ಮನೋರಂಜನೆ

ದೀಪಿಕಾ ಪಡುಕೋಣೆ ಬಿಟ್ಟು ಬೇರೊಬ್ಬರಿಗೆ ರೋಸ್​ ಕೊಟ್ಟು ಮುತ್ತಿಟ್ಟ ರಣಬೀರ್​!

Pinterest LinkedIn Tumblr


ಬಾಲಿವುಡ್​ ಅಂಗಳದ ದಿ ಮೋಸ್ಟ್ ಕ್ಯೂಟ್ ಕಪಲ್ ಎಂದರೆ ಅದು ಹ್ಯಾಂಡ್ಸಮ್ ಹೀರೋ ರಣವೀರ್ ಹಾಗೂ ಕ್ಯೂಟ್ ಡಾಲ್ ನಟಿ ದೀಪಿಕಾಪಡುಕೋಣೆ. ಆದರೇ ಇತ್ತೀಚಿಗೆ ಬ್ಯಾಕ್​ ಟು ಬ್ಯಾಕ್ ಚಿತ್ರಗಳಲ್ಲಿ ಬ್ಯುಸಿಯಾಗಿರುವ ನಟ ರಣವೀರ್ ರೋಸ್ ಕೊಟ್ಟು, ಕಿಸ್ ನೀಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಆದರೆ ರಣವೀರ್​ ಕಿಸ್​ ಮಾಡಿದ್ದು, ದೀಪಿಕಾ ಪಡುಕೋಣೆಗಲ್ಲ….ಇದೇನಿದು ಹೊಸ ವಿಷ್ಯ ಅಂದ್ರಾ ಈ ಸ್ಟೋರಿ ನೋಡಿ.

ಅಯ್ಯೋ ರಣ್ವೀರ್ ಡಿಪ್ಪಿ ಗೆ ಕಿಸ್ ನೀಡುವುದು ಒಂದು ವಿಷಯನ ಅಂದ್ಕೋಬೇಡಿ. ಯಾಕಂದ್ರೆ ವಿಷಯ ಅದಲ್ಲ. ರಣ್ವೀರ್ ಕೀಸ್ ನೀಡಿರುವುದು ಪತ್ನಿ ದೀಪಿಕಾಳಿಗೆ ಅಲ್ಲವೇ ಅಲ್ಲ.

ಶಾಕ್ ಆಯ್ತಾ.. ಇಂತಹ ವಿಚಾರ ತಿಳಿದ ಮೇಲೆ ಶಾಕ್ ಆಗಲೇ ಬೇಕಲ್ವ. ಈ ಕ್ಯೂಟ್ ಪೇರ್ ನಡುವೆ ವಿರಸ ಏನಾದ್ರು ಏರ್ಪಟ್ಟಿರಬಹುದಾ. ದಾಂಪತ್ಯದಲ್ಲಿ ಏನಾದರು ಕಿರಿಕಿರಿ ಉಂಟಾಗಿ ರಣ್​ವೀರ್ ಬೇರೆ ಹುಡುಗಿಯ ಜೊತೆ ಬ್ಯುಸಿ ಆಗ್ಬಿಟ್ರಾ ಅಂತೆಲ್ಲ ಪ್ರಶ್ನೆಗಳು ಉದ್ಬವವಾಗುತ್ತಿದ್ಯಾ, ನಿಮ್ಮ ಕ್ಯೂರಿಯಾಸಿಟಿಗೆ ಉತ್ತರು ಮುಂದೆ ಹೇಳ್ತೀವಿ ಓದಿ.

ಬಾಲಿವುಡ್ ನ ಸ್ಟಾರ್ ನಟ ರಣ್​ವೀರ್ ತಮ್ಮ 83ನೇ ಚಿತ್ರದ ಶೂಟಿಂಗ್​ಗಾಗಿ ಲಂಡನ್ ಪ್ರವಾಸದಲ್ಲಿದ್ದು, ಚಿತ್ರದ ಪ್ರಮುಖ ದೃಶ್ಯವೊಂದನ್ನು ಲಂಡನ್​​ನ ಸೌತ್​ಹಾಲ್​ನಲ್ಲಿ ಚಿತ್ರೀಕರಣ ಮಾಡಲಾಯ್ತು. ಈ ವೇಳೆ ರಣವೀರ್ ಶೂಟಿಂಗ್ ಸೆಟ್​​ಗೆ ಬರ್ತಿದ್ದಂತೆ ಈ ಸ್ಟಾರ್ ನಟನ ಫ್ಯಾನ್ಸ್ ಸಾಗರದೋಪಾದಿಯಲ್ಲಿ ಹರಿದುಬಂದರು.

ವಿಶೇಷ ಎಂದರೆ ಕಾಲಿನ ಸ್ವಾದೀನ ಕಳೆದು ಕೊಂಡು ವೀಲ್​ಚೇರ್​ನಲ್ಲಿ ಜೀವನ ನಡೆಸುತ್ತಿರುವ ವೃದ್ಧೆಯೊಬ್ಬರು ಬಹಳ ಉತ್ಸುಕತೆಯಿಂದ ತನ್ನ ನೆಚ್ಚಿನ ನಟ ರಣ್​ವೀರ್ ನೋಡಲು ಬಂದಿದ್ದರು. ಅಜ್ಜಿಯನ್ನು ನೋಡಿದ ರಣ್​ವೀರ್ ಪ್ರೀತಿಯಿಂದ ಅವರನ್ನು ಮಾತಾಡಿಸಿ ಗುಲಾಬಿ ಹೂವನ್ನು ನೀಡಿ ಸಿಹಿ ಮುತ್ತೊಂದನ್ನು ಕೊಟ್ಟರು.ಈ ವೀಡಿಯೋವನ್ನು ರಣ್​ವೀರ್ ಇನ್​ಸ್ಟಾಗ್ರಾಮ್​ನಲ್ಲಿ ಅಪ್​ಲೋಡ್ ಮಾಡಿದ್ದು, ಈ ವಿಡಿಯೋ ಇದೀಗಾ ಸೋಷಿಯಲ್ ಮೀಡಿಯಾದಲ್ಲಿ ಸಖತ್ ಸೌಂಡ್ ಮಾಡ್ತಿದೆ.

Comments are closed.