ಮನೋರಂಜನೆ

ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ: ನಟಿ ರಶ್ಮಿಕಾ ಮಂದಣ್ಣ

Pinterest LinkedIn Tumblr


ಬೆಂಗಳೂರು: ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅವರು ಅಭಿಮಾನಿಗಳಿಗೆ ತಮ್ಮನ್ನು ಪ್ರಶ್ನೆ ಕೇಳುವಂತೆ ಇನ್‍ಸ್ಟಾಗ್ರಾಂನಲ್ಲಿ ಸ್ಟೋರಿ ಹಾಕಿಕೊಂಡಿದ್ದರು. ಈ ವೇಳೆ ಅಭಿಮಾನಿಯೊಬ್ಬರ ಪ್ರಶ್ನೆಗೆ ರಶ್ಮಿಕಾ, “ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ” ಎಂದು ಹೇಳಿದ್ದಾರೆ.

ರಶ್ಮಿಕಾ ಮಂದಣ್ಣ ಯಾವಾಗಲೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಭಾನುವಾರ ರಶ್ಮಿಕಾ ಅವರು ಇನ್‍ಸ್ಟಾಗ್ರಾಂನಲ್ಲಿ ಅಭಿಮಾನಿಗಳು ಸಾಕಷ್ಟು ಪ್ರಶ್ನೆ ಕೇಳಿದ್ದರು. ರಶ್ಮಿಕಾ ಅವರು ಕೂಡ ಅಭಿಮಾನಿಗಳ ಪ್ರಶ್ನೆಗೆ ಉತ್ತರಿಸಿದ್ದಾರೆ.

ಹಲವು ಅಭಿಮಾನಿಗಳು ರಶ್ಮಿಕಾ ಅವರಿಗೆ ನಟ ವಿಜಯ್ ದೇವರಕೊಂಡ ಜೊತೆಗಿನ ಸ್ನೇಹದ ಬಗ್ಗೆ ಪ್ರಶ್ನಿಸಿದ್ದಾರೆ. ಅಲ್ಲದೆ ಕೆಲವರು ಬಾಲಿವುಡ್ ಎಂಟ್ರಿಯ ಬಗ್ಗೆ ರಶ್ಮಿಕಾ ಅವರ ಬಳಿಯೇ ಸ್ಪಷ್ಟನೆ ಕೇಳಿದ್ದಾರೆ. ಮತ್ತೆ ಕೆಲವರು ರಶ್ಮಿಕಾ ಅವರ ಮುಂದಿನ ಸಿನಿಮಾಗಳ ಬಗ್ಗೆ ಪ್ರಶ್ನಿಸಿದ್ದಾರೆ.

ಈ ನಡುವೆ ಅಭಿಮಾನಿಯೊಬ್ಬರು ನಿಮ್ಮ ಕನ್ನಡ ಅಭಿಮಾನಿಗಳನ್ನು ಒಂದು ಪದದಲ್ಲಿ ಬಣ್ಣಿಸಿ ಎಂದು ಪ್ರಶ್ನಿಸಿದ್ದಾರೆ. ಈ ಪ್ರಶ್ನೆಗೆ ರಶ್ಮಿಕಾ, “ಯಾರು ಏನೇ ಹೇಳಿದರೂ ನಾನು ಅವರನ್ನು ಪ್ರೀತಿಸುತ್ತೇನೆ” ಎಂದು ಉತ್ತರಿಸಿದ್ದಾರೆ. ಸದ್ಯ ರಶ್ಮಿಕಾ ಉತ್ತರ ನೀಡಿರುವ ಸ್ಕ್ರೀನ್‍ಶಾಟ್ ಸಾಕಷ್ಟು ವೈರಲ್ ಆಗುತ್ತಿದೆ.

ತೆಲುಗಿನ ‘ಡಿಯರ್ ಕಾಮ್ರೆಡ್’ ಚಿತ್ರದ ಪ್ರಮೋಶನ್ ವೇಳೆ ರಶ್ಮಿಕಾ ತಮಿಳಿನಲ್ಲಿ ಮಾಧ್ಯಮವೊಂದರಲ್ಲಿ, “ನನಗೆ ಕನ್ನಡ ಬರುವುದಿಲ್ಲ. ಕನ್ನಡದಲ್ಲೂ ಡಬ್ ಮಾಡುವುದ್ದಕ್ಕೆ ತುಂಬಾ ಕಷ್ಟ ಆಗುತ್ತದೆ” ಎಂದು ಹೇಳಿದ್ದರು. ರಶ್ಮಿಕಾ ಅವರ ಈ ಹೇಳಿಕೆಗೆ ಕನ್ನಡಿಗರು ಗರಂ ಆಗಿದ್ದು, ಕೆಲವು ಸಂಘಟನೆಗಳು ಅವರನ್ನು ಬ್ಯಾನ್ ಮಾಡುವಂತೆ ಪ್ರತಿಭಟನೆ ನಡೆಸಿದ್ದರು.

Comments are closed.