
ಈಗಾಗಲೇ ಮದುವೆಯಾಗಿ ಪುನಃ ಬೇರೆಯವನ ಪ್ರೀತಿಗೆ ಬಿದ್ದವಳ ಕತೆ ಮುಂದೆ ಏನಾಯ್ತು ಗೊತ್ತಾ.? ಪ್ರೀತಿಯ ಅಮಲಿನಲ್ಲಿ ತೆಲುತ್ತಿದ್ದ ಪಾಗಲ್ ಪ್ರೇಮಿಯ ಮಾತನ್ನು ಕೇಳದಿದ್ದಕ್ಕೆ ಆಕೆಯ ಪ್ರಾಣ ಪಕ್ಷಿಯನ್ನ ಹಾರಿಸಿದ ಭೂಪನ ಕಥೆ ಇದು.! ಅಷ್ಟಕ್ಕ ಆ ಪಾಗಲ್ ಪ್ರೇಮಿ ಮಾಡಿದ್ದಾದ್ರು ಏನು ಗೊತ್ತಾ.? ತಿಳಿದುಕೊಳ್ಳೋ ಕ್ಯೂರಿಯಾಸಿಟಿ ನಿಮಗಿದೆಯಾ ಆಗಿದ್ರೆ ಈ ಸ್ಟೋರಿ ಓದಿ.
ಪತಿಗೆ ಡಿವೋರ್ಸ್ ನೀಡಲು ನಿರಾಕರಿಸಿದ್ದಕ್ಕೆ ಪ್ರಿಯತಮೆಯನ್ನ ಕೊಂದು, ಬಳಿಕ ತನ್ನ ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಈ ಭೀಕರ ಘಟನೆ ನಡೆದದ್ದು ನವದೆಹಲಿಯಲ್ಲಿ.
ಮದುವೆಯಾಗಿ ಗಂಡ, ಮಗುವಿನ ಜೊತೆ ಸುಖ ಸಂಸಾರ ಸಾಗಿಸುತ್ತಿದ್ದ ಪಿಂಕಿಗೆ ಅದ್ಯಾವ ಗರ ಬಡಿದಿತ್ತೊ ಗೊತ್ತಿಲ್ಲ.? ಗೆಳತಿಯೊಬ್ಬಳ ಮುಖಾಂತರ ದಕ್ಷಿಣ ದೆಹಲಿಯ ದೆವ್ಲಿ ನಿವಾಸಿ 26 ವರ್ಷದ ಸನ್ನಿ ಎಂಬಾತನೊಡನೆ ಕಳೆದ ಪ್ರೇಮಿಗಳ ದಿನದಂದು ಪರಿಚಯವಾಗಿದೆ. ಆರಂಭದಲ್ಲಿ ಉತ್ತಮ ಸ್ನೇಹಿತರಾಗಿದ್ದ ಇವರು ಕಾಲ ಕ್ರಮೇಣ ಪ್ರೀತಿ ಮಾಯೆಗೆ ಬಿದ್ದು. ಡೇಟಿಂಗ್ ಮೀಟಿಂಗ್ ಮಾಡುತ್ತಾ ಕಾಲ ಕಳೆಯುತ್ತಿದ್ದರು.
ಇವರಿಬ್ಬರ ಈ ಲವ್ವಿ-ಡವ್ವಿ ಕಹಾನಿ ಪತಿಗೆ ತಿಳಿದು ತಮ್ಮ ಮನೆಯನ್ನು ಚಿರಾಗ್ ದೆಹಲಿಗೆ ಕಳೆದ ತಿಂಗಳಲ್ಲಿ ಶಿಫ್ಟ್ ಮಾಡಿದರು. ಇಷ್ಟು ನಡೆದರು ಇವರಿಬ್ಬರ ಹುಚ್ಚಾಟ ಮಾತ್ರ ನಿಲ್ಲಲಿಲ್ಲಾ. ಪಿಂಕಿ ಪತಿ ಕೆಲಸದ ನಿಮಿತ್ತ ಹೊರಗಡೆ ಹೋದ ನಂತರ ಸನ್ನಿ ಆಗಾಗ ಮನೆಗೆ ಬರುತ್ತಿದ್ದನು. ಸನ್ನಿಯ ಈ ಹುಚ್ಚಾಟದಿಂದ ಬೇಸತ್ತ ಪಿಂಕಿಗೆ ಕ್ರಮೇಣ ಅಕ್ರಮ ಸಂಬಂಧ ಹೊಂದಿರುವ ಬಗ್ಗೆ ತಪ್ಪಿನ ಅರಿವಾಗಿ ಸನ್ನಿಯಿಂದ ದೂರವಾಗಲು ಪ್ರಯತ್ನಿಸುತ್ತಿದ್ದಳು.
ಪಿಂಕಿ ನಡವಳಿಕೆಯಲ್ಲಿ ವ್ಯತ್ಯಾಸವನ್ನು ಗಮನಿಸಿದ ಸನ್ನಿ ಗಂಡನಿಗೆ ಡಿವೋರ್ಸ್ ನೀಡು ನಾವಿಬ್ಬರು ಓಡಿ ಹೋಗೋಣ ಎಂದು ಪಿಂಕಿಯಲ್ಲಿ ಹೇಳಿದ್ದಾನೆ. ಇದ್ಯವಾದುಕ್ಕು ಆಕೆ ಒಪ್ಪದಿದ್ದಾಗ ಸಿಟ್ಟಿಗೆದ್ದು ತನ್ನ ಕೈಯಲಿದ್ದ ಚಾಕುವಿನಿಂದ ಆಕೆಯ ಎದೆ ಹಾಗೂ ಸೊಂಟಕ್ಕೆ 12ಕ್ಕೂ ಹೆಚ್ಚು ಬಾರಿ ಇರಿದಿದ್ದಾನೆ. ಈ ವೇಳೆ ತಾನು ಪರಾರಿಯಾಗದೇ ಅಲ್ಲೇ ಇದ್ದು, ತನ್ನ ಕುತ್ತಿಗೆಯನ್ನೂ ಸೀಳಿಕೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದಾನೆ.
ತನ್ನ ಪತ್ನಿ ಹಾಗೂ ಸನ್ನಿ ರಕ್ತದ ಮಡುವಿನಲ್ಲಿ ಬಿದ್ದಿರುವದನ್ನು ಗಮನಿಸಿದ ಪಿಂಕಿಯ ಪತಿ ಪೊಲೀಸರಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾನೆ. ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ದೌಡಾಯಿಸಿದ ಪೊಲೀಸರು ಇಬ್ಬರನ್ನೂ ನಗರದ ಏಮ್ಸ್ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಅದಾಗಲೇ ಪಿಂಕಿ ಮೃತಪಟ್ಟಿದ್ದು, ಸನ್ನಿಯನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೆ ಹೆಚ್ಚು ರಕ್ತಸ್ತ್ರಾವವಾಗಿರುವುದರಿಂದ ಆತನ ಸ್ಥಿತಿಯೂ ಚಿಂತಾಜನಕವಾಗಿದ್ದು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾನೆ ಎನ್ನಲಾಗಿದೆ.
Comments are closed.