ಮನೋರಂಜನೆ

ನನ್ನ ಸ್ನೇಹಿತರಲ್ಲಿ ತುಂಬ ಜನ ಸಲಿಂಗಕಾಮಿಗಳು! ನಟಿ ರೆಜಿನಾ ಕಸ್ಸಂದ್ರ!!

Pinterest LinkedIn Tumblr


‘ಸೂರ್ಯಕಾಂತಿ’ ಚಿತ್ರದ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ರೆಜಿನಾ ಕಸ್ಸಂದ್ರ ‘ನಾನು ಚಿಕ್ಕವಯಸ್ಸಿನಲ್ಲಿಯೇ ಬ್ಲೂ ಫಿಲ್ಮ್‌ಗಳನ್ನು ನೋಡಿದ್ದೇನೆ’ ಎಂದು ಹೇಳಿಕೆ ನೀಡಿ ಸಿನಿರಂಗಲ್ಲಿ ಭಾರಿ ಸಂಚಲನ ಸೃಷ್ಟಿಸಿದ್ದರು. ಈ ಬೋಲ್ಡ್ ಬೆಡಗಿ ರೆಜಿನಾ ಮತ್ತೆ ಅಂತಹದ್ದೇ ಕಾಂಟ್ರವರ್ಸಿ ಸ್ಟೇಟ್​ಮೆಂಟ್ ಒಂದನ್ನು ನೀಡಿ ಇದೀಗಾ ಮತ್ತೆ ಸುದ್ದಿಯಲ್ಲಿದ್ದಾರೆ.

ಸಿನಿರಂಗದಲ್ಲಿರುವವರಿಗೆ ಕಾಂಟ್ರವರ್ಸಿ ಅನ್ನೋದು ಹೊಸತೇನಲ್ಲ. ಇದೀಗ ಟಾಲಿವುಡ್‌ ಹಾಗೂ ಹಾಲಿವುಡ್‌ ಸಿನಿಮಾಗಳಲ್ಲಿ ಫುಲ್ ಬ್ಯುಸಿಯಾಗಿರುವ ರೆಜಿನಾ ಸಂದರ್ಶನವೊಂದರಲ್ಲಿ, ಸೋನಂ ಕಪೂರ್ ಜೊತೆ ‘ಏಕ್ ಲಡ್ಕಿ ಕೋ ದೇಖಾ, ತೋ ಐಸಾ ಲಗಾ’ ಸಿನಿಮಾ ಮಾಡಿದ್ದ ವೇಳೆ ನಾನು ಸಲಿಂಗಕಾಮಿ ಪಾತ್ರ ಮಾಡಿದ್ದೆ. ಆ ಪಾತ್ರ ಮಾಡಿದ್ದಕ್ಕೆ ನನ್ನನ್ನು ಮೆಚ್ಚಿಕೊಂಡಿದ್ದರು. ಬಹಳ ಖುಷಿ ಪಟ್ಟಿದ್ದರು” ಅಲ್ಲದೆ ‘ನನ್ನ ಸ್ನೇಹಿತರಲ್ಲಿ ಬಹಳ ಜನ ಸಲಿಂಗಕಾಮಿಗಳು’ ಎಂದು ಹೇಳಿಕೆ ನೀಡಿದ್ದಾರೆ.

ರೆಜಿನಾ ತನ್ನ ಬಾಯ್‌ಫ್ರೆಂಡ್‌ ಜೊತೆ ಸೀಕ್ರೆಟ್ ಆಗಿ ಈಗಾಗಲೇ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ಎಂಬ ವದಂತಿ ಕೇಳಿ ಬರುತ್ತಿರುವ ಬೆನ್ನಲ್ಲೆ. ಸಂದರ್ಶನವೊಂದರಲ್ಲಿ ಎಲ್ಲರನ್ನು ಆಶ್ಚರ್ಯ ಚಕಿತರಾಗುವಂತೆ ಮಾಡಿದ್ದಾರೆ.

Comments are closed.