
ಸರ್ಕಾರ ಪತನಕ್ಕೆ ರೇವಣ್ಣ ಕಾರಣ ಎಂಬ ಆರೋಪಗಳು ಕೇಳಿಬಂದಿದ್ದ ಬೆನ್ನಲ್ಲೇ, ಸಂಸದ ಪ್ರಜ್ವಾಲ್ ರೇವಣ್ಣ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರ ಪತನಗೊಳ್ಳಲು ಕಾಂಗ್ರೆಸಿಗರೇ ಕಾರಣ. ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತಾಗಿದೆ ಎನ್ನುವ ಮೂಲಕ ಹೊಸ ಬಾಂಬ್ ಸಿಡಿಸಿದ್ದಾರೆ.
ಹಾಸನದಲ್ಲಿ ಮಾತನಾಡಿದ ಸಂಸದ ಪ್ರಜ್ವಲ್ ರೇವಣ್ಣ, ಕಾಂಗ್ರೆಸ್ ನಲ್ಲಿರುವ ಕೆಲವು ಶಾಸಕರು ಮಂತ್ರಿಯಾಗಬೇಕೆಂಬ ಅಧಿಕಾರದ ಆಸೆಯಿಂದ ಹಣ ಪಡೆದು ಮೈತ್ರಿ ಸರ್ಕಾರಕ್ಕೆ ರಾಜೀನಾಮೆ ನೀಡಿದ್ದಾರೆ. ಬಿಜೆಪಿ ಪಕ್ಷ ಸೇರಿ ಅಧಿಕಾರಕ್ಕೆ ಬರಬೇಕೆಂಬ ದುರುದ್ದೇಶದಿಂದ ರಾಜೀನಾಮೆ ನೀಡಿ ಸರ್ಕಾರ ಬೀಳಿಸಿದ್ದಾರೆ. ಎಂದು ಹೇಳಿದ್ದಾರೆ
ಕಾಂಗ್ರೆಸ್ ಪಕ್ಷದಲ್ಲಿನ ಆಂತರಿಕ ಒಡಕುಗಳಿಂದ ಕಾಂಗ್ರೆಸಿಗರೆ ಅವರವರ ವೈಯಕ್ತಿಕ ಕಾರಣಕ್ಕೆ ಸರ್ಕಾರ ಬೀಳಿಸಿದ್ದಾರೆ. ಇದೀಗಾ ಕೋತಿ ಮೊಸರು ತಿಂದು ಮೇಕೆ ಮೂತಿಗೆ ಒರೆಸಿತು ಎಂಬಂತೆ ಸರ್ಕಾರ ಬೀಳಲು ನಮ್ಮ ತಂದೆಯ ಕಾರಣವೆಂದು ನಮ್ಮ ತಂದೆ ಮೇಲೆ ಗೂಬೆ ಕೂರಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಪ್ರಜ್ವಲ್ ರೇವಣ್ಣ ಪರೋಕ್ಷವಾಗಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸಿದ್ದಾರೆ.
Comments are closed.