ಕರ್ನಾಟಕ

ಮೋದಿ ಕನಸಿಗೆ ಯಡಿಯೂರಪ್ಪ ಸಾಥ್​

Pinterest LinkedIn Tumblr


ಬೆಂಗಳೂರು: ಬೆಳೆ ಸಮೀಕ್ಷೆ ಕುರಿತು ಚರ್ಚೆ ಆಗಿದೆ ಯುವಕ-ಯುವತಿಗೆ ಇದರಿಂದ ಕೆಲಸ ಸಿಕ್ಕಿದೆ ಸಮೀಕ್ಷೆ ಬಗ್ಗೆ ಇನ್ನಷ್ಟು ಮಾಹಿತಿ ನೀಡುವ ಕೆಲಸ ಸರ್ಕಾರ ಮಾಡುತ್ತೆ ಎಂದು ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಅವರು ಗುರುವಾರ ಹೇಳಿದರು.

ವಿಧಾನಸೌಧದಲ್ಲಿ ನಡೆದ ವಸತಿ ಇಲಾಖೆಯ ಸಭೆಯ ಬಳಿಕ ಮಾತನಾಡಿದ ಸಿಎಂ, ನಿಯಮ ರೂಪಿಸುವ ಕುರಿತು ಚರ್ಚೆ ಆಗಿದೆ ಫೈಲ್ ಕಳಿಸಲು ಹೇಳಿದ್ದೇನೆ. ಫೈಲ್ ನೋಡಿ ಯಾರಿಗೆ ಇದು ಅನ್ವಯ ಆಗುತ್ತೆ ಅಂತ ನೋಡಿ ಇಂದೇ ಆದೇಶ ಹೊರಡಿಸಲು ಸೂಚನೆ ನೀಡುತ್ತೇನೆ ಎಂದು ಅವರು ಋಣಮುಕ್ಯ ಕಾಯ್ದೆ ನಿಯಮ ರೂಪಿಸುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದರು.

ಇನ್ನು ರಾಜ್ಯದ ಆರ್ಥಿಕ ಪರಿಸ್ಥಿತಿ ಉತ್ತಮವಾಗಿ ಇದೆ ನಮ್ಮ ಇತಿ-ಮಿತಿಯಲ್ಲಿ ಹಣಕಾಸಿನ ಸ್ಥಿತಿ ಇದೆ ಸಂಪನ್ಮೂಲ ಕ್ರೂಢೀಕರಣ ಕೂಡಾ ನಿರೀಕ್ಷೆ ಮಟ್ಟದಲ್ಲಿ ಇದ್ದು ಯಾವುದರಲ್ಲೂ ನಾವು ಹಿಂದೆ ಬಿದ್ದಿಲ್ಲ, ಆರ್ಥಿಕ ಸ್ಥಿತಿ ಬಗ್ಗೆ ನಮಗೆ ತೃಪ್ತಿಯಿದೆ ಎಂದು ಮುಖ್ಯಮಂತ್ರಿ ಬಿಎಸ್​ವೈ ಅವರು ತಿಳಿಸಿದರು.

ಅಲ್ಲದೇ ಮೋದಿ ಅವರ ಕನಸು 3-4 ವರ್ಷಗಳಲ್ಲಿ ಬಡವರಿಗೆ ಮನೆ ಸಿಗಬೇಕು ಅಂತ ಇದ್ದು, ಈ ನಿಟ್ಟಿನಲ್ಲಿ ಇವತ್ತು ವಸತಿ ಇಲಾಖೆ ಸಭೆ ಮಾಡಿದ್ದೇನೆ. 1 ಲಕ್ಷ ಮನೆ ನಿರ್ಮಾಣ ಕೆಲಸ ಪ್ರಾರಂಭವಾಗಿದೆ. ಎರಡು ಲಕ್ಷ ಮನೆ ನಿರ್ಮಾಣ ನಮ್ಮ ಗುರಿ, ಇದಕ್ಕಾಗಿ 1 ಸಾವಿರ ಎಕರೆ ಜಾಗ ಈಗಾಗಲೇ ಗುರುತಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸದ್ಯ 14ಕ್ಕಿಂತ ಹೆಚ್ಚು ಮಹಡಿ ಮನೆಗಳ ನಿರ್ಮಾಣ ಕಾರ್ಯ ಪ್ರಾರಂಭವಾಗಿದೆ ಗುಜರಾತ್​ನಲ್ಲೂ ಇದೇ ಮಾದರಿಯ ಮನೆ ನಿರ್ಮಾಣದ ಕೆಲಸ ಆಗಿದೆ. ನಮ್ಮ ರಾಜ್ಯದಲ್ಲೂ ಬಡವರಿಗೆ ಮನೆ ಕೊಡುವ ಕೆಲಸ ಮಾಡ್ತೀವಿ ಎಂದು ವಿಧಾನಸೌಧದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಅವರು ನುಡಿದರು.

Comments are closed.