
ಸಾಮಾನ್ಯವಾಗಿ ಎಲ್ಲ ಚಿತ್ರಗಳಲ್ಲಿ ತಾಯಿ-ಮಗಳು, ಅಪ್ಪ-ಮಗ, ಅಪ್ಪ-ಮಗಳು ಒಟ್ಟಿಗೆ ಅಭಿನಯಿಸಿರುವುದನ್ನು ನೋಡಿದ್ದೇವೆ. ಆದರೆ ಸ್ಯಾಂಡಲ್ ವುಡ್ ನಲ್ಲಿ ಇದೀಗ ಹೊಸ ಚಿತ್ರವೊಂದು ಹೊಸ ಪ್ರಯತ್ನಕ್ಕೆ ಮುಂದಾಗಿದೆ ಹೌದು ಒಂದೇ ಸಿನಿಮಾದಲ್ಲಿ ಮೂರು ಜನರೇಶನ್ ನವರು ಒಂದೇ ಫ್ರೇಮ್ ನಲ್ಲಿ ಸೆರೆಸಿಕ್ಕಿದ್ದಾರೆ. ಯಾವುದೀ ಅಪರೂಪದ ಸಿನಿಮಾ ಅಂದ್ರಾ? ಇಲ್ಲಿದೆ ಡಿಟೇಲ್ಸ್.
ಸ್ಯಾಂಡಲ್ ವುಡ್ ನಲ್ಲಿ ಪ್ರಿಯಾಂಕಾ ಉಪೇಂದ್ರ ಅಭಿನಯದ ‘ದೇವಕಿ’ ಚಿತ್ರ ತಯಾರಾಗುತ್ತಿದ್ದು. ಈ ಚಿತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ಮಗಳು ಐಶ್ವರ್ಯ ಮೊದಲ ಬಾರಿಗೆ ಬಣ್ಣ ಹಚ್ಚಿದ್ದು, ಪ್ರಿಯಾಂಕ ಉಪೇಂದ್ರರವರಿಗೆ ಮಗಳು ಐಶ್ವರ್ಯ ಸಾಥ್ ನೀಡಿದ್ದಾರೆ. ಈ ನಡುವೆ ಚಿತ್ರತಂಡ ಮತ್ತೊಂದು ಇಂಟ್ರಸ್ಟಿಂಗ್ ವಿಚಾರವನ್ನು ಹೊರಹಾಕಿದೆ.
ಹೌದು ಪ್ರಿಯಾಂಕಾ ಉಪೇಂದ್ರ ಮತ್ತು ಮಗಳು ಐಶ್ವರ್ಯ ಜೊತೆ ಪ್ರಿಯಾಂಕಾ ತಾಯಿ ಕೂಡ ದೇವಕಿ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರದ ಮೂಲಕ ಮೂವರು ಒಂದೇ ಫ್ರೇಮಿನಲ್ಲಿ ಸೆರೆಯಾಗಿದ್ದಾರೆ. ಅಲ್ಲದೆ ಪ್ರಿಯಾಂಕ ಮೂಲತಃ ಕೋಲ್ಕತದವರಾಗಿದ್ದು , ಅವರ ತಾಯಿ ಕೂಡ ಅಲ್ಲಿಯವರೆ ಆಗಿದ್ದಾರೆ. ಜೊತೆಗೆ ಚಿತ್ರದ ಬಹುತೇಕ ಭಾಗ ಚಿತ್ರೀಕರಣವನ್ನು ಕೋಲ್ಕತದಲ್ಲಿ ಮಾಡಲಾಗಿದೆ. ಇನ್ನೂ ಈ ಸಿನಿಮಾದಲ್ಲಿ ಬಣ್ಣಹಚ್ಚುವ ಮೂಲಕ ಮೊದಲ ಬಾರಿಗೆ ಪ್ರಿಯಾಂಕ ತಾಯಿ ಕ್ಯಾಮರಾ ಫೇಸ್ ಮಾಡಿದ್ದಾರೆ.
ಸದ್ಯ ಚಿತ್ರೀಕರಣದ ವೇಳೆ ಪ್ರಿಯಾಂಕಾ ಮತ್ತು ಅವರ ತಾಯಿ ಜೊತೆಗೆ ಮಗಳು ಒಟ್ಟಿಗಿರುವ ಚಿತ್ರದ ಮೇಕಿಂಗ್ ಫೋಟೋವೊಂದನ್ನು ಚಿತ್ರ ತಂಡ ರಿಲೀಸ್ ಮಾಡಿದ್ದು ಸಾಮಾಜಿಕ ಜಾಲತಾಣಗಳಲ್ಲಿ ಈ ಫೋಟೊಗಳು ವೈರಲ್ ಆಗಿದೆ. ಈ ಹಿಂದೆ ‘ಮಮ್ಮಿ’ ಚಿತ್ರದ ಖ್ಯಾತಿಯ ನಿರ್ದೇಶಕ ಲೋಹಿತ್ ರವರೇ ದೇವಕಿ ಚಿತ್ರಕ್ಕೂ ಆ್ಯಕ್ಷನ್ ಕಟ್ ಹೇಳಿದ್ದು,ಈಗಾಗಲೇ ಚಿತ್ರದ ಟ್ರೈಲರ್ ಮೂಲಕ ಕುತೂಹಲ ಮೂಡಿಸಿರುವ ‘ದೇವಕಿ’ ಸಿನಿಮಾ ಸ್ಯಾಂಡಲ್ ವುಡ್ ನಲ್ಲಿ ಸಿಕ್ಕಾಪಟ್ಟೆ ನಿರೀಕ್ಷೆ ಹುಟ್ಟುಹಾಕಿದೆ.
ಇನ್ನೂ ಚಿತ್ರ ಮುಂದಿನ ತಿಂಗಳು 5ಕ್ಕೆ ತೆರೆಗೆ ಬರಲು ಸಿದ್ಧವಾಗಿದ್ದು, ಸಿನಿ ಪ್ರಿಯರನ್ನು ಹೇಗೆ ಮೋಡಿ ಮಾಡುತ್ತದೆ ಎಂದು ಕಾದು ನೋಡಬೇಕಾಗಿದೆ.
Comments are closed.