ಮನೋರಂಜನೆ

ಈತ ಮಂಚಕ್ಕೆ ಕರೆಯುವ ಸಂಗೀತ ನಿರ್ದೇಶಕ​!

Pinterest LinkedIn Tumblr


ಎಷ್ಟೋ ಜನ ಯುವತಿಯರಿಗೆ ತೆರೆ ಮೇಲೆ ಕಾಣಿಸಿಕೊಳ್ಳಬೇಕು ಅನ್ನೋದು ಬದುಕಿನ ಬಹುದೊಡ್ಡ ಕನಸಾಗಿರುತ್ತೆ. ಅದಕ್ಕಾಗಿ ಯಾರ್ ಯಾರ್ ಹತ್ರಾನೋ ಚಾನ್ಸ್ ಕೇಳ್ಕೊಂಡ್ ಹೋಗ್ತಾರೆ.ಆದ್ರೇ ಇಲ್ಲೊಬ್ಬ ಕಾಮುಕ ಮ್ಯೂಸಿಕ್ ಡೈರೆಕ್ಟರ್ ಇದಾನೆ..ನಿಮಗೆ ಚಾನ್ಸ್ ಕೊಡಿಸ್ತೀನಿ ಅಂತ ಆಸೆ ಹುಟ್ಟಿಸ್ತಾನೆ.ನಂಬಿ ನೀವೇನಾದ್ರು ಹೋದ್ರೆ ಆತನ ಕಾಮ ಪಾಶ್​​​ದಲ್ಲಿ ಬೀಳೋದು ಗ್ಯಾರಂಟಿ..ಯಾರು ಆ ಡೈರೆಕ್ಟರ್..ಆತನ ಪೋಲಿ ಕೆಲಸವೇನು ಇಲ್ಲಿದೆ ಸ್ಟೋರಿ..

ಯೆಸ್..ಎಷ್ಟೋ ಜನ್ರಿಗೆ ಫಿಲ್ಮ್ ಲಿ ಯ್ಯಾಕ್ಟ್ ಮಾಡ್ಬೇಕು..ಸ್ಕ್ರೀನ್ ಮೇಲೆ ಮಿಂಚ್ಬೇಕು ಅನ್ನೋ ಕನಸಿರುತ್ತೆ.ಒಂದು ಚಿಕ್ಕ ಚಾನ್ಸ್ ಸಿಕ್ರೆ ಸಾಕು ಅಂತ ಕಾಯ್ತಿರ್ತಾರೆ.ಆದ್ರೇ ನಿಮ್ಮ ಕನಸುಗಳನ್ನೆ ಬಂಡವಾಳ ಮಾಡಿಕೊಂಡು ತೀಟೆ ತೀರಿಸಿಕೊಳ್ಳೊ ಕಿರಾತಕರು ಇಂಡಸ್ಸ್ರಿಯಲ್ಲಿ ಇದ್ದಾರೆ.ಇಲ್ನೋಡಿ ಇಂಗು ತಿಂದ ಮಂಗನ ತರ ಮನೆಯಿಂದ ಹೊರಗೆ ಬರ್ತಿದಾನೆ ನೋಡಿ ಇವ್ನು ಮ್ಯೂಸಿಕ್ ಡೈರೆಕ್ಟರ್ ಅಂತೆ. ಈತನ ಹೆಸರು ಮುರುಳಿಧರ್.

ಇತ್ತೀಚೆಗೆ ಬಿಡುಗಡೆಯಾದ ಚಿಟ್ಟೆ ಅನ್ನೋ ಆಲ್ಬಮ್ ಗೇ ಮ್ಯೂಸಿಕ್ ಕಂಪೋಸ್ ಮಾಡಿದ್ದ ಈ ಕಿರಾತಕ.ಖ್ಯಾತ ಮ್ಯೂಸಿಕ್ ಡೈರೆಕ್ಟರ್ಸ್ ಜೊತೆ ಕೆಲ್ಸ ಕೂಡ ಮಾಡಿದ್ದ .ಇತ್ತಿಚೆಗೆ ಕುಮಾರಸ್ವಾಮಿ ಲೇಔಟ್ ಬಳಿ ತನ್ನದೆ ಒಂದು ಮ್ಯೂಸಿಕ್ ಸ್ಟೂಡಿಯೋ ಕೂಡ ಓಪನ್ ಮಾಡ್ಕೊಂಡಿದ್ದ . ಮುಚ್ಕೊಂಡು ತನ್ನ ಕೆಲಸ..ಸಾಹಿತ್ಯ,ಕಂಪೋಸಿಂಗ್ ಅಂತ ಇದ್ದಿದ್ರೆ ಏನು ಆಗ್ತಿರಲಿಲ್ಲ.ಆದ್ರೆ ಇವ್ನಿಗೆ ಕಾಮತೃಷೆ ನೆತ್ತಿ ಮೇಲೆ ಕುಣಿಯತೊಡಗಿತ್ತು.ಯಾರಾದ್ರು ಚಿಟ್ಟೆಗಳು ಸಿಗ್ತಾರ ಅಂತ ಫೇಸ್ ಬುಕ್ ನಲ್ಲಿ ಬಲೆಬೀಸ್ತಾನೆ.ಚಾನ್ಸ್ ಕೊಡಿಸ್ತೀನಿ,ಲಕ್ಷ ಲಕ್ಷ ಹಣ ಕೊಡಸ್ತಿನಿ ಅಂತ ಆಸೆ ಹುಟ್ಟಿಸಿ ಫೋನ್ ನಂಬರ್ ಪಡಿತಿದ್ದ.ನಂತರ ನೇರವಾಗಿ ತನ್ನ ಬೆತ್ತಲ ದೇಹದ ಫೋಟೋ ಕಳಿಸಿ,ಚಾನ್ಸ್ ಬೇಕು ಅಂದ್ರೆ ಬಾ ಅಂತ ಪುಸಲಾಯಿಸುತ್ತಿದ್ದ ಈ ಕಾಮುಕ ಡೈರೆಕ್ಟರ್..

ಹೀಗೆ ಫೇಸ್ ಬುಕ್ ನಲ್ಲಿ ಒಬ್ಬ ಯುವತಿಯ ನಂಬರ್ ಪಡೆದಿದ್ದ ಈತ.ದಿನಾ ತನ್ನ ನಗ್ನ ಪೋಟೊ ಹಾಕಿ.ನಿಮಗೆ ಚಾನ್ಸ್ ಕೊಡಿಸ್ತಿನಿ..ಆದ್ರೆ act like a bAbY..act like a wife. Act like a lover ತರ ನಟಿಸಬೇಕು ಅಂತ ಪುಸಲಾಯಿಸುತ್ತಿದ್ದ.ಅಸಹ್ಯ ಮೆಸೇಜ್ ಮಾಡಿ ಬಾ ಬಾ ಅಂತ ಹಿಂದೆ ಬಿದ್ದಿದ್ದ. ಇದರಿಂದ ಬೇಸತ್ತ ಯುವತಿ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ.ಅಲ್ಲದೆ ತಕ್ಷಣ ಎಚ್ಚೆತ್ತ ಪೊಲೀಸರು ಕಾಮುಕ ಮ್ಯೂಸಿಕ್ ಡೈರೆಕ್ಟರ್ ಮುರುಳಿದರ್ ನನ್ನು ಅರೆಸ್ಟ್ ಮಾಡಿದ್ದಾರೆ..ಈಗ್ಲಾದ್ರು ಚಾನ್ಸ್ ಕೇಳ್ಕೊಂಡ್ ಹೋಗೋ ಯುವತಿಯರೆ ಎಚ್ಚರವಹಿಸಿ. ಆದರೂ ದೇಶದ ಚಿತ್ರೋದ್ಯಮದಲ್ಲಿ ಒಳ್ಳೆಯ ಹೆಸರು ಪಡೆದಿರೋ ಸ್ಯಾಂಡಲ್ ವುಡ್ ನಲ್ಲಿ ಇಂತಹ ಕಾಮುಕ ಕ್ರಿಮಿಗಳಿರೋದು ವಿಪರ್ಯಾಸವೇ ಸರಿ..

Comments are closed.