ಮನೋರಂಜನೆ

‘ಒನ್​ ಲವ್​ ಟೂ ಸ್ಟೋರಿ’ಯಲ್ಲಿ ಹೊಸಬರ ತಂಡ

Pinterest LinkedIn Tumblr


ಒನ್​ ಲವ್​ ಟೂ ಸ್ಟೋರಿ.. ವಸಿಷ್ಠ ಬಂಟನೂರು ಕಥೆ, ಚಿತ್ರಕಥೆ ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶನ ಮಾಡಿರೋ ಸಿನಿಮಾ.. ಸಂತೋಷ್, ಮಧುಗೌಡ ಚಿತ್ರದ ನಾಯಕರಾಗಿ ನಟಿಸಿದ್ದು, ನಾಯಕಿಯರಾಗಿ ಪ್ರಕೃತಿ ಮತ್ತು ಆರಾಧ್ಯ ಸಾಥ್ ಸಿಕ್ಕಿದೆ.. ಇತ್ತೀಚೆಗೆ ನಿರ್ದೇಶಕ ಸಿಂಪಲ್​ ಸುನಿ, ಒನ್​ ಲವ್​ ಟೂ ಸ್ಟೋರಿ ಟ್ರೈಲರ್​ ಲಾಂಚ್ ಮಾಡಿದ್ರು.. ಟ್ರೈಲರ್​​ಗೆ ಒಳ್ಳೆ ಪ್ರತಿಕ್ರಿಯೆ ಸಿಕ್ತಿದೆ..

ಟ್ರೈಲರ್​ನಲ್ಲಿ ಸಿನಿಮಾದಲ್ಲಿ ಮತ್ತೊಂದು ಸಿನಿಮಾ ಕಥೆ ಹೇಳೋಕ್ಕೆ ಹೊರಟಿರೋದನ್ನ ನೋಡ್ಬೋದು.. ಅಂದ್ರೆ, ಸಿನಿಮಾರಂಗದಲ್ಲಿ ಸಾಧನೆ ಮಾಡ್ಬೇಕು ಅನ್ನೋ ಪ್ಯಾಷನ್​​ ಇರೋ ಯುವಕನ ಕಥೆ ಇದು.. ನಿರ್ದೇಶನದ ಜೊತೆಗೆ ವಸಿಷ್ಠ ಬಂಟನೂರು ಚಿತ್ರದ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ.. ಸದ್ಯ ಒನ್​ ಲವ್​ ಟೂ ಸ್ಟೋರಿ ಟ್ರೈಲರ್​ ಸಖತ್ ಸೌಂಡ್ ಮಾಡ್ತಿದ್ದು, ಶೀಘ್ರದಲ್ಲೇ ಸಿನಿಮಾ ತೆರೆಗೆ ಬರಲಿದೆ..

ಬಹುತೇಕ ಹೊಸಬರ ತಂಡ ಮಾಡುವಂತೆ ಕಚಗುಳಿ ಇಡುವ ಡೈಲಾಗ್​​ಗಳನ್ನ ಚಿತ್ರಕ್ಕಾಗಿ ನಿರ್ದೇಶಕರು ಬರೆದಿದ್ದಾರೆ.. ರಾಜು ಮತ್ತು ರಾಹುಲ್​ ಅನ್ನೋ ಇಬ್ಬರು ಯುವಕರ ಲವ್​ ಸ್ಟೋರಿಯನ್ನ ಈ ಸಿನಿಮಾದಲ್ಲಿ ಹೇಳೋಕ್ಕೆ ಹೊರಟಿದ್ದಾರೆ ನಿರ್ದೇಶಕರು.. ಬೆಂಗಳೂರು ಸುತ್ತಾಮುತ್ತಾ ಸೇರಿದಂತೆ ಹಲವು ಲೊಕೇಶನ್​ಗಳಲ್ಲಿ ಸಿನಿಮಾ ಚಿತ್ರೀಕರಣ ನಡೆದಿದೆ..

ಒನ್​ ಲವ್​ ಟೂ ಸ್ಟೋರಿ ಚಿತ್ರದಲ್ಲಿ 5 ಹಾಡುಗಳಿದ್ದು ಸಿದ್ದಾರ್ಥ ಚಿತ್ರಕ್ಕೆ ಸಂಗೀತ ನೀಡಿದ್ದಾರೆ.. ವಸಿಷ್ಠ ಸಿಂಹ ಹಾಡಿರೋ ಹ್ಯಾಂಗೋವರ್ ಸಾಂಗ್​​ ಈಗಾಗಲೇ ಸೂಪರ್ ಹಿಟ್​ ಆಗಿದೆ.. ಇನ್ನುಳಿದಂತೆ ರ್ಯಾಪರ್ ಆಲ್​ ಓಕೆ, ಸಂಜಿತ್ ಹೆಗ್ಡೆ ಹಾಡಿರೋ ಸಾಂಗ್ಸ್​​​ ಸದ್ದು ಮಾಡ್ತಿವೆ..

ಚಿತ್ರದಲ್ಲಿ ಒಟ್ಟು ಮೂರು ಕಥೆಗಳಿದ್ದು, ಕೊನೆಗೆ ಅದು ಎರಡು ಕಥೆಗಳಾಗಿ ಬದಲಾಗುತ್ತಂತೆ.. ಅದು ಹೇಗೆ ಅನ್ನೋದನ್ನ ತೆರೆಮೇಲೆ ನೋಡ್ಬೇಕು.. ಹಳೇ ಕಥೆಯನ್ನೇ ಕೊಂಡ ಬದಲಿಸಿ, ಫಿಲಾಸಫಿಕಲ್​ ಆಗಿ ಈ ಸಿನಿಮಾದಲ್ಲಿ ಹೇಳ್ತಿದ್ದಾರಂತೆ ನಿರ್ದೇಶಕರು.. ಸಿಲ್ವರ್ ಸ್ಕ್ರೀನ್ಸ್ ಫಿಲಂ ಫ್ಯಾಕ್ಟರಿ ಬ್ಯಾನರ್​ನಲ್ಲಿ ನಿರ್ಮಾಣವಾಗಿರೋ ಈ ಚಿತ್ರಕ್ಕೆ ಅನಿಲ್ ಕುಮಾರ್ ಛಾಯಾಗ್ರಹಣವಿದೆ..

ಆಗಸ್ಟ್​ ಫಸ್ಟ್ ವೀಕ್​​​ ಒನ್​ ಲವ್​ ಟೂ ಸ್ಟೋರಿ ತೆರೆಗೆ ಬರೋ ಸಾಧ್ಯತೆಯಿದ್ದು, ಹೊಸಬರ ಪ್ರಯತ್ನಕ್ಕೆ ಪ್ರೇಕ್ಷಕರ ಪ್ರತಿಕ್ರಿಯೆ ಹೇಗಿರುತ್ತೆ ಕಾದು ನೋಡ್ಬೇಕು..

Comments are closed.