ಮನೋರಂಜನೆ

ತಮಿಳು ನಟ ಧನುಷ್ ಗೆ 36ರ ಹುಟ್ಟುಹಬ್ಬದ ಸಂಭ್ರಮ!

Pinterest LinkedIn Tumblr


ಕಾಲಿವುಡ್ ನಟ ಧನುಷ್ ಗೆ ಇಂದು 36ರ ಹುಟ್ಟುಹಬ್ಬದ ಸಂಭ್ರಮ. ಇನ್ನೂ ಕುಟುಂಬ ಮತ್ತು ಸ್ನೇಹಿತರ ಜೊತೆ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿರುವ ಧನುಷ್ ಗೆ ಅಭಿಮಾನಿಗಳು ಸೇರಿದಂತೆ ಹಲವು ಚಿತ್ರರಂಗದ ಗಣ್ಯರು ಶುಭ ಹಾರೈಸುತ್ತಿದ್ದಾರೆ.

ಇನ್ನೂ ಸ್ಯಾಂಡಲ್ ವುಡ್ ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಕೋಲವೆರಿ ಖ್ಯಾತಿಯ ಧನುಷ್ ಗೆ ವಿಶ್ ಮಾಡಿದ್ದಾರೆ. ಅಲ್ಲದೆ ಈ ಹಿಂದೆ ಇವರಿಬ್ಬರು ಒಟ್ಟಿಗೆ ಸಿನಿಮಾ ಮಾಡುತ್ತಾರೆ ಎಂಬ ಸುದ್ದಿ ಆಗಾಗ ಕೇಳಿ ಬರುತ್ತಿದೆ.

ಸದ್ಯ ಇಂದು ಧನುಷ್ ಗೆ ನಟ ಸುದೀಪ್ “ನನ್ನ ಗೆಳೆಯ ಧನುಷ್ ಗೆ ಹುಟ್ಟುಹಬ್ಬದ ಶುಭಾಶಯಗಳು. ನೀವು ಅದ್ಭುತವಾದ ವ್ಯಕ್ತಿ. ಯಾವಾಗಲು ಒಳ್ಳೆಯದಾಗಲಿ” ಎಂದು ವಿಶ್ ಮಾಡಿದ್ದಾರೆ.

ಇನ್ನೂ ಮಾರಿ- 2 ಚಿತ್ರ ಸಕ್ಸಸ್ ಕಂಡ ನಂತರ ಧನುಷ್ ಇನ್ನೂ ಯಾವುದೇ ಸಿನಿಮಾಗಳಲ್ಲಿ ಅಭಿಮಾನಿಗಳ ಮುಂದೆ ಕಾಣಿಸಿಕೊಂಡಿಲ್ಲ. ಬಾಲಿವುಡ್ ನಲ್ಲಿ ಈ ಹಿಂದೆ ನಟಿಸಿದ್ದ ರಂಜ್ಹಾನ ಚಿತ್ರ, ಶಾಮಿತಾಭ್ ಚಿತ್ರದ ನಂತರ ಮತ್ತೊಮ್ಮೆ ಬಾಲಿವುಡ್ ಚಿತ್ರದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆ ಇದೆ. ಸದ್ಯ ಕಾಲಿವುಡ್ ಅರಸನ್ ಚಿತ್ರದಲ್ಲಿ ಧನುಷ್ ಅಭಿನಯಿಸುತ್ತಿದ್ದಾರೆ.

Comments are closed.