ಮನೋರಂಜನೆ

ಸುಮಲತಾ-ಚಿರಂಜೀವಿ ಡ್ಯಾನ್ಸ್ ವಿಡಿಯೋ ವಿರುದ್ಧ ಸೈಬರ್ ಕ್ರೈಂ ಪೊಲೀಸರಿಗೆ ದೂರು!

Pinterest LinkedIn Tumblr


ನಟ ಚಿರಂಜೀವಿ ಜೊತೆ ಮಂಡ್ಯ ಸಂಸದೆ ಸುಮಲತಾ ಅವರು ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದ್ದು, ಈ ಬಗ್ಗೆ ಸುಮಲತಾ ಸೈಬರ್​ ಕ್ರೈಂ ಪೊಲೀಸರಿಗೆ ದೂರು ನೀಡಿದ್ದಾರೆ. ಒಂದೆಡೆ ಪ್ರವಾಹ ಮತ್ತೊಂದೆಡೆ ಕರ್ನಾಟಕಕ್ಕೆ ಅಣ್ಣ ಎಂದು ಕರೆಸಿಕೊಳ್ಳುತ್ತಿದ್ದ ಅಂಬರೀಶ್ ನಿಧನರಾಗಿ ವರ್ಷ ಕಳೆಯುವುದಕ್ಕೆ ಮೊದಲೇ ಈ ರೀತಿ ಡ್ಯಾನ್ಸ ಬೇಕಿತ್ತಾ ಎಂದು ನಾಲ್ಕ ವರ್ಷ ಹಳೆ ವಿಡಿಯೋವನ್ನು ಇತ್ತೀಚಿಗಿನ ವಿಡಿಯೋ ಎಂದು ಬಿಂಬಿಸುವ ರೀತಿ ವೈರಲ್​ ಮಾಡಲಾಗಿತ್ತು.

ರಾಜ್ಯ ಪ್ರವಾಹಕ್ಕೆ ತತ್ತರಿಸಿದ್ದು, ಮಂಡ್ಯದ ಜನರು ಸಂಕಷ್ಟಕ್ಕಿಡಾಗಿದ್ದಾರೆ. ಈ ಸಂದರ್ಭದಲ್ಲಿ ಸಂಸದೆ ಸುಮಲತಾ ಪಾರ್ಟಿಯಲ್ಲಿ ಡ್ಯಾನ್ಸ್​ ಮಾಡುತ್ತಿರೋ ವಿಡಿಯೋವೊಂದು ವೈರಲ್​ ಆಗಿದ್ದು, ನಟ ಚಿರಂಜೀವಿ ಬರ್ತಡೇ ಸಂದರ್ಭದಲ್ಲಿ ಸುಮಲತಾ ಕುಣಿದು ಎಂಜಾಯ್ ಮಾಡ್ತಿದ್ದಾರೆ ಎಂಬ ಟ್ಯಾಗ್​ ಲೈನ್​ ಜೊತೆ ವೈರಲ್​ ಮಾಡಲಾಗಿತ್ತು.

ಈ ವಿಡಿಯೋವನ್ನು ಸುಮಲತಾ ಅಂಬರೀಶ್ ಹೆಸರಿನ ನಕಲಿ ಅಕೌಂಟ್ ತೆಗೆದು ಹರಿಬಿಡಲಾಗಿತ್ತು. ಅಲ್ಲದೇ ಪ್ರವಾಹ ಸಂದರ್ಭದಲ್ಲಿ ಕುಣಿದು ಪಾರ್ಟಿ ಮಾಡ್ತಿದ್ದಾರೆ ಎಂದು ಟಾಂಗ್ ಕೂಡ ನೀಡಲಾಗಿತ್ತು. ಇದೀಗ ಈ ವಿಡಿಯೋಗೆ ಸುಮಲತಾ ಸ್ಪಷ್ಟನೆ ನೀಡಿದ್ದು, ಇದು ಮೂರು ವರ್ಷದ ಹಳೆ ವಿಡಿಯೋ. ನನ್ನ ತೇಜೋವಧೆಗಾಗಿ ಇಂತಹ ಕೃತ್ಯಗಳನ್ನು ಎಸಗಲಾಗ್ತಿದೆ ಎಂದು ಆರೋಪಿಸಿದ್ದಾರೆ. ಅಷ್ಟೇ ಅಲ್ಲ ಈ ವಿಡಿಯೋ ವನ್ನು ಕೀಳು ಅಭಿರುಚಿಯಿಂದ ಹರಿಬಿಟ್ಟವರ ವಿರುದ್ಧ ಸೈಬರ್​ ಕ್ರೈಂ ಗೆ ದೂರು ನೀಡಿದ್ದಾರೆ.

Comments are closed.