ಮನೋರಂಜನೆ

ಸ್ಯಾಂಡಲ್​ವುಡ್ ನಟಿಯರ ವರಮಹಾಲಕ್ಷ್ಮಿ ಸಂಭ್ರಮ!

Pinterest LinkedIn Tumblr


ಬೆಂಗಳೂರು: ಸ್ಯಾಂಡಲ್​​ವುಡ್​​ನಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪ್ರತಿ ವರ್ಷದಂತೆ ಈ ವರ್ಷವೂ ನಟಿ ತಾರಾ ತಮ್ಮ ಮನೆಯಲ್ಲಿ ವರಮಹಾಲಕ್ಷ್ಮೀಯನ್ನು ಪ್ರತಿಷ್ಠಾಪಿಸಿ, ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿ ಪೂಜಿಸಿದರು.

ವಿಶೇಷ ಪೂಜೆಯ ಜೊತೆಗೆ ವಾದ್ಯಗೋಷ್ಟಿಯನ್ನು ಏರ್ಪಡಿಸಿದರು. ಪೂಜೆಯಲ್ಲಿ ಭಾಗವಹಿಸಿದ್ದ ಮಹಿಳೆಯರಿಗೆ ಬಾಗೀನದ ಜೊತೆಗೆ ಹೂವಿನ ಗಿಡ ನೀಡಿದರು. ತಾರಾ ಮನೆಯ ವರಮಹಾಲಕ್ಷ್ಮಿ ಹಬ್ಬದಲ್ಲಿ ಆನಂದ್​ ಗುರೂಜಿ, ನಿರ್ಮಾಪಕ ಉದಯ್​ ಮೆಹ್ತಾ ಸೇರಿದಂತೆ ಕುಟುಂಬಸ್ಥರು, ಸ್ನೇಹಿತರು ಭಾಗಿಯಾಗಿದರು.

ಹೆಣ್ಣುಮಕ್ಕಳ ಹಬ್ಬ ಅಂತಾ ಕರೆಸಿಕೊಳ್ಳುವ ವರಮಹಾಲಕ್ಷ್ಮೀ ಹಬ್ಬ. ಬೇಡಿದ ವರವನ್ನು ಆಕೆ ದಯಪಾಲಿಸುತ್ತಾಳೆ ಎಂದು ಲಕ್ಷ್ಮೀಯನ್ನು ಬಹಳ‌ ಸಂಭ್ರಮ, ಸಡಗರದಿಂದ ಆಚರಣೆ ಮಾಡಲಾಗುತ್ತೆ. ಇಂದು ರಾಜಧಾನಿಯಲ್ಲಿ ವರಮಹಾಲಕ್ಷ್ಮೀ ಹಬ್ಬವನ್ನು ಬಹಳ‌ ಸಂಭ್ರಮದಿಂದ ಆಚರಣೆ ಮಾಡಲಾಯ್ತು.

ನಾಡಿನೆಲ್ಲೆಡೆ ಸಂಭ್ರಮದ ವರಮಹಾಲಕ್ಷ್ಮೀ ಹಬ್ಬ!

ವರಮಹಾಲಕ್ಷ್ಮೀಯನ್ನು ನಗರದಾದ್ಯಂತ ಬಹಳ ಸಂಭ್ರಮ, ಸಡಗರದಿಂದ ಬರಮಾಡಿಕೊಳ್ಳಲಾಯಿತು. ನಗರದ ವಿವಿಧ ಲಕ್ಷ್ಮೀ ದೇವಸ್ಥಾನಗಳಲ್ಲಿ ಲಕ್ಷ್ಮೀಗೆ ವಿಶೇಷವಾಗಿ ಪೂಜೆ, ಪುನಸ್ಕಾರ, ಹೋಮ, ಅಲಂಕಾರ ಮಾಡಲಾಯ್ತು. ಜೊತೆಗೆ ಇತ್ತರ ಕರ್ನಾಟಕದಲ್ಲಿ ಆದ ಪ್ರವಾಹ ಕಡಿಮೆ ಆಗ್ಲಿ ಅಂತಾ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಲಾಯ್ತು.

ಲಕ್ಷ್ಮೀಯನ್ನ ಆರಾಧಿಸಿ ಸಂಭ್ರಮಪಟ್ಟ ಸಿಲಿಕಾನ್ ಮಂದಿ!

ಇಂದಿನ ವರಮಹಾಲಕ್ಷ್ಮೀ ಹಬ್ಬಕ್ಕೆ ಒಂದುವಾರದಿಂದ ಸಕಲ ರೀತಿಯ ಸಿದ್ದತೆಯನ್ನು ಮಾಡಿಕೊಳ್ಳಲಾಗಿತ್ತು. ದೇವಿಗೆ ಬೇಕಾದ ಹೂಗಳು, ಹಣ್ಣುಗಳು, ಅಲಂಕಾರಿಕ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರು ಸಹ ಅವುಗಳನ್ನು ಕೊಂಡು ಇಂದು ಲಕ್ಷ್ಮೀ ಪೂಜೆ ಮಾಡಿ ದೇವಿಯ ಬಳಿ ಇಷ್ಟಾರ್ಥ ಸಿದ್ದಿಗಾಗಿ ಪ್ರಾರ್ಥನೆ ಮಾಡಲಾಯ್ತು.

ಒಂದು ಕಡೆ ಮಳೆ ಮತ್ತೊಂದು ಕಡೆ ಗಗನಕ್ಕೇರಿದ ಬೆಲೆ ನಡುವೆ ಸಲಿಕಾನ್ ಸಿಟಿ ಜನ‌ ವರಮಹಾಲಕ್ಷ್ಮೀ ಹಬ್ಬವನ್ನು ಸಂಭ್ರಮದಿಂದಲೇ ಆಚರಿಸಿದರು. ಜೊತೆಗೆ ಪ್ರವಾಹ ಉಂಟಾಗಿರೋ ಸ್ಥಳದಲ್ಲಿರೋ ಜನರಿಗೆ ಅಪಾಯ ಆಗದಿರಿ ಅಂತಾ ಆ ದೇವಿಯ ಬಳಿ ಬೇಡಿಕೊಂಡರು.

Comments are closed.