
ವಯಸ್ಸು ಏರುತ್ತಲೇ ಇದ್ದರೂ ಇನ್ನು 18 ರ ಬೆಡಗಿಯಂತೆ ಕಾಣಿಸಿಕೊಳ್ಳೋ ಕರಾವಳಿ ಬೆಡಗಿ, ಬಾಲಿವುಡ್ ಸುಂದರಿ ಶಿಲ್ಪಾ ಶೆಟ್ಟಿ ಸಧ್ಯ ಬಾಲಿವುಡ್ನಿಂದ ಬಿಡುವು ಪಡೆದುಕೊಂಡಿದ್ದರೂ ಕಿರುತೆರೆಯಲ್ಲಿ ಫುಲ್ ಬ್ಯುಸಿ.
ಬಾಲಿವುಡ್ ನಟಿ ಶಿಲ್ಪ ಶೆಟ್ಟಿ ಇತ್ತೀಚಿನ ದಿನಗಳಲ್ಲಿ ಹಿಂದಿಯ ಡ್ಯಾನ್ಸ್ ರಿಯಾಲಿಟಿ ಶೋ ಗಳಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಆದರೆ ಇದೀಗ ಮತ್ತೊಮ್ಮೆ ನಿಮ್ಮೆಲ್ಲರ ಹೃದಯ ಕದಿಯಲು ಶಿಲ್ಪಾ ಶೆಟ್ಟಿ ಮತ್ತೊಮ್ಮೆ ಬೆಳ್ಳಿತೆರೆಯಲ್ಲಿ ಮೋಡಿ ಮಾಡಲು ಮುಂದಾಗಿದ್ದಾರೆ.
ಹೌದು ಚಿತ್ರವೊಂದರ ಮುಖ್ಯ ಪಾತ್ರದಲ್ಲಿ ನಟಿಸುವ ಮೂಲಕ ಭರ್ಜರಿ ಕಂ ಬ್ಯಾಕ್ ಮಾಡಲು ಶಿಲ್ಪಾ ಸಿದ್ಧತೆ ನಡೆಸಿದ್ದಾರೆ. ಶಿಲ್ಪ, ದಿಲ್ಚಿತ್ ದೋಸಾಂಜ್ ಮತ್ತು ಯಾಮಿ ಗೌತಮ್ ಮುಖ್ಯ ಪಾತ್ರದಲ್ಲಿ ಇರುವ ಹರೂನ್ ನಿರ್ದೇಶನ ಮಾಡಲು ಮುಂದಾಗಿರುವ ಚಿತ್ರದಲ್ಲಿ ಬರಹಗಾರ್ತಿಯಾಗಿ ಶಿಲ್ಪಾ ಬಣ್ಣ ಹಚ್ಚಲಿದ್ದಾರೆ.ಇದು ಚಿತ್ರದ ಪ್ರಮುಖ ಪಾತ್ರವಾಗಿದ್ದು ಕತೆ ಕೇಳಿಯೇ ಶಿಲ್ಪ ಈ ಪಾತ್ರಕ್ಕೆ ಯಸ್ ಅಂದಿದ್ದಾರೆ ಅಂತೆ.
ಇನ್ನೂ ಯಾವ ಚಿತ್ರ, ಚಿತ್ರದ ಟೈಟಲ್, ಶೆಡ್ಯೂಲ್ ಯಾವುದೂ ಫೈನಲ್ ಆಗಿಲ್ಲ. ಆದರೆ ಈ ವರ್ಷದ ಒಳಗೆ ಚಿತ್ರ ತೆರೆಗೆ ಬರುವುದು ಪಕ್ಕ. ಅಲ್ಲಿಗೆ ಶಿಲ್ಪಾ ಶೆಟ್ಟಿ ಮತ್ತೊಂದು ರೂಪದಲ್ಲಿ ಬಾಲಿವುಡ್ಗೆ ರೀ ಎಂಟ್ರಿಯಾಗಲಿದ್ದು ಶಿಲ್ಪ ಆಭಿಮಾನಿಗಳಿಗೆ ಖುಷಿ ಕೊಡುವ ವಿಚಾರವಾಗಿದೆ.ಮುಂದಿನ ತಿಂಗಳು ಆಗಸ್ಟ್ನಿಂದ ಚಿತ್ರೀಕರಣದಲ್ಲಿಯೂ ಶಿಲ್ಪ ಬ್ಯುಸಿಯಾಗಲಿದ್ದಾರೆ.
Comments are closed.