ಮನೋರಂಜನೆ

‘ಪ್ಲೀಸ್ ನನ್ನ ಜೊತೆ ಸೆಕ್ಸ್ ಮಾಡ್ತೀರಾ’ ಎಂದು ಬಾಲಿವುಡ್ ನಟಿಗೆ ಸಂದೇಶ ಕಳುಹಿಸಿದ ವ್ಯಕ್ತಿ !

Pinterest LinkedIn Tumblr

ಮುಂಬೈ: ಖ್ಯಾತ ನಟಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುವ ಗೀಳು ಜಾಸ್ತಿಯಾಗುತ್ತಿದ್ದು ಬಾಲಿವುಡ್ ನಟಿ, ಗಾಯಕಿಯೊಬ್ಬರಿಗೆ ವ್ಯಕ್ತಿಯೋರ್ವ ಪ್ಲೀಸ್ ನನ್ನ ಜೊತೆ ಸೆಕ್ಸ್ ಮಾಡ್ತೀರಾ ಎಂದು ಕೇಳಿದ್ದಾನೆ.

ತನಗೆ ವ್ಯಕ್ತಿಯೋರ್ವ ಅಶ್ಲೀಲವಾಗಿ ಸಂದೇಶ ಕಳುಹಿಸಿದ್ದಾನೆ ಎಂದು ನಟಿ ಸುಚಿತ್ರಾ ಕೃಷ್ಣಮೂರ್ತಿ ಅವರು ಸ್ಕ್ರೀನ್ ಶಾಟ್ ತೆಗೆದು ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ.

ವ್ಯಕ್ತಿಯ ಫೇಸ್ ಬುಕ್ ಖಾತೆಯನ್ನು ಮುಂಬೈ ಪೊಲೀಸರಿಗೆ ಸುಚಿತ್ರಾ ಟ್ಯಾಗ್ ಮಾಡಿ ಆತನ ವಿರುದ್ಧ ಕ್ರಮಕೈಗೊಳ್ಳುವಂತೆ ಕೇಳಿದ್ದಾರೆ.

ಸುಚಿತ್ರಾ ಟ್ವೀಟ್ ಗೆ ಪ್ರತಿಕ್ರಿಯಿಸಿದ ಪೊಲೀಸರು ದಯವಿಟ್ಟು ನಿಮ್ಮ ದೂರವಾಣಿ ವಿವರಗಳನ್ನು ನೀಡಿ ಎಂದು ರಿಟ್ವೀಟ್ ಮಾಡಿದ್ದಾರೆ.

ಇದಕ್ಕೆ ನಟಿ ಧನ್ಯವಾದಗಳು, ಕೇವಲ ನಿಮ್ಮ ಗಮನಕ್ಕೆ ತರಲು ಮಾತ್ರ ಈ ಬಗ್ಗೆ ತಿಳಿಸಿದೆ. ಆತ ನನ್ನಂತ ಅನೇಕರಿಗೆ ಈ ರೀತಿಯಾಗಿ ಸಂದೇಶ ಕಳುಹಿಸಿದರೆ ಯುವತಿಯರ ಪರಿಸ್ಥಿತಿ ಏನು? ಎಂದು ಟ್ವೀಟ್ ಮಾಡಿದ್ದಾರೆ.

Comments are closed.