ಮನೋರಂಜನೆ

ಗಂಡನ ಮಡಿಲಲ್ಲಿ ನಟಿ ಪ್ರಿಯಾಂಕ ಚೋಪ್ರಾ ಪೋಟೋಶೂಟ್​​!

Pinterest LinkedIn Tumblr


ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟಿವ್ ಆಗಿರುವ ಬಿಟೌನ್ ಬೆಡಗಿ ನಟಿ ಪ್ರಿಯಾಂಕ ಚೋಪ್ರಾ ಇದೀಗಾ ಮತ್ತೊಮ್ಮೆ ಸುದ್ದಿಯಾಗಿದ್ದರೆ ಏನಪ್ಪಾ ಅದು ಅಂತೀರಾ ಹಾಗದರೆ ಈ ಕೆಳಗಿನ ಸ್ಟೋರಿ ಓದಿ.

ಹೌದು ಬಾಲಿವುಡ್ ನಟಿ ಪ್ರಿಯಾಂಕ ಚೋಪ್ರಾ ಸಿನಿಮಾಗಳಲ್ಲಿ ಕಾಣಿಸಿಕೊಳ್ಳದಿದ್ದರೂ, ಸದಾ ಸೋಷಿಯಲ್ ಮೀಡಿಯಾದಲ್ಲಿ ಆಕ್ಟೀವ್ ಆಗಿರುವುದರ ಮೂಲಕ ಅಭಿಮಾನಿಗಳೊಂದಿಗೆ ಸದಾ ಟಚ್ ನಲ್ಲಿರುತ್ತಾರೆ. ಇದೀಗಾ ಪ್ರಿಯಾಂಕ ಚೋಪ್ರಾ ಪತಿ ನಿಕ್ ಜೋನಾಸ್ ಜೊತೆ ವೆಕೇಶನ್​ ಮೂಡ್​ನಲ್ಲಿದ್ದು, ಮಿಯಾಮಿಯಲ್ಲಿ ಜಾಲಿಯಾಗಿ ಎಂಜಾಯ್​ ಮಾಡುತ್ತಿರುವ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಹೌದು ಇತ್ತೀಚೆಗಷ್ಟೇ ನಟಿ ಪ್ರಿಯಾಂಕ ಚೋಪ್ರಾ ಪತಿ ನಿಕ್ ಸಹೋದರ ವಿವಾಹದಲ್ಲಿ ಪಾಲ್ಗೊಂಡು ಪಿಕ್ ಸ್ಯಾರಿ ಉಟ್ಟು ಕಂಗೊಳಿಸುವುದರ ಮೂಲಕ ಫೋಟೋಗೆ ಫೋಸ್ ಕೊಟ್ಟು ಸುದ್ದಿಯಾಗಿದ್ದರು. ಇನ್ನೂ ಸೀರೆಯುಟ್ಟು ಅಪ್ಪಟ ಭಾರತೀಯ ನಾರಿಯಂತೆ ಕಾಣಿಸುತ್ತಿದ್ದ ನಟಿ ಪ್ರಿಯಾಂಕ ಚೋಪ್ರಾ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದ್ದರು.

ಇದೀಗಾ ಪಿಗ್ಗಿ ಪತಿ ನಿಕ್ ಜೊತೆ ತಮ್ಮ ರಜೆಯನ್ನು ಜಾಲಿಯಾಗಿ ಕಳೆಯುತ್ತಿದ್ದು, ಪತಿ ನಿಕ್ ಜೊತೆ ರೋಮ್ಯಾಂಟಿಕ್ ಮೂಡ್ ನಲ್ಲಿದ್ದಾರೆ. ಇನ್ನೂ ಈ ರೋಮ್ಯಾಂಟಿಕ್ ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಸದ್ಯ ಸಖತ್ ವೈರಲ್ ಆಗಿದೆ. ಒಂದು ಫೋಟೊನಲ್ಲಿ ಹಾಟ್ ಆಗಿ ಫೋಸ್ ಕೊಟ್ಟಿರುವ ಪಿಗ್ಗಿ ಮತ್ತೆರಡು ಫೋಟೊಗಳಲ್ಲಿ ಪತಿ ನಿಕ್ ಮಡಿಲಿನಲ್ಲಿ ಮಲಗಿಕೊಂಡು ನಿಕ್ ನನ್ನು ಪ್ರೀತಿಯಿಂದ ನೋಡುತ್ತಿರುವ ಫೋಟೊ ವೈರಲ್ ಆಗಿದೆ.

Comments are closed.