ಕರ್ನಾಟಕ

ಆ್ಯಂಬುಲೆನ್ಸ್​ ತಳ್ಳಿದ ಶಾಸಕ ಹ್ಯಾರೀಸ್​ ಪುತ್ರ ಮೊಹಮ್ಮದ್ ನಲಪಾಡ್!

Pinterest LinkedIn Tumblr


ಉದ್ಯಮಿ ಪುತ್ರನ ಮೇಲೆ ಹಲ್ಲೆ ನಡೆಸಿ ರಾಜ್ಯದಾದ್ಯಂತ ಸುದ್ದಿಯಾಗಿ ಎಮ್​ಎಲ್​ಎ ಹ್ಯಾರೀಸ್​ ಪುತ್ರ ಮೊಹಮ್ಮದ್ ನಲಪಾಡ್ ಇದೀಗ ತಮ್ಮ ಮಾದರಿ ಕಾರ್ಯಗಳ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಹೌದು ಇತ್ತೀಚಿಗಷ್ಟೇ, ರಸ್ತೆ ಮಧ್ಯೆ ನಿಂತು ಟ್ರಾಫಿಕ್ ಕಂಟ್ರೋಲ್ ಮಾಡಿದ್ದ ನಲಪಾಡ್ ಇದೀಗ ಕೆಟ್ಟು ನಿಂತಿದ್ದ ಆ್ಯಂಬುಲೆನ್ಸ್ ತಳ್ಳುವ ಮೂಲಕ ಸುದ್ದಿಯಾಗಿದ್ದಾರೆ.

ಹೌದು ಸೋಮವಾರ ಸುರಿಯುತ್ತಿರುವ ಮಳೆ ಮಧ್ಯೆ ಸಿ.ವಿ.ರಾಮನ್ ನಗರ ಮುಖ್ಯರಸ್ತೆಯಲ್ಲಿ ಆ್ಯಂಬುಲೆನ್ಸ್​ ವೊಂದು ಕೆಟ್ಟು ನಿಂತಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಸಾಗುತ್ತಿದ್ದ ನಲಪಾಡ್ ಇದನ್ನು ಗಮನಿಸಿ ರಸ್ತೆಗಿಳಿದು ಸ್ನೇಹಿತರ ಜೊತೆ ಆ್ಯಂಬುಲೆನ್ಸ್​ ತಳ್ಳಿ ಡ್ರೈವರ್​ಗೆ ಸಹಾಯ ಮಾಡಿದ್ದಾರೆ.

ಶಾಸಕರ ಪುತ್ರ ಹೀಗೆ ಆ್ಯಂಬುಲೆನ್ಸ್​ ತಳ್ಳಲು ಮುಂಧಾಗುತ್ತಿದ್ದಂತೆ ಸ್ಥಳೀಯರು ವಿಡಿಯೋ ಮಾಡಿದ್ದು, ಈ ವಿಡಿಯೋ ಇದೀಗ ವೈರಲ್​ ಆಗುತ್ತಿದೆ. ಎಲ್ಲರೂ ನಲಪಾಡ್ ಸಾಮಾಜಿಕ ನಡೆಯನ್ನು ಶ್ಲಾಘಿಸಿದ್ದಾರೆ. ಉದ್ಯಮಿ ಲೋಕ್ ನಾಥ್ ಪುತ್ರ ವಿದ್ವತ್​ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ನಲಪಾಡ್ ಸಧ್ಯ ಜಾಮೀನಿನ ಮೇಲೆ ಹೊರಬಂದಿದ್ದಾರೆ.

Comments are closed.