ಕರ್ನಾಟಕ

ನೆರೆಯ ನಡುವೆ ಬಿಡದ ಬಿಜೆಪಿಯ ರೇಣುಕಾಚಾರ್ಯರ ಫೋಟೋ ಗೀಳು

Pinterest LinkedIn Tumblr


ಇಡೀ ರಾಜ್ಯ ಇಂದು ಪ್ರವಾಹಕ್ಕೆ ಸಿಲುಕಿ ತತ್ತರಿಹೋಗಿದೆ. ಕಳೆದ ಒಂದು ವಾರದಿಂದ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆ ಅಕ್ಷರಶಃ ಜನರ ಬದುಕನ್ನು ಕಸಿದುಕೊಂಡು ಬೀದಿಯಲ್ಲಿ ನಿಲ್ಲಿಸಿದೆ. ರಾಜ್ಯದ 16 ಜಿಲ್ಲೆಗಳ 80 ತಾಲೂಕುಗಳನ್ನು ನೆರೆಪೀಡಿತ ತಾಲೂಕುಗಳು ಎಂದು ಅಧಿಕೃತವಾಗಿ ಘೋಷಿಸಲಾಗಿದೆ.

ಮಳೆಯಿಂದಾಗಿ ರಾಜ್ಯದಾದ್ಯಂತ 3.5 ಲಕ್ಷ ಎಕರೆ ಬೆಳೆ ನಾಶವಾಗಿದೆ, 2.5 ಲಕ್ಷ ಜನ ಮನೆ-ಮಠ ಕಳೆದುಕೊಂಡು ನಿರ್ಗತಿಕರಾಗಿ ನಿರಾಶ್ರಿತರ ತಾಣದಲ್ಲಿ ಆಶ್ರಯ ಪಡೆದಿದ್ದಾರೆ. ನೆರೆಯಿಂದಾಗಿ ಹತ್ತಾರು ಜನ ಸಾವನ್ನಪ್ಪಿದ್ದರೆ, ಕೆಲವು ಗ್ರಾಮಗಳೇ ಕಣ್ಮರೆಯಾಗಿವೆ. ಒಟ್ಟಾರೆ ಇದು ರಾಜ್ಯ ಇತಿಹಾಸ ಕಂಡು ಕೇಳರಿಯದ ಭೀಕರ ದುರಂತಗಳಲ್ಲೊಂದು ಎಂದು ಪರಿಗಣಿಸಲಾಗಿದೆ. ಸಾರ್ವಜನಿಕರು, ರಾಷ್ಟ್ರೀಯ ವಿಪತ್ತು ಕಾರ್ಯಾಚರಣೆ ಪಡೆ, ಪೊಲೀಸ್​, ಸರ್ಕಾರಿ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ನಿರತರಾಗಿದ್ದಾರೆ.

ಆದರೆ, ಇಂತಹ ಭೀಕರತೆ, ಜನರ ಅಸಹಾಯಕತೆಯೂ ಸಹ ಕೆಲವೊಬ್ಬ ರಾಜಕಾರಣಿಗಳ ಮೈಲೇಜ್ ಹೆಚ್ಚಿಸುವ ಪ್ರಚಾರದ ಸರಕಾಗಿ ಬದಲಾಗಿರುವುದು ಮಾತ್ರ ವಿಪರ್ಯಾಸ. ರಾಜ್ಯದಲ್ಲಿ ಇಂತಹ ಅಸಹ್ಯವೊಂದಕ್ಕೆ ನಾಂದಿ ಹಾಡಿದ ಕುಖ್ಯಾತಿಗೆ ಇದೀಗ ಬಿಜೆಪಿ ಶಾಸಕ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಪಾತ್ರರಾಗಿದ್ದಾರೆ. ಬಿಜೆಪಿ ಶಾಸಕ ರೇಣುಕಾ ಮಾಹಾತ್ಮೆಯೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಖಂಡನೆಗೆ ಗುರಿಯಾಗಿದೆ.

ಮಲೆನಾಡಿನಲ್ಲಿ ಕಳೆದ 8 ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆ ಸಾಮಾನ್ಯವಾಗಿ ತುಂಗಾ ಹಾಗೂ ಭದ್ರಾನದಿಯ ಒಡಲನ್ನು ತುಂಬಿಸಿದೆ. ಪರಿಣಾಮ ಶಿವಮೊಗ್ಗ ಮಾತ್ರವಲ್ಲದೆ ತುಂಗ-ಭದ್ರಾ ತಟದಲ್ಲಿರುವ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕನ್ನು ಸಹ ಪ್ರವಾಹ ಆವರಿಸಿದೆ.

Comments are closed.