ಮನೋರಂಜನೆ

ಸೆಕ್ಸ್ ಮಾಡದೇ ಬಿಗ್ ಬಾಸ್ ಮನೆಯಲ್ಲಿ 100 ದಿನ ಇರಲು ಸಾಧ್ಯವೇ…? ವಿವಾದ ಹುಟ್ಟು ಹಾಕಿದ ಈ ನಟಿಯ ಹೇಳಿಕೆ !

Pinterest LinkedIn Tumblr

ಹೈದರಾಬಾದ್: ತೆಲುಗು ಬಿಗ್ ಬಾಸ್ ಸೀಸನ್ 3 ಆರಂಭದ ವಿಚಾರ ಸುದ್ದಿಯಾಗುತ್ತಿದ್ದಂತೆಯೇ ಅದರ ಹಲವು ವಿವಾದಗಳು ಹರಿಯಲಾರಂಭಿಸಿದ್ದು, ಈ ಹಿಂದೆ ಮೊದಲ ಎರಡು ಸೀಸನ್ ನಲ್ಲಿ ಅವಕಾಶ ನೀಡಿ ಮಂಚಕ್ಕೆ ಕರೆದಿದ್ದರು ಎಂದು ಎಂದು ಆರೋಪಿಸಿದ್ದ ನಟಿ ಗಾಯತ್ರಿ ಗುಪ್ತಾ ಇದೀಗ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.

ಈ ಹಿಂದೆ ಕಾಸ್ಟಿಂಗ್ ಕೌಚ್ ವಿವಾದ ಸೃಷ್ಟಿಸಿದ್ದ ನಟಿ ಶ್ವೇತಾ ರೆಡ್ಡಿ ಹಾಗೂ ನಟಿ ಗಾಯತ್ರಿ ಗುಪ್ತಾ ಟಿವಿ ಡಿಬೇಟ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಹೊಸದೊಂದು ಬಾಂಬ್ ಸಿಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಬಿಗ್ ಬಾಸ್ ಕಾರ್ಯಕ್ರಮದ ಕುರಿತು ಮಾತನಾಡಿರುವ ನಟಿಯರು, ಬಿಗ್ ಬಾಸ್ ಷೋಗೆ ಈ ಹಿಂದೆ ಎರಡು ಸೀಸನ್ ನಲ್ಲಿ ನಮಗೆ ಆಫರ್ ಬಂದಿತ್ತು. ಆದರೆ ಇದಕ್ಕಾಗಿ ನಮ್ಮನ್ನು ಮಂಚಕ್ಕೆ ಕರೆದಿದ್ದರು ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.

ಕಾರ್ಯಕ್ರಮದಲ್ಲಿ ಮಾತನಾಡಿದ ನಟಿ ಬಿಗ್ ಬಾಸ್ ಆಡಿಷನ್ ವೇಳೆ ಅಂತಿಮ ಸುತ್ತಿನಲ್ಲಿ ಆಡಿಷನ್ ನಡೆಸುತ್ತಿದ್ದವರು ಬಿಗ್ ಬಾಸ್ ಮನೆಯಲ್ಲಿ 100 ದಿನ ಇರಬೇಕು. ಸೆಕ್ಸ್ ಮಾಡದೇ ಮನೆಯಲ್ಲಿ 100 ದಿನ ಇರಲು ಸಾಧ್ಯವೇ.. ಎಂದು ಕೇಳಿದ್ದರು. ಅಲ್ಲದೆ ನಮ್ಮನ್ನು ಆಯ್ಕೆ ಮಾಡಲು ಮಂಚಕ್ಕೆ ಬರಬೇಕು ಎಂದು ಹೇಳಿದ್ದರು ಎಂದು ಫಿದಾ ಚಿತ್ರ ಖ್ಯಾತಿಯ ನಟಿ ಗಾಯತ್ರಿ ಗುಪ್ತಾ ಹೇಳಿದ್ದಾರೆ.

ಅಂತೆಯೇ ಆಯೋಜಕರ ವಿರುದ್ಧವೂ ಗುಡುಗಿರುವ ನಟಿ ಗಾಯತ್ರಿ ಗುಪ್ತಾ ಮತ್ತು ಶ್ವೇತಾ ರೆಡ್ಡಿ, ಇಂಡಸ್ಟ್ರಿಯಲ್ಲಿ ನಮ್ಮನ್ನು ಸೆಕ್ಸ್ ಗೊಂಬೆಗಳಂತೆ ನೋಡುತ್ತಿದ್ದಾರೆ ಎಂದು ಅಳಲು ತೋಡಿಕೊಂಡಿದ್ದಾರೆ.

ಇನ್ನು ತೆಲುಗು ಅವತರಣಿಕೆಯ ಬಿಗ್ ಬಾಸ್ ಸೀಸನ್ 3 ಆರಂಭಕ್ಕೆ ಕ್ಷಣಗಣನೆ ಆರಂಭವಾಗಿತ್ತು. ಈ ಬಾರಿ ನಟ ನಾಗಾರ್ಜುನ ಕಾರ್ಯಕ್ರಮದ ನಿರೂಪಕರಾಗಿದ್ದಾರೆ. ಈ ಹಿಂದೆ ಕಾರ್ಯಕ್ರಮವನ್ನು ಈಗ ಚಿತ್ರ ಖ್ಯಾತಿಯ ನಟ ನಾನಿ ನಿರೂಪಿಸುತ್ತಿದ್ದರು.

Comments are closed.