ಮನೋರಂಜನೆ

ವಿಶಿಷ್ಟ ಅಭಿಮಾನಿಯನ್ನ ಮನೆಗೆ ಆಹ್ವಾನಿಸಿದ ನಟ ವಸಿಷ್ಠ..!

Pinterest LinkedIn Tumblr


ಬೆಂಗಳೂರು: ಕಲಾವಿದ ಹಾಗೂ ಅಭಿಮಾನಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಅಭಿಮಾನಿಯ ಹೊರತು ಕಲಾವಿದನಿಲ್ಲ, ಕಲಾವಿದನ ಹೊರತು ಅಭಿಮಾನಿ ಇರೋಕ್ಕೆ ಸಾಧ್ಯವಿಲ್ಲ. ಇಲ್ಲಿಯವರೆಗೂ ನೀವು ಬಗೆಬಗೆಯ ಅಭಿಮಾನಿಗಳ ಅಭಿಮಾನದ ಕಥೆಗಳನ್ನ ನೋಡಿರ್ತೀರಾ, ಕೇಳಿರ್ತೀರಾ. ಆದರೆ, ಈಗ ನಾವು ನಿಮ್ಮ ಮುಂದೆ ಹೇಳುತ್ತಿರುವಂತಹ ವಿಚಿತ್ರ ಸ್ಟೋರಿ ಕೇಳಿರೋಕ್ಕೆ ಚಾನ್ಸೇ ಇಲ್ಲ. ಇಷ್ಟಕ್ಕೂ ಆ ಸ್ಟಾರ್ ಯಾರು(?) ಅವರ ಆ ಸ್ಪೆಷಲ್ ಅಭಿಮಾನಿ ಆದವರು ಯಾರು ಅಂತೀರಾ(?) ನೀವೇ ಒಮ್ಮೆ ಓದಿಬಿಡಿ.

ಯೆಸ್, ಅಭಿಮಾನಿಗಳನ್ನ ದೇವ್ರು ಅಂದರು ಅಣ್ಣಾವರು. ಅಭಿಮಾನಿಗಳೇ, ಸೆಲೆಬ್ರೆಟಿಗಳು ಅಂದಿದ್ದು ಚಾಲೆಂಜಿಂಗ್​ ಸ್ಟಾರ್ ದರ್ಶನ್. ಅಭಿಮಾನಿಗಳಿಂದ್ಲೇ ಇಂದು ಚಿತ್ರರಂಗದ ನಟ, ನಟಿಯರು ಸ್ಟಾರ್ ಅಂತ ಕರೆಸಿಕೊಳ್ತಿರೋದು.ಅಭಿಮಾನಿಗಳಿದ್ರೇನೇ ಸ್ಟಾರ್​ಗಳು. ಸಿನಿಮಾ ನೋಡಿ ಜನ ಮೆಚ್ಚಿಕೊಂಡ್ರೇನೇ ಚಿತ್ರರಂಗ. ಹಾಗೇ ಸ್ಟಾರ್​ಗಳಿಗೂ ಕೂಡ ಅಭಿಮಾನಿಗಳಂದ್ರೆ ಅಷ್ಟೇ ಪ್ರೀತಿ. ಅಭಿಮಾನಿಗಳನ್ನ ಭೇಟಿ ಮಾಡೋದಂದರೆ ಅವರಿಗೂ ಒಂದು ಸಂಭ್ರಮವಾಗಿರುತ್ತದೆ.

ಇತ್ತ ಅಭಿಮಾನಿಗಳು ಕೂಡ ಅಷ್ಟೇ. ತಮ್ಮ ನೆಚ್ಚಿನ ನಟ ನಟಿಯರನ್ನ ನೋಡೋದೇ ಅವ್ರಿಗೊಂದು ಖುಷಿ. ನೆಚ್ಚಿನ ಸೆಲೆಬ್ರೆಟಿಯ ಹುಟ್ಟುಹಬ್ಬ ಬಂದ್ರೆ ಸಾಕು ಹಬ್ಬದ ವಾತಾವರಣವನ್ನೇ ಸೃಷ್ಟಿಸಿಬಿಡ್ತಾರೆ. ನೆಚ್ಚಿನ ನಟನಿಗಾಗಿ ರಕ್ತದಲ್ಲಿ ಪತ್ರ ಬರೆಯೋರು ಇದ್ದಾರೆ. ಮೈ ಮೇಲೆ ಚಿತ್ತಾರವನ್ನ ಬಿಡಿಸಿಕೊಳ್ಳೋರು ಇದ್ದಾರೆ. ತಮ್ಮ ಫೇವರಿಟ್​ ಸ್ಟಾರ್​ನ ಒಮ್ಮೆಯಾದ್ರೂ ಭೇಟಿ ಮಾಡಿದ್ರೆ ಸಾಕು ಅಂತ ಕಾಯ್ತಿರೋರೂ ಇದ್ದಾರೆ.

ಸಿನಿಮಾ ಸೆಲೆಬ್ರೆಟೀಸ್​ ಮತ್ತು ಈ ಅಭಿಮಾನಿಗಳ ಸಂಬಂಧ ಎಂಥದ್ದು ಅಂತ ಬಿಡಿಸಿ ಹೇಳೋಕ್ಕಾಗಲ್ಲ ಬಿಡಿ. ಅಭಿಮಾನಿಗಳು ಒಮ್ಮೆ ಪ್ರೀತಿಪೂರ್ವಕ ಮನವಿ ಮಾಡಿದ್ರೆ ಸಾಕು, ನಮ್ಮ ಸ್ಟಾರ್​ಗಳು ಚಾಚು ತಪ್ಪದೇ ಅದನ್ನ ಪಾಲಿಸ್ತಾರೆ.ಅದೇ ಅಭಿಮಾನಿಗಳಿಗೆ ನಮ್ಮ ಸೆಲೆಬ್ರೆಟಿಸ್​ ಕೊಡೋ ಗೌರವ. ಇನ್ನು ಸ್ಟಾರ್​ಗಳು ಕೂಡ ಯಾವುದೇ ವಿಷ್ಯದಲ್ಲಿ ಅಭಿಮಾನಿಗಳಿಗೆ ಒಂದು ಕರೆ ಕೊಟ್ರೆ ಸಾಕು ಲಕ್ಷಾಂತರ ಅಭಿಮಾನಿಗಳು ಆ ವಿಷ್ಯವಾಗಿ ಕೈ ಜೋಡಿಸ್ತಾರೆ.

ಎಲ್ಲಾ ನಟ ನಟಿಯರಿಗೂ ಅವ್ರದ್ದೇ ಆದ ಫ್ಯಾನ್​ ಫಾಲೋವರ್ಸ್​ ಇರ್ತಾರೆ. ಕೆಲವ್ರಿಗೆ ಯಶ್ ಶಿವಣ್ಣ ಇಷ್ಟ, ಮತ್ತು ಕೆಲವ್ರಿಗೆ ದರ್ಶನ್ ಸುದೀಪ್ ಇಷ್ಟ, ಇನ್ನು ಕೆಲವ್ರಿಗೆ ಪುನೀತ್ ರಾಜ್​ಕುಮಾರ್ ಇಷ್ಟ. ಈ ಎಲ್ಲಾ ಇಷ್ಟಗಳಿಗೂ ಒಂದೊಂದು ಕಾರಣ ಇರುತ್ತೆ. ಕೆಲವರು ದರ್ಶನ್​ರ ಆ್ಯಕ್ಷನ್​ ನೋಡಿ ಫ್ಯಾನ್ಸ್​ ಆಗಿರ್ತಾರೆ. ಇನ್ನು ಕಲವ್ರು ಸುದೀಪ್​ ಆ್ಯಕ್ಟಿಂಗ್​ ನೋಡಿ ಫ್ಯಾನ್ಸ್​ ಆಗಿರ್ತಾರೆ. ಮತ್ತು ಕೆಲವ್ರು ಪವರ್​ ಸ್ಟಾರ್​ಗೆ ಡಾನ್ಸ್​ಗೆ ಫಿದಾ ಆಗಿರ್ತಾರೆ. ಅದೇ ರೀತಿ ಇಲ್ಲೊಬ್ರು ಅಭಿಮಾನಿ ಚಾಕ್ಲೆಟ್ ವಿಲನ್ ವಸಿಷ್ಟ ಸಿಂಹನ ಬೇಸ್​ ವಾಯ್ಸ್​ಗೆ ಅಭಿಮಾನಿಯಾಗಿದ್ದಾರೆ. ಈ ಅಭಿಮಾನಿಯ ಕಥೆನೇ ಸಖತ್​ ಇಂಟ್ರೆಸ್ಟಿಂಗ್​ ಆಗಿದೆ ನೋಡಿ.

ವಸಿಷ್ಟ ಎನ್​ ಸಿಂಹ. ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ. ರಾಜಾಹುಲಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಪರಿಚಯವಾದ್ರು. ಆ ನಂತ್ರ ಸಾಕಷ್ಟು ಸಿನಿಮಾಗಳನ್ನ ಮಾಡಿದ್ರೂ ದೊಡ್ಡ ಮಟ್ಟದಲ್ಲಿ ಗುರುತಿಸಿಕೊಂಡಿದ್ದು ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರದಿಂದ. ಈಗಂತೂ ಮಫ್ತಿ, ಟಗರು, ಕೆಜಿಎಫ್​ ಮೂಲಕ ವಸಿಷ್ಟ ಎನ್​ ಸಿಂಹ ಸ್ಯಾಂಡಲ್​ವುಡ್​ನಲ್ಲಿ ಬಹು ದೊಡ್ಡ ಛಾಪನ್ನೇ ಮೂಡಿಸಿದ್ದಾರೆ.

ಈಗಾಗ್ಲೇ ನಟ ವಸಿಷ್ಟಗೆ ಅವ್ರದ್ದೇ ಆದ ಫ್ಯಾನ್​ ಫಾಲೋವರ್ಸ್​ ಇದ್ದಾರೆ. ಬೇಸ್ ವಾಯ್ಸ್, ಹೈಟ್, ಪರ್ಸನಾಲಿಟಿ, ಖಡಕ್​ ಲುಕ್​ ವಸಿಷ್ಟ ಪ್ಲಸ್ ಪಾಯಿಂಟ್. ಕಾಲೇಜು ಹುಡುಗ, ಹುಡುಗಿಯರಿಗಂತೂ ವಸಿಷ್ಟ ಅಂದ್ರೆ ಹಾಟ್​ ಫೇವರಿಟ್. ಅಂದ್ಹಾಗೇ ಈ ಅಭಿಮಾನಿಗಳಲ್ಲಿ ನಿನ್ನೆ ಒಬ್ರು ಸ್ಪೆಷಲ್​ ಅಭಿಮಾನಿ ವಸಿಷ್ಟರನ್ನ ಭೇಟಿ ಮಾಡಿದ್ದಾರೆ. ಆ ಅಭಿಮಾನಿ ಯಾರು..? ಯಾಕೆ ಅಷ್ಟು ಸ್ಪೆಷಲ್​ ಅಂತ ಹೇಳ್ತೀವಿ ನೋಡಿ.

ಯೆಸ್, ಈಕೆ ಹೆಸರು ಸೌಂದರ್ಯ. ಇದೀಗ ಇವರು 9 ತಿಂಗಳ ತುಂಬು ಗರ್ಭಿಣಿಯಾಗಿದ್ದಾರೆ. ಇವರಿಗೆ ವಸಿಷ್ಠ ಸಿಂಹ ಅಂದರೆ ಪಂಚಪ್ರಾಣ. ತುಂಬು ಗರ್ಭಿಣಿಯಾದವರಿಗೆ ಸಾಕಷ್ಟು ಬಯಕೆಗಳು ಇರುತ್ತವೆ. ಅದು ತಿನ್ಬೇಕು, ಇದು ತಿನ್ಬೇಕು. ಅದು ಬೇಕು ಇದು ಬೇಕು ಅಂತ. ಆದರೆ, ಆಕೆಗೆ ಮಾತ್ರ ವಸಿಷ್ಠ ಸಿಂಹರನ್ನ ನೋಡ್ಬೇಕು, ಮಾತಾಡಿಸ್ಬೇಕು ಅನ್ನೋದೇ ಬಯಕೆಯಾಗಿದೆ ಎಂಬುದೆ ವಿಶಿಷ್ಟ ಸುದ್ದಿಯಾಗಿದೆ.

Tv5 ಕನ್ನಡ ವಾಹಿನಿಯ ಮೂಲಕ ಈ ವಿಶೇಷ ಅಭಿಮಾನಿಯ ವಿಷಯ ತಿಳಿಯುತ್ತಿದ್ದಂತೆ ನಟ ವಸಿಷ್ಠ ಸಿಂಹ ಅಭಿಮಾನಿ ಸೌಂದರ್ಯರನ್ನ ಭೇಟಿ ಮಾಡೋ ಮನಸ್ಸು ಮಾಡುತ್ತಾರೆ. ಸ್ವತ: ಸೌಂದರ್ಯ ಮತ್ತು ಕುಟುಂಬದವರನ್ನು ಮನೆಗೆ ಕರೆಸಿಕೊಂಡು ಭೇಟಿ ಮಾಡುತ್ತಾರೆ. ಆ ಭೇಟಿಯ ಕ್ಷಣ ನಿಜಕ್ಕೂ ಸೌಂದರ್ಯರಿಗೆ ದೊಡ್ಡ ಖುಷಿ ತಂದುಕೊಟ್ಟಿದೆ. ವಸಿಷ್ಠರನ್ನ ಭೇಟಿ ಮಾಡಿ ಖುಷಿಯಿಂದ ಮಾತನಾಡಿಸಿದ್ದಾರೆ.

ನಟ ವಸಿಷ್ಟ ಸಿಂಹ ಕೂಡ ವಿಶೇಷ ಅಭಿಮಾನಿಯನ್ನ ಭೇಟಿ ಮಾಡಿ ಸಂತಸ ವ್ಯಕ್ತಪಡಿಸಿದ್ರು. ಖುದ್ದು ಅವ್ರೇ ತಮ್ಮ ಕೈಯ್ಯಾರೆ ಅಭಿಮಾನಿಗೆ ಟೀ ಮಾಡಿಕೊಟ್ಟಿದ್ದು ವಿಶೇಷವಾಗಿತ್ತು.

ಇನ್ನು ಅಭಿಮಾನಿ ಸೌಂದರ್ಯ, ವಸಿಷ್ಟರನ್ನ ಭೇಟಿ ಮಾಡಿ, ತಮ್ಮ ಮಾತುಗಳ ಮೂಲಕ ಸಂತಸವನ್ನ ವ್ಯಕ್ತಪಡಿಸಿದ್ರು. ಪ್ರತಿದಿನ ರಾತ್ರಿ ಕನಸಿನಲ್ಲಿ ವಸಿಷ್ಟನೇ ಕಾಣಿಸ್ತಾ ಇದ್ರಂತೆ. ಟಿವಿ ಹಾಕಿದ್ರೂ ಅವ್ರದ್ದೇ ಹಾಡುಗಳು, ಸಿನಿಮಾ ಬರ್ತಾ ಇತ್ತಂತೆ. ವಿಶೇಷ ಅಂದ್ರೆ ಸೌಂದರ್ಯಗೇ ಗಂಡು ಮಗು ಆದ್ರೆ ವಸಿಷ್ಟ ಅಂತ್ಲೇ ಹೆಸರಿಡ್ತಾರಂತೆ ಸೌಂದರ್ಯ.

ಇನ್ನು ವಸಿಷ್ಟ ಕೂಡ ಅಭಿಮಾನಿಯನ್ನ ಕಂಡು ಖುಷಿ ಪಟ್ರು. ಗಂಡು ಮಗು ಆದ್ರೆ ವಸಿಷ್ಟ ಅಂತ ಹೆಸ್ರು, ಹೆಣ್ಣು ಮಗು ಆದ್ರೆ ಏನ್​ ಹೆಸರಿಡೋದು ಅಂದಿದ್ದಕ್ಕೆ ವಸಿಷ್ಟ ಒಂದೊಳ್ಳೆ ಹೆಸ್ರನ್ನೇ ಸಜೆಸ್ಟ್ ಮಾಡಿದ್ದಾರೆ.

ಒಟ್ಟಾರೇ ನಿನ್ನೆ ವಿಶೇಷ ಅಭಿಮಾನಿಯನ್ನ ಭೇಟಿ ಮಾಡಿದ ವಸಿಷ್ಠ ಎನ್​ ಸಿಂಹ, ಅಭಿಮಾನಿಯನ್ನ ಅತಿಥಿಯಂತೆ ಸತ್ಕರಿಸಿ, ಪ್ರೀತಿಯಿಂದ ಮಾತನಾಡಿಸಿ, ಸ್ವಲ್ಪ ಹೊತ್ತು ಸಮಯ ಕಳೆದ್ರು. ಇದು ಅಭಿಮಾನಿಯಾದ ಸೌಂದರ್ಯರಿಗೂ ಸಂತಸ ತಂದುಕೊಡ್ತು. ಸದ್ಯ ಪುಟ್ಟ ಕಂದಮ್ಮನ ನಿರೀಕ್ಷೆಯಲ್ಲಿರೋ ಸೌಂದರ್ಯ ಅವರಿಗೆ ಒಳ್ಳೆಯದಾಗ್ಲಿ ಅಂತ ನಾವೂ ವಿಶ್ ಮಾಡೋಣ.

Comments are closed.