ಅಂತರಾಷ್ಟ್ರೀಯ

ಈಕೆಯ ಒಂದು ಪೋಟೋಗೆ ಬರೋಬ್ಬರಿ 81 ಕೋಟಿ!

Pinterest LinkedIn Tumblr


ಸಾಮಾಜಿಕ ಜಾಲತಾಣಗಳಲ್ಲಿ ಸೆಲೆಬ್ರೆಟಿಗಳು ಕೋಟಿ ಕೋಟಿ ಹಣ ಸಂಪಾದಿಸುವ ವಿಚಾರ ಇತ್ತೀಚಿಗಷ್ಟೇ ಬಹಿರಂಗವಾಗಿದೆ. ಈ ಸಾಲಿನಲ್ಲಿ ಭಾರತದ ಕ್ರಿಕೆಟಿಗ ವಿರಾಟ್ ಕೊಹ್ಲಿ ಕೂಡ ಇದ್ದಾರೆ. ಇದೀಗ ಈ ಸಾಲಿನಲ್ಲಿ 21 ವರ್ಷದ ಅಮೆರಿಕ ಮಾಡೆಲ್ ಕೈಲಿ ಜೆನ್ನರ್ ವಿಶ್ವದಲ್ಲೇ ನಂ.1 ಸ್ಥಾನವನ್ನು ಅಲಂಕರಿಸಿದ್ದು, ಇವರು ತಮ್ಮ ಒಂದು ಪೋಟೋಗೆ ಬರೋಬ್ಬರಿ 81 ಕೋಟಿ ರೂಪಾಯಿ ಪಡೆಯುತ್ತಾರಂತೆ.

ಇನ್ ಸ್ಟಾಗ್ರಾಮ್ 2019ರ ಶ್ರೀಮಂತರ ಪಟ್ಟಿ ಬಿಡುಗಡೆಯಾಗಿದೆ. ಅತ್ಯಂತ ಕಿರಿಯ ವಯಸ್ಸಿನಲ್ಲೆ ಕೋಟ್ಯಾಂತರ ಹಣ ಸಂಪಾದಿಸುತ್ತಿರುವ ಕೈಲಿ ಜೆನ್ನರ್ ಇದೀಗಾ ವಿಶ್ವದ ಕಿರಿಯ ಬಿಲಿಯನೇರ್ ಆಗಿದ್ದಾರೆ.ಆಕೆಯ ಒಂದು ಪೋಸ್ಟ್ ಗೆ ಸಿಗುವ ಹಣ ಎಷ್ಟು ಗೊತ್ತಾ..? ಕೆಳಿದ್ರೆ ನೀವೆ ಬೆಚ್ಚಿ ಬೀಳ್ತೀರಾ. ಹೌದು ಆಕೆ ತನ್ನ ಒಂದು ಪೋಸ್ಟ್ ಗೆ ಗಳಿಸುವ ಹಣ ಸಾವಿರ ಅಥವಾ ಲಕ್ಷ ಅಲ್ಲಾ, ಬರೋಬ್ಬರಿ 8.74 ಕೋಟಿ.

ಮೂಲತಃ ಕ್ವಾಲಿಪೋರ್ನಿಯವರಾದ 21 ವರ್ಷದ ಲಾಸ್ ಎಂಜಲೀಸ್ ಕೈಲಿ, ಕೇವಲ ಮಾಡೆಲ್ ಮಾತ್ರವಲ್ಲದೇ, ಉದ್ಯಮಿ ಕೂಡ ಆಗಿದ್ದಾರೆ. ಕೈಲಿ ವಿಶ್ವದಲ್ಲೇ ಅತೀ ಹೆಚ್ಚು ಮಂದಿ ಫಾಲೋವರ್ಸ್ ಇರುವ ಸೆಲೆಬ್ರಿಟಿ ಆಗಿದ್ದು, ಇವರು ಇನ್‍ಸ್ಟಾಗ್ರಾಮ್‍ನಲ್ಲಿ ಬರೋಬ್ಬರಿ 13.92 ಕೋಟಿ ಫಾಲೋವರ್ಸ್ ಹೊಂದಿದ್ದಾರೆ. ಅಲ್ಲದೆ ಇವರ ಒಂದು ಇನ್‍ಸ್ಟಾ ಪೋಸ್ಟ್ ಗೆ ಬರೋಬ್ಬರಿ 8.74 ಕೋಟಿ ರೂ.(1.2 ಮಿಲಿಯನ್ ಡಾಲರ್) ಪಡೆಯುತ್ತಾರೆ ಎಂಬುದು ತಿಳಿದು ಬಂದಿದೆ.

ಸದಾ ಒಂದಲ್ಲ ಒಂದು ಕಾಂಟ್ರೋವರ್ಸಿ ಮಾಡಿಕೊಳ್ಳುವ ಈಕೆ ಸಧ್ಯ ಇನ್ ಸ್ಟಾಗ್ರಾಮ್ ಟೂಲ್ ಹೂಪರ್ ಇನ್ ಸ್ಟಾಗ್ರಾಮ್ ಶ್ರೀಮಂತರ ಪಟ್ಟಿಯಲ್ಲಿ ಎಲ್ಲರನ್ನು ಹಿಂದೆ ಸರಿಸಿ ವಿಶ್ವದಲ್ಲೇ ಅತೀ ಹೆಚ್ಚು ಹಣ ಗಳಿಸುವ ಸೆಲೆಬ್ರೆಟಿಯಾಗಿ ಹೊರ ಹೊಮ್ಮಿದ್ದಾರೆ ಕೈಲಿ. ಇದೀಗಾ ಅಮೆರಿಕನ್ ರ್ಯಾಪರ್ ಟ್ರಾವಿಸ್ ಸ್ಕಾಟ್ ಜೊತೆ ರಿಲೆಷನ್ ಶಿಪ್‍ನಲ್ಲಿದ್ದು, ಕೈಲಿಗೆ ಒಂದು ಹೆಣ್ಣು ಮಗು ಕೂಡ ಇದೆ.

Comments are closed.