ಮನೋರಂಜನೆ

ಹಬ್ಬದ ದಿನವೇ ನಟಿ ಶೃತಿ ಹರಿಹರನ್ ಗೆ ಡಬ್ಬಲ್ ಧಮಾಕಾ!

Pinterest LinkedIn Tumblr


ಸ್ಯಾಂಡಲ್ ವುಡ್ ನಟಿ ಶೃತಿ ಹರಿಹರನ್ ಗೆ ಈ ಬಾರಿಯ ವರಮಹಾಲಕ್ಮಿ ಹಬ್ಬದಂದು ಡಬಲ್ ಧಮಾಕದಂತೆ ಒಂದೇ ಬಾರಿ ಎರಡು ಸಿಹಿ ಸುದ್ದಿ ಸಿಕ್ಕಿದೆ. ಹೌದು ವರಮಹಾಲಕ್ಷ್ಮೀ ಹಬ್ಬದಂದೇ ಶೃತಿ ಮನೆಯ ಬಾಗಿಲಿಗೆ ಅದೃಷ್ಟ ಲಕ್ಷಿ ತಾನಾಗಿಯೇ ಹುಡುಕಿಕೊಂಡು ಬಂದಿದ್ದಾಳೆ. ನಿಜಕ್ಕೂ ಅದೃಷ್ಟ ಅಂದರೆ ಇದೇ ಇರಬೇಕು ಅದೃಷ್ಟ ಬಂದರೆ ಹೀಗೆ ಬರಬೇಕು ನೋಡಿ… ಅಷ್ಟಕ್ಕೂ ಏನಾಪ್ಪಾ ಅದು ಅಂತೀರಾ?

ಹೌದು ನಟಿ ಶೃತಿಹರಿಹರನ್ ಮನೆಗೆ ಪುಟ್ಟ ಲಕ್ಷ್ಮಿಯ ಆಗಮನವಾಗಿದೆ. 14 ದಿನಗಳ ಹಿಂದೆ ಕೇರಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಶೃತಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದು, ಹಬ್ಬದ ದಿನದಂದೇ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾರೆ. ಇನ್ನೂ ತಾಯಿ – ಮಗಳು ಇಬ್ಬರೂ ಆರೋಗ್ಯವಾಗಿರುವುದಾಗಿ ವೈದ್ಯರು ತಿಳಿಸಿದ್ದಾರೆ.

ಹಬ್ಬದ ದಿನದಂದೇ ಮಗಳು ಜನಿಸಿರುವುದು ಶೃತಿಗೆ ಬಹಳ ಖುಷಿ ತಂದು ಕೊಟ್ಟಿರುವುದು ಒಂದು ವಿಚಾರವಾದರೆ, ಶೃತಿಗೆ ಇನ್ನೊಂದು ಸರ್ ಪ್ರೈಸ್ ಎಂಬಂತೆ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ 2018 ಪ್ರಕಟವಾಗಿದ್ದು ನಾತಿಚರಾಮಿ ಚಿತ್ರದ ಪಾತ್ರಕ್ಕೆ ವಿಶೇಷ ತೀರ್ಪುಗಾರರ ಪ್ರಶಸ್ತಿ ಲಭಿಸಿದೆ. ಇದೂ ಶೃತಿಗೂ ಹಾಗೂ ಕನ್ನಡ ಚಿತ್ರರಂಗಕ್ಕೂ ಕೂಡಾ ಹೆಮ್ಮೆಯ ವಿಚಾರವಾಗಿದೆ.

ಸದ್ಯ ಒಂದೆಡೆ ಮಗಳು ಹುಟ್ಟಿದ ಸಂಭ್ರಮದಲ್ಲಿದ್ದ ಶೃತಿಗೆ ಇನ್ನೊಂದೆಡೆ ರಾಷ್ಟ್ರೀಯ ಪ್ರಶಸ್ತಿ ದೊರೆತಿರುವುದು ಮತ್ತೊಂದು ಖುಷಿಯ ವಿಚಾರವಾಗಿದೆ. ಹಾಗಾಗಿ ವರಮಹಾಲಕ್ಷ್ಮೀ ಹಬ್ಬದ ದಿನ ಶೃತಿಯ ಪಾಲಿಗೆ ಸುದಿನವೇ ಎಂದು ಹೇಳಿದರೂ ತಪ್ಪಾಗಲಾರದು.

Comments are closed.