ಮನೋರಂಜನೆ

ನಟಿ ಜಾಹ್ನವಿ ಕಪೂರ್‌ಗೆ ಎದುರಾದ ರಸ್ತೆ ಬದಿಯಲ್ಲಿ ಪುಸ್ತಕ ಮಾರುತ್ತಿದ್ದ ಬಾಲಕ ! ಮುಂದೆ ಏನಾಯಿತು ನೋಡಿ….

Pinterest LinkedIn Tumblr

ಮೋಹಕ ತಾರೆ ಶ್ರೀದೇವಿ ಹಿರಿಯ ಪುತ್ರಿ ಜಾಹ್ನವಿ ಕಪೂರ್ ಸಾಮಾಜಿಕ ಮಾಧ್ಯಮಗಳಲ್ಲಿ ಒಂದಲ್ಲ ಒಂದು ಕಾರಣದಿಂದ ಗಮನಸೆಳೆಯುತ್ತಲೇ ಇದ್ದಾರೆ. ಧಡಕ್ ಸಿನಿಮಾ ಮೂಲಕ ಬಾಲಿವುಡ್‌ಗೆ ಎಂಟ್ರಿ ಕೊಟ್ಟ ಜಾಹ್ನವಿ ಅಭಿನಯಕ್ಕೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಇದೀಗ ಎಲ್ಲರಿಗೂ ಚಿರಪರಿತ ಎಂಬಂತಾಗಿದ್ದಾರೆ ಜಾಹ್ನವಿ.

https://www.instagram.com/p/B1HHUBSnvcb/?utm_source=ig_embed

ಇದೀಗ ಜಾಹ್ನವಿಗೆ ಸಂಬಂಧಿಸಿದ ಇನ್ನೊಂದು ವೀಡಿಯೊ ಎಲ್ಲರ ಹೃದಯ ಗೆದ್ದಿದೆ. ರಸ್ತೆ ಬದಿಯಲ್ಲಿ ಪುಸ್ತಕ ಮಾರುತ್ತಿದ್ದ ಬಾಲಕನ ಜತೆಗಿನ ಅವರ ವರ್ತನೆ ಎಲ್ಲರ ಗಮನಸೆಳೆದಿದೆ. ತನ್ನ ಕಾರಿನ ಕಡೆಗೆ ಬಂದ ಬಾಲಕ ಪುಸ್ತಕ ಕೊಳ್ಳುವಂತೆ ಜಾಹ್ನವಿಗೆ ದುಂಬಾಲು ಬಿದ್ದಿದ್ದಾನೆ.

ಆರಂಭದಲ್ಲಿ ಅಯ್ಯೋ ನನ್ನ ಕೈಯಲ್ಲಿ ದುಡ್ಡಿಲ್ಲ ಎಂದು ಆ ಬಾಲಕನಿಗೆ ಹೇಳಿದರು. ಬಳಿಕ ತನ್ನ ಕಾರು ಚಾಲಕನ ಬಳಿ ಸ್ವಲ್ಪ ಹಣ ತೆಗೆದುಕೊಂಡು ಆ ಬಾಲಕನಿಗೆ ನೀಡಿದ್ದಾರೆ. ಈ ವೀಡಿಯೊ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಸದ್ಯಕ್ಕೆ ಜಾಹ್ನವಿ ಕಪೂರ್ ಐಎಎಫ್ ಪೈಲಟ್ ಗುಂಜನ್ ಸಕ್ಸೇನಾ ಬಯೋಪಿಕ್‌ನಲ್ಲಿ ನಟಿಸುತ್ತಿದ್ದಾರೆ. ಇದರ ಜತೆಗೆ ರಾಜ್‌ಕುಮಾರ್ ರಾವ್ ನಾಯಕನಾಗಿರುವ ‘ರೂಹಿ ಅಫ್‌ಝಾ’ ಎಂಬ ಚಿತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಇನ್ನೊಂದು ಕಡೆ ಕರಣ್ ಜೋಹರ್ ನಾಯಕನಾಗಿರುವ ‘ತಖ್ತ್’ನಲ್ಲೂ ಬಣ್ಣ ಹಚ್ಚಿದ್ದಾರೆ.

Comments are closed.