ಮನೋರಂಜನೆ

ಪ್ರಖ್ಯಾತ ನಟನಿಗೆ ಕಿಡ್ನಿ ವೈಫಲ್ಯ! ಕಿಡ್ನಿದಾನಕ್ಕೆ ಮುಂದಾದ ಹೆತ್ತಮ್ಮ!!

Pinterest LinkedIn Tumblr


ಭಾರತೀಯ ಚಿತ್ರರಂಗದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ಟಾಲಿವುಡ್ ಖ್ಯಾತ ಸಿನಿಮಾ ಬಹುಬಲಿಯ ಪ್ರಸಿದ್ಧ ನಟ ರಾಣಾ ದಗ್ಗುಬಾಟಿ ಕಳೆದ ಒಂದು ವರ್ಷದಿಂದ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿದ್ದು ಇದೀಗ ಈ ನಟನಿಗೆ ಕಿಡ್ನಿ ವೈಫಲ್ಯವಾಗಿದೆಯೆಂದೆಯಂತೆ, ಸದ್ಯ ವಿದೇಶದಲ್ಲಿ ಚಿಕಿತ್ಸೆ ಪಡೆಯುತ್ತಿರುವ ರಾಣಾಗೆ ಮೂತ್ರಪಿಂಡದ ಕಸಿ ಅಗತ್ಯವಿದ್ದು, ಅವರ ತಾಯಿಯೇ ಕಿಡ್ನಿದಾನಕ್ಕೆ ಮುಂದಾಗಿದ್ದಾರೆ.

ಟಾಲಿವುಡ್​ ಹಂಕ್​ ಎಂದೇ ಪ್ರಸಿದ್ಧವಾಗಿರುವ ಈ ಹ್ಯಾಂಡ್ ಸಮ್ ಹೀರೋ ರಾಣಾದಗ್ಗುಬಾಟಿ, ಟಾಲಿವುಡ್ ಅಷ್ಟೇ ಅಲ್ಲದೆ ಬಾಲಿವುಡ್ ನಲ್ಲಿಯೂ ಸಹ ನಟಿಸಿ ಸೈ ಎನಿಸಿಕೊಂಡಿದ್ದರು. ಸದ್ಯ ಇದೀಗಾ ರಾಣಾ ಕಳೆದ ಒಂದು ವರ್ಷದಿಂದ ಮುಂಬೈ ಹಾಗೂ ಹೈದರಾಬಾದಿನಲ್ಲಿ ರಾಣಾ ಕಿಡ್ನಿ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಾಣದ ಕಾರಣದಿಂದಾಗಿ ಅಮೆರಿಕದಲ್ಲಿ ಈಗ ರಾಣಾ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಣಾ ಕಿಡ್ನಿ ಹಾಳಾಗಿದ್ದು, ಬದಲಿ ಕಿಡ್ನಿ ಜೋಡಣೆ ಮಾಡಬೇಕೆಂದು ಅಮೆರಿಕದ ವೈದ್ಯರು ಹೇಳಿದ್ದು, ರಾಣಾಗೆ ಕಿಡ್ನಿಗೆ ಕೊಡಲು ಅವರ ತಾಯಿ ಲಕ್ಷ್ಮಿ ಅವರು ಒಪ್ಪಿಕೊಂಡಿದ್ದಾರೆ. ಎಂಬ ಸುದ್ದಿ ಟಾಲಿವುಡ್ ನಲ್ಲಿ ಹರಿದಾಡುತ್ತಿದೆ. ಜೊತೆಗೆ ಈ ವಿಚಾರವಾಗಿ ದಗ್ಗುಬಾಟಿ ಸುರೇಶ್​ ಅವರ ಕುಟುಂಬದಿಂದ ಅಧಿಕೃತ ಪ್ರಕಟಣೆ ಹೊರ ಬರಬೇಕಿದೆ.

ಸಧ್ಯದಲ್ಲೇ ಕಿಡ್ನಿ ಬದಲಿ ಜೋಡಣೆ ನಡೆಯಲಿದ್ದು, ಬಳಿಕ ಚೇತರಿಸಿಕೊಂಡು ದಗ್ಗುಬಾಟಿ ಮತ್ತೆ ನಟನೆಯತ್ತ ಮುಖಮಾಡಲಿದ್ದಾರೆ ಎನ್ನಲಾಗುತ್ತಿದೆ.

Comments are closed.