ಕರ್ನಾಟಕ

ಅತೃಪ್ತರನ್ನ ನೆಮ್ಮದಿಯಿಂದ ಇರಲು ನಾನು ಬಿಡುವುದಿಲ್ಲ: ದೇವೇಗೌಡ

Pinterest LinkedIn Tumblr


ಬೆಂಗಳೂರು: ಒಂದು ವೇಳೆ ಉಪಚುನಾವಣೆ ನಡೆದರೆ ನಾವು ಜೆಡಿಎಸ್​ ಅಭ್ಯರ್ಥಿಯನ್ನೇ ಹಾಕೋಣ ಮೈತ್ರಿ ಬೇಡ ಎಂದು ತೆನೆ ಮುಖಂಡರು ಜೆಡಿಎಸ್​ ವರಿಷ್ಠ, ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರಿಗೆ ಮನವಿ ಮಾಡಿಕೊಂಡರು.

ನಗರದಲ್ಲಿಂದು ನಡೆದ ಜೆಡಿಎಸ್​ ಕಾರ್ಯಕರ್ತರ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗಿದ್ದು, ಮೈತ್ರಿ ಬಗ್ಗೆ ನಾನು, ಕುಮಾರಸ್ವಾಮಿ ತೀರ್ಮಾನ ಮಾಡ್ತೀವಿ, ಮೈತ್ರಿ ಬಗ್ಗೆ ನಿಮಗೆ ಚಿಂತೆ ಬೇಡ, ಇಂದಿನಿಂದಲೇ ಪಕ್ಷ ಸಂಘಟನೆ ಮಾಡಿ ಎಂದು ವರಿಷ್ಠರು ಬೆಂಬಲಿಗರಿಗೆ ತಿಳಿಸಿದ್ದಾರೆ.

ಇನ್ನು ಚುನಾವಣೆಯನ್ನು ಏಕಾಂಗಿಯಾಗಿ ಸ್ಪರ್ಧೆ ಮಾಡೋ ವಿಚಾರ ಮುಂದೆ ನಿರ್ಧಾರ ಮಾಡೋಣ, ಯಾವುದಕ್ಕೂ ನೀವು ಸಿದ್ದರಾಗಿರಿ, ಅತೃಪ್ತರು ಸರ್ಕಾರ ಬೀಳಿಸುವ ಕೆಲಸ ಮಾಡಿದ್ದಾರೆ. ಅವರಿಗೆ ತಕ್ಕ ಪಾಠ ಕಲಿಸಬೇಕು ಎಂದು ಅವರು ಹೇಳಿದ್ದಾರೆ.

ಸದ್ಯ ಇನ್ನೊಂದು ಸಾರಿ ಕಾರ್ಯಕರ್ತರ ಸಭೆ ಮಾಡಿ ಅಭ್ಯರ್ಥಿ ಬಗ್ಗೆ ತೀರ್ಮಾನ ಮಾಡೋಣ, ಇಂದಿನಿಂದಲೇ ಪಕ್ಷ ಸಂಘಟನೆ ಮಾಡಿ, ಕುಮಾರಸ್ವಾಮಿ ಸರ್ಕಾರದ ಸಾಲಮನ್ನಾ, ಬಡವರ ಬಂಧು, ಋಣಮುಕ್ತ ಕಾಯ್ದೆ ಬಗ್ಗೆ ಮನೆ ಮನೆಗೆ ಪ್ರಚಾರ ಮಾಡಿ ಜನರಿಗೆ ತಲುಪಿಸಿ ಎಂದು ಅವರು ಕಾರ್ಯಕರ್ತರಿಗೆ ಸೂಚಿಸಿದ್ದಾರೆ.

ಅಲ್ಲದೇ ಅತೃಪ್ತರನ್ನ ನೆಮ್ಮದಿಯಿಂದ ಇರೋಕೆ ನಾನು ಬಿಡೊಲ್ಲ, ಅವರಿಗೆಲ್ಲ ತಕ್ಕ ಪಾಠ ಕಲಿಸ್ತೀನಿ, ನೀವು ಪಕ್ಷ ಸಂಘಟನೆ ಮಾಡಿ ಸಾಕು ಎಂದು ದೇವೇಗೌಡರು ತಮ್ಮ ಮುಖಂಡರಿಗೆ ತಿಳಿಸಿದರು. ಇದಕ್ಕೆ ಬೆಂಬಲಿಗರಿ ಸಹ ಒಪ್ಪಿಗೆ ಸೂಚಿಸಿದರು.

Comments are closed.