
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದ್ದು ಸದ್ಯ ಮುಖ್ಯಮಂತ್ರಿಯಾಗಿ ಬಿಎಸ್ ಯಡಿಯೂರಪ್ಪ ಅವರು ಪ್ರಮಾಣವಚನ ಸ್ವೀಕಾರ ಮಾಡಿದ್ದಾರೆ. ಉಳಿದ ಮಂತ್ರಿ ಮಂಡಲ ವಿಸ್ತರಣೆಯನ್ನು ಆಗಸ್ಟ್ 8 ಅಥವಾ 9 ರಂದು ಮಾಡುವ ಸಾಧ್ಯತೆಯಿದೆ.
ಈ ಬಾರಿ ಬಿಎಸ್ವೈ ಸಂಪುಟದಲ್ಲಿ ಈ ಹಿಂದೆ ಮಂತ್ರಿಗಿರಿ ಪಟ್ಟ ಅಲಂಕಾರಿಸಿದ್ದ ಶಾಸಕರಿಗೆ ಸಿಗುವ ಸಾಧ್ಯತೆ ಕಡಿಮೆ ಎಂದು ಹೇಳಲಾಗುತ್ತಿದೆ. ಹಿರಿಯ ನಾಯಕರನ್ನು ಹೊರತುಪಡಿಸಿ ಉಳಿದವರಿಗೆ ಮಂತ್ರಿಗಿರಿ ಡೌಟ್ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿ ಬರುತ್ತಿವೆ.
ಅಲ್ಲದೇ ಈ ಹಿಂದೆ ಮಂತ್ರಿ ಆಗಿದ್ದ ಕೆಲವರೇ ಈ ಮಾತನ್ನು ಹೇಳ್ತಿದ್ದಾರೆ. ಹಿರಿಯ ನಾಯಕರನ್ನು ಹೊರತುಪಡಿಸಿ ಬಿಎಸ್ ಯಡಿಯೂರಪ್ಪ ಅವರ ಆಪ್ತರಲ್ಲಿ ಒಂದಿಬ್ಬರಿಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡುವ ಸಾಧ್ಯತೆಯಿದೆ. ಹೀಗಾಗಿ ತೆರೆ ಮರೆಯಲ್ಲಿ ಮಂತ್ರಿ ಸ್ಥಾನಕ್ಕಾಗಿ ಅವರಿವರಿಂದ ಬಿಎಸ್ವೈಗೆ ಹೇಳಿಸುವ ಪ್ರಯತ್ನವನ್ನು ಸಚಿವ ಸ್ಥಾನದ ಆಕಾಂಕ್ಷಿಗಳು ಮಾಡುತ್ತಿದ್ದಾರೆ.
ಇನ್ನು ಬಿಎಸ್ವೈ ಆಪ್ತ ವಲಯದಲ್ಲಿ ಗುರುತಿಸಿಕೊಂಡವರಿಗೆ ನೇರವಾಗಿ ಮಂತ್ರಿ ಸ್ಥಾನ ಕೇಳಲು ಹಿಂದೇಟು ಹಾಕಲಾಗುತ್ತಿದ್ದು ,ಸಾಹೇಬರು ತಪ್ಪು ತಿಳ್ಕೊತಾರೆ ಕೇಳಿದರೆ ಎನ್ನುವ ಭಯ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಕೆಲವರು ಮೂರನೇ ವ್ಯಕ್ತಿಯಿಂದ ಹೇಳಿಸುವ ಪ್ರಯತ್ನ ಮಾಡುತ್ತಿದ್ದಾರೆ. ಯಾರೇ ಹೇಳಿದರು ಸಹ ಹೈಕಮಾಂಡ್ ತೀರ್ಮಾನ ಏನ್ ಆಗಿರತ್ತೋ ಗೊತ್ತಿಲ್ಲ, ನೋಡೋಣ ಎಂದು ಸಿಎಂ ಬಿಎಸ್ವೈ ಅವರು ಹೇಳುತ್ತಿದ್ದಾರಂತೆ.
Comments are closed.