ಮನೋರಂಜನೆ

ಇನ್ಮುಂದೇ ನಾನು ಲಿಪ್​ ಲಾಕ್​ ಮಾಡುವುದಿಲ್ಲವೆಂದ ನಟ!

Pinterest LinkedIn Tumblr


ಟಾಲಿವುಡ್ ಹ್ಯಾಂಡ್ ಸಮ್ ಹೀರೋ ವಿಜಯ್ ದೇವರುಕೊಂಡ ಇನ್ನು ಮುಂದೆ ತಮ್ಮ ಸಿನಿಮಾಗಳಲ್ಲಿ ಲಿಪ್ ಲಾಕ್ ಮಾಡುವುದಿಲ್ಲವಂತೆ ಹೀಗಂತ ನಾವು ಹೇಳುತ್ತಿಲ್ಲ. ಸ್ವತಃ ವಿಜಯ್ ದೇವರುಕೊಂಡರವರೆ ಹೇಳಿಕೊಂಡಿದ್ದಾರೆ. ಅಷ್ಟಕ್ಕೂ ಟಾಲಿವುಡ್ ಅರ್ಜುನ್ ರೆಡ್ಡಿ ಈ ಮಾತನ್ನು ಹೇಳಿದ್ದಾದರೂ ಏಕೆ ಅಂತೀರಾ ಹಾಗಾದರೆ ಈ ಕೆಳಗಿನ ಸ್ಟೋರಿ ಓದಿ..

ಹೌದು ಇತ್ತೀಚೆಗಷ್ಟೇ ನಟ ವಿಜಯ್ ದೇವರುಕೊಂಡ ಡಿಯರ್ ಕಾಮ್ರೇಡ್ ಚಿತ್ರದ ಟ್ರೈಲರ್ ನನ್ನು ಲಾಂಚ್ ಮಾಡಲು ಹಾಗೂ ಚಿತ್ರದ ಪ್ರಮೋಷನ್ ಗಾಗಿ ಬೆಂಗಳೂರಿಗೆ ಆಗಮಿಸಿದ್ದರು. ಈ ವೇಳೆ ನಡೆದ ಸುದ್ದಿಗೋಷ್ಠಿ ಲಿಪ್ ಲಾಕ್ ಕುರಿತಂತೆ ಕೇಳಿದ ಪ್ರಶ್ನೆಗೆ ತಮ್ಮದೆ ರೀತಿಯಲ್ಲಿ ”ಕಿಸ್ ಎನ್ನುವುದೂ ಕೂಡ ಒಂದು ಎಮೋಷನ್. ನಾವು ಹೇಗೆ ನಗುತ್ತೇವೆ.. ಅಳುತ್ತೇವೆ.. ಖುಷಿ.. ದುಃಖ.. ಪಡುತ್ತೇವೆ ಆ ರೀತಿ ಅದು ಕೂಡ ಒಂದು ಭಾವನೆ. ಸಿನಿಮಾದಲ್ಲಿ ಎರಡು ಪಾತ್ರಗಳ ಆತ್ಮೀಯತೆ ಆ ಮಟ್ಟಕ್ಕೆ ಇದ್ದರೆ, ಮುತ್ತಿನ ದೃಶ್ಯದ ಅವಶ್ಯಕತೆ ಇರುತ್ತದೆ ಎಂದು ವ್ಯಾಖ್ಯಾನ ನೀಡಿದ್ದರು.

ನಂತರ ತಮಿಳಿನ ಮತ್ತೊಂದು ಸುದ್ದಿಗೋಷ್ಠಿಯಲ್ಲಿ ಮುನಃ ಲಿಪ್ ಲಾಕ್ ಬಗ್ಗೆಯೇ ಪ್ರಶ್ನೆ ಬಂದಿದೆ. ಈ ವೇಳೆ ಮಾತನಾಡುವಾಗ ವಿಜಯ್ . ”ನನ್ನ ಮುಂದಿನ ಸಿನಿಮಾದಲ್ಲಿ ಲಿಪ್ ಲಾಕ್ ದೃಶ್ಯ ಇದೆ. ಆದರೆ, ಅದರ ನಂತರ ಇನ್ನು ಮುಂದೆ ನಾನು ಲಿಪ್ ಲಾಕ್ ಸೀನ್ ಇರುವ ಯಾವ ಸಿನಿಮಾವನ್ನು ಮಾಡುವುದಿಲ್ಲ. ಎಂದು ಹೇಳಿದ್ದಾರೆ.

ಬಾಲಿವುಡ್ ನಲ್ಲಿ ಲಿಪ್ ಲಾಕ್ ಮಾಡುವ ಮೂಲಕವೇ ಹೆಚ್ಚು ಫೇಮಸ್ ಆಗಿರುವ ನಟ ಕಿಸ್ ಕಿಂಗ್ ಇಮ್ರಾನ್ ಹಶ್ಮಿ ಸಿನಿಮಾದಲ್ಲಿ ಒಂದು ದೃಶ್ಯದಲ್ಲಿಯಾದರೂ ಕಿಸ್ಸಿಂಗ್ ಸೀನ್ ಇರುತ್ತದೆ. ಹಾಗೆಯೇ ವಿಜಯ್ ದೇವರಕೊಂಡ ಬಹುತೇಕ ಸಿನಿಮಾಗಳಲ್ಲಿ ಲಿಪ್ ಲಾಕ್ ಇರುವ ಒಂದು ದೃಶ್ಯವಾದರೂ ಇರುತ್ತಿತ್ತು. ಅದರಿಂದ ವಿಜಯ್ ದೇವರುಕೊಂಡರನ್ನು ಸೌತ್ ಇಂಡಸ್ಟ್ರಿಯ ಇಮ್ರಾನ್ ಹಶ್ಮಿ ಎಂದೆಲ್ಲ ವರ್ಣಿಸಲಾಗುತ್ತಿತ್ತು. ಆದರೀಗಾ ಟಾಲಿವುಡ್ ರೌಡಿ ಕಿಸ್ಸಿಂಗ್ ನಿಂದ ದೂರವಿರಲು ನಿರ್ಧರಿಸಿದ್ದಾರೆ.

ತಾವು ಮಾಡಿರುವ, ಅರ್ಜುನ್ ರೆಡ್ಡಿ, ಗೀತಾ ಗೋವಿಂದ, ನೋಟಾ ಹೀಗೆ ಸರಣಿ ಚಿತ್ರಗಳಲ್ಲಿ ಮತ್ತಿನ ಮಳೆ ಸುರಿಸಿರುವ ವಿಜಯ್ ಇದೀಗಾ ಡಿಯರ್ ಕಾಮ್ರೇಡ್ ಚಿತ್ರದಲ್ಲಿ ಮತ್ತೊಮ್ಮೆ ಲಿಪ್ ಲಾಕ್ ಮಾಡುವ ಮೂಲಕ ಸುದ್ದಿಯಾಗಿದ್ದರು. ಆದರೆ ಇದ್ದಕ್ಕಿದಂತೆ ಈ ರೀತಿಯ ನಿರ್ಧಾರ ತೆಗೆದುಕೊಳ್ಳಲು ಕಾರಣ ಏನು ಎಂಬ ಕುತೂಹಲ ದೇವರುಕೊಂಡ ಫ್ಯಾನ್ಸ್ ಗೆ ಇರಬಹುದು. ಅದಕ್ಕೆ ಉತ್ತರ ನೀಡಿರುವ ವಿಜಯ್ ”ಎಲ್ಲರೂ ಲಿಪ್ ಲಾಕ್ ಬಗ್ಗೆ ಪ್ರಶ್ನೆ ಮಾಡುತ್ತಾರೆ. ನನಗೆ ಅಂತಹ ಸಿನಿಮಾಗಳನ್ನು ಮಾಡಿ ಮಾಡಿ ಬೇಸರ ಆಗಿದೆ. ಅದೇ ಕಾರಣಕ್ಕೆ ಮುಂದೆ ಅಂತಹ ಸಿನಿಮಾ ಮಾಡಲ್ಲ” ಎಂದು ಹೇಳಿದ್ದಾರೆ.

ಚಿತ್ರದ ಕಥೆಯು ಲವ್ ಸ್ಟೋರಿ ಆಧರಿತವಾಗಿದ್ದರೆ, ಅದರಲ್ಲಿ ಕಿಸ್ ಇರುವುದು ಸಹಜ ಆದರೆ ಇನ್ನೂ ಮುಂದೆ ವಿಜಯ್ ದೇವರಕೊಂಡ ಲವ್ ಸ್ಟೋರಿ ಸಿನಿಮಾಗಳನ್ನೆ ಒಪ್ಪಿಕೊಳ್ಳುವುದಿಲ್ಲವಂತೆ . ಲವ್ ಸ್ಟೋರಿ ಚಿತ್ರಗಳ ಬದಲಾಗಿ ಆ್ಯಕ್ಷನ್ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವುದಾಗಿ ತಿಳಿಸಿದ್ಧಾರೆ. ಸದ್ಯ ರೋಮ್ಯಾಂಟಿಕ್ ಹೀರೋ ಆಗಿ ಕಾಣಿಸಿಕೊಳ್ಳುತ್ತಿರುವ ವಿಜಯ್ ಇನ್ನೂ ಮುಂದೆ ಹೊಸ ರೂಪದಲ್ಲಿ ಆ್ಯಕ್ಷನ್ ಹೀರೋ ಆಗಿ ಬದಲಾಗುತ್ತಿದ್ದಾರೆ.

Comments are closed.