
ಮುಂಬೈ: ಪ್ರೀತಿಯ ವಿಚಾರದಲ್ಲಿ ಬಾಹುಬಲಿ ಖ್ಯಾತಿಯ ಪ್ರಭಾಸ್ ಮತ್ತು ಅನುಷ್ಕಾ ಶೆಟ್ಟಿ ಸದಾ ಮುನ್ನೆಲೆಗೆ ಬರುತ್ತಾರೆ. ನಮ್ಮ ನಡುವೆ ಯಾವುದೇ ಪ್ರೀತಿಯಿಲ್ಲ ಎಂದು ವದಂತಿಯನ್ನು ತಳ್ಳಿಹಾಕಿದರೂ ಅವರಿಬ್ಬರ ಮೇಲಿನ ಚರ್ಚೆ ಮಾತ್ರ ಇನ್ನೂ ಕಡಿಮೆಯಾಗಿಲ್ಲ. ಇದರ ನಡುವೆ ನಟ ಪ್ರಭಾಸ್ ಸಂದರ್ಶನವೊಂದರಲ್ಲಿ ಅನುಷ್ಕಾ ಬಗ್ಗೆ ಮಾತನಾಡಿ ಮತ್ತೆ ಸುದ್ದಿಯಾಗಿದ್ದಾರೆ.
ಸದ್ಯ ತಮ್ಮ ಮುಂದಿನ ಬಹುನಿರೀಕ್ಷಿತ “ಸಾಹೋ” ಚಿತ್ರದ ಬಿಡುಗಡೆಯನ್ನು ಎದುರು ನೋಡುತ್ತಿರುವ ಪ್ರಭಾಸ್, ಸಂದರ್ಶನವೊಂದರಲ್ಲಿ ಅನುಷ್ಕಾ ಬಗ್ಗೆ ಕೇಳಿದಾಗ ಅವರ ವಿರುದ್ಧ ದೂರೊಂದನ್ನು ನೀಡಿದ್ದಾರೆ. ಅನುಷ್ಕಾ ನಡುವಿನ ಸಂಬಂಧದ ಬಗ್ಗೆ ಕೇಳಿದಾಗಲೆಲ್ಲ ಅದನ್ನು ನಿರಾಕರಿಸುವ ಪ್ರಭಾಸ್ ಇದೀಗ ಅನುಷ್ಕಾ ಬಗ್ಗೆ ಮಾತನಾಡಿ ಮತ್ತೆ ಅಭಿಮಾನಿಗಳ ಗಮನ ಸೆಳೆದಿದ್ದಾರೆ.
ತೆಲುಗು ಮಾಧ್ಯಮದಲ್ಲಿ ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಭಾಸ್, ಅನುಷ್ಕಾ ಬ್ಯೂಟಿ ಮತ್ತು ಅವರ ಎತ್ತರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ, ನಾನು ಕರೆ ಮಾಡಿದಾಗಲೆಲ್ಲ ಸರಿಯಾದ ಸಮಯಕ್ಕೆ ಕರೆಯನ್ನು ಸ್ವೀಕರಿಸುವುದಿಲ್ಲ ಎಂದು ದೂರಿದ್ದಾರೆ. ಇದರೊಂದಿಗೆ ಕಾಜಲ್ ಅಗರ್ವಾಲ್ ಬಗ್ಗೆಯೂ ಮಾತನಾಡಿ, ಅವರೊಬ್ಬ ಸುಂದರವಾದ ನಟಿ. ಸಾಕಷ್ಟು ಸಾಮರ್ಥ್ಯವನ್ನು ಹೊಂದಿದ್ದಾರೆ ಎಂದು ಹೊಗಳಿದ್ದಲ್ಲದೆ, ಇತ್ತೀಚೆಗೆ ಅವರ ಡ್ರೆಸ್ಸಿಂಗ್ ಸೆನ್ಸ್ ಉತ್ತಮವಾಗಿದೆ ಎಂದಿದ್ದಾರೆ.
ಸದ್ಯ ಸಾಹೋ ಚಿತ್ರದ ಪ್ರಮೋಷನಲ್ನಲ್ಲಿ ಪ್ರಭಾಸ್ ಬಿಜಿಯಾಗಿದ್ದಾರೆ. ಪ್ರಭಾಸ್ಗೆ ನಟಿ ಶ್ರದ್ಧಾ ಕಪೂರ್ ಸಾಥ್ ನೀಡುತ್ತಿದ್ದಾರೆ. ಚಿತ್ರವೂ ಆಗಸ್ಟ್ 30ರಂದು ತೆರೆಗೆ ಅಪ್ಪಳಿಸಲಿದೆ. ಚಿತ್ರವನ್ನು ಸುಜೀತ್ ಎಂಬುವರು ನಿರ್ದೇಶಿಸಿದ್ದಾರೆ. ಈ ವರ್ಷದ ಬಿಗ್ ಬಜೆಟ್ ಚಿತ್ರವಾಗಿದ್ದು, ಬಾಹುಬಲಿಯಂತಹ ಐತಿಹಾಸಿಕ ಚಿತ್ರದ ಬಳಿಕ ಮತ್ತೆ ಆ್ಯಕ್ಸನ್ ಚಿತ್ರಗಳಿಗೆ ಪ್ರಭಾಸ್ ಮರಳಿರುವುದರಿಂದ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇದೆ.
Comments are closed.