
ಮೊದಲ ಹಾಡಿನ ಮೂಲಕ ದುರ್ಯೋಧನನ ಗತ್ತು ಗಮ್ಮತ್ತು ನೋಡಿದ್ದಾಯ್ತು. ಇದೀಗ ಅವ್ರ ಪ್ರೇಮಪರ್ವ ನೋಡೋ ಸಮಯ. ದಾಸ ದರ್ಶನ್ರ 50ನೇ ಚಿತ್ರದ ಆಲ್ಬಮ್ನಿಂದ ಮತ್ತೊಂದು ಬ್ಯೂಟಿಫುಲ್ ರೊಮ್ಯಾಂಟಿಕ್ ನಂಬರ್ ಹೊರಬಂದಿದೆ.
ಕುರುಕ್ಷೇತ್ರ.. ಕನ್ನಡ ಚಿತ್ರರಂಗದ ಟ್ರೆಂಡ್ ಸೆಟ್ ಸಿನಿಮಾ ಆಗೋದ್ರಲ್ಲಿ ಯಾವುದೇ ಡೌಟ್ ಇಲ್ಲ. ಇದೊಂದು ಬಹುಕೋಟಿ ವೆಚ್ಚದ, ಬಹುತಾರಾಗಣದ ಸಿನಿಮಾ ಅನ್ನೋದಕ್ಕಿಂತ ಹೆಚ್ಚಾಗಿ, ಪೌರಾಣಿಕ ಚಿತ್ರದ ಗಮ್ಮತ್ತು ಸಾರೋಕ್ಕೆ ಬರ್ತಿರೋ ಚಿತ್ರ ಅನ್ನಬಹುದು. ಒಂದಷ್ಟು ಟೀಕೆ, ಟಿಪ್ಪಣಿಗಳ ನಡುವೆಯೂ ಸಹ ಕುರುಕ್ಷೇತ್ರ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ, ಧೂಳ್ ಎಬ್ಬಿಸ್ತಿದೆ.
ಮೊನ್ನೆಯಷ್ಟೇ ದುರ್ಯೋಧನ ದರ್ಶನ್ರ ಗತ್ತು, ಗಾಂಭೀರ್ಯ ತೋರೋ ಹೀರೋ ಇಂಟ್ರಡಕ್ಷನ್ ಸಾಂಗ್ ರಿಲೀಸ್ ಮಾಡಿದ್ದ ಚಿತ್ರತಂಡ, ಇದೀಗ ಆಲ್ಬಮ್ನ ಎರಡನೇ ಸಾಂಗ್ ರಿವೀಲ್ ಮಾಡಿದೆ. ಆದ್ರೆ ಅದು ಪೌರಾಣಿಕ ನೆಲೆಗಟ್ಟಿನ ರೊಮ್ಯಾಂಟಿಕ್ ಸಾಂಗ್ ಅನ್ನೋದು ವಿಶೇಷ.
ಚಾರುತಂತಿ ನಿನ್ನ ತನುವು.. ನುಡಿಸ ಬರುವೆನು ದಿನಾ.. ಅನ್ನೋ ಈ ಹಾಡು ಕುರುಕ್ಷೇತ್ರ ಚಿತ್ರದ ಲೇಟೆಸ್ಟ್ ಸಾಂಗ್. ಚಿತ್ರದ ಕಥಾನಾಯಕ ದುರ್ಯೋಧನ ಹಾಗೂ ಆತನ ಮಡದಿ ಭಾನುಮತಿ ನಡುವಿನ ರೊಮ್ಯಾಂಟಿಕ್ ನಂಬರ್. ಪೌರಾಣಿಕ ನೆಲೆಗಟ್ಟಿನಲ್ಲೇ ಹಾಡನ್ನ ತುಂಬಾ ಇಂಪಾಗಿ ಮತ್ತು ಸೊಗಸಾಗಿ ಚಿತ್ರಿಸಲಾಗಿದೆ. ಚಿತ್ರದ ಸ್ಪೆಷಲ್ ಅಟ್ರ್ಯಾಕ್ಷನ್ ಆಗಲಿರೋ ಈ ಹಾಡಿಗೆ ಡಾ. ವಿ ನಾಗೇಂದ್ರ ಪ್ರಸಾದ್ ಸಾಹಿತ್ಯ, ಅರ್ಜುನ್ ಜನ್ಯ, ವಿ. ಹರಿಕೃಷ್ಣ ಸಂಗೀತವಿದೆ.
ಅಂದಹಾಗೆ ಈ ಮೆಲೋಡಿಯಸ್ ಹಾಡನ್ನ ಬಾಲಿವುಡ್ ಅಂಗಳದ ಟಾಪ್ ಸಿಂಗರ್ಸ್ ಆಗಿರೋ ಸೋನು ನಿಗಮ್ ಹಾಗೂ ಶ್ರೇಯಾ ಘೋಷಾಲ್ ಹಾಡಿರೋದು ಮತ್ತೊಂದು ವಿಶೇಷ. ಇನ್ನು ಟ್ರೈಲರ್ ನಿರೀಕ್ಷೆ ಮಟ್ಟ ಮುಟ್ಟಲಿಲ್ಲವಾದ್ರೂ, ಹಾಡುಗಳು ಮಾತ್ರ ಸಿನಿಪ್ರಿಯರ ಕಣ್ಮನ ತಣಿಸ್ತಿವೆ. ನಾಗಣ್ಣ ನಿರ್ದೇಶನ, ಮುನಿರತ್ನ ನಿರ್ಮಾಣದ ಕುರುಕ್ಷೇತ್ರ ಐದು ಭಾಷೆಯಲ್ಲಿ ಏಕಕಾಲದಲ್ಲಿ 2ಡಿ ಹಾಗೂ ತ್ರೀಡಿಯಲ್ಲಿ ಆಗಸ್ಟ್ 2ಕ್ಕೆ ವರ್ಲ್ಡ್ ವೈಡ್ ರಿಲೀಸ್ ಆಗ್ತಿದೆ.
Comments are closed.