಯಮ. ಆದರೆ ಬಾಲಿವುಡ್ ಬಿಗ್ ಬೀ ಅಮಿತಾಬ್ ಬಚ್ಚನ್ ಮಾತ್ರ ತಮ್ಮ ಸಮಸ್ತ ಆಸ್ತಿಯನ್ನು ಎರಡು ಪಾಲು ಮಾಡ್ತಿದ್ದಾರಂತೆ. ಹೌದು ಈ ವಿಚಾರವನ್ನು ಸ್ವತಃ ಬಿಗ್ ಬಿ ಹೇಳಿಕೊಂಡಿದ್ದಾರೆ. ಇಷ್ಟಕ್ಕೂ ಇನ್ನೊಂದು ಪಾಲು ಯಾರಿಗೆ ಅಂದ್ರಾ ಇಲ್ಲಿದೆ ಇಂಟ್ರಸ್ಟಿಂಗ್ ಸ್ಟೋರಿ.
ಬಾಲಿವುಡ್ನ ಬಿಗ್ ಬಿಯಾಗಿ ದಶಕಗಳ ಕಾಲ ಹಿಂದಿಚಿತ್ರರಂಗದ ಅನಭಿಷಿಕ್ತ ದೊರೆಯಾಗಿ ಮೆರೆದ ಬಿಗ್ ಬಿ ನೂರಾರು ಯಶಸ್ವಿ ಚಿತ್ರಗಳಿಂದ ಕೋಟ್ಯಾಂತರ ರೂಪಾಯಿ ಆಸ್ತಿ ಗಳಿಸಿದ್ದಾರೆ. ಈ ಆಸ್ತಿ ಎಲ್ಲ ಬಿಗ್ ಬಿ ಬಳಿಕ ಅಭಿಷೇಕ್ ಬಚ್ಚನ್ ಪಾಲಾಗುತ್ತೆ ಅಂತ ಎಲ್ಲರೂ ಮಾತಾಡಿಕೊಳ್ತಿದ್ದರು. ಆದರೆ ಇದೀಗ ನನ್ನ ಆಸ್ತಿಯಲ್ಲಿ ಸಮಾನವಾದ ಎರಡು ಪಾಲಿದೆ ಎನ್ನುವ ಮೂಲಕ ಬಿಗ್ ಬಿ ಅಮಿತಾಬ್ ಬಚ್ಚನ್ ಅಚ್ಚರಿ ಮೂಡಿಸಿದ್ದಾರೆ.
ಅಮಿತಾಬ್ ಬಚ್ಚನ್ ಗೆ, ಅಭಿಷೇಕ್ ಬಚ್ಚನ್ ಜೊತೆ ಶ್ವೇತಾ ಎಂಬ ಮಗಳಿದ್ದಾರೆ. ಮಗ ಹಾಗೂ ಮಗಳು ಇಬ್ಬರೂ ಸಮಾನರು ಎಂದಿರುವ ಬಿಗ್ ಬಿ ತಮ್ಮ ಸಮಸ್ತ ಆಸ್ತಿಯನ್ನು ಎರಡು ಭಾಗ ಮಾಡಲು ನಿರ್ಧರಿಸಿದ್ದಾರಂತೆ.
ಶ್ವೇತಾ ಬರೆದ ಮೊದಲ ಕಾದಂಬರಿ ಪ್ಯಾರಡೈಸ್ ಟವರ್ಸ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದ ಬಿಗ್ ಬಿ ಅಭಿಷೇಕ್ ಒಬ್ಬರೇ ನನ್ನ ಆಸ್ತಿಗೆ ಒಡೆಯರಲ್ಲ. ಅದರಲ್ಲಿ ಶ್ವೇತಾಗೂ ಸಮಾನವಾದ ಪಾಲಿದೆ ಎಂದಿದ್ದಾರೆ. ಅಲ್ಲದೇ ಹೆಣ್ಣುಮಕ್ಕಳು ಮಾಡೋ ಸಾಧನೆಗಳಿಗಿಂತ ಹೆಮ್ಮೆಯ ಸಂಗತಿ ತಂದೆಗೆ ಬೇರೆ ಇಲ್ಲ ಎಂದಿದ್ದಾರೆ.
Comments are closed.