
ಟಾಲಿವುಡ್ ನಲ್ಲಿ ಮಿಂಚುತ್ತಿರುವ ಕನ್ನಡದ ಬೆಡಗಿ ಪೂಜಾ ಹೆಗ್ಡೆ ಆಗಾಗ ಸಾಮಾಜಿಕ ಜಾಲಾತಾಣಗಳಲ್ಲಿ ಸುದ್ದಿಯಾಗುತ್ತಲೇ ಇರುತ್ತಾರೆ. ಸದ್ಯ ಮತ್ತೊಮ್ಮೆ ಪೂಜಾ ಬಿಕಿನಿ ತೊಟ್ಟು ಫೋಟೋಗೆ ಫೋಸ್ ಕೊಟ್ಟಿರುವ ಫೋಟೋ ಸಾಮಾಜಿಕ ಜಾಲಾತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಹೌದು ಇತ್ತೀಚೆಗಷ್ಟೇ ಮಹೇಶ್ ಬಾಬು ಅಭಿನಯದ ಮಹರ್ಷಿ ಚಿತ್ರದಲ್ಲಿ ನಟಿಸಿ ಸಕ್ಸಸ್ ಖುಷಿಯಲ್ಲಿರುವ ಪೂಜಾ, ಟಾಲಿವುಡ್ ನಲ್ಲಿ ,ನಾಗ ಚೈತನ್ಯ,ಅಲ್ಲು ಅರ್ಜುನ್ ಜೊತೆ ಅಭಿನಯಿಸಿರುವ ಪೂಜಾ, ಈ ಹಿಂದೆ ಬಾಲಿವುಡ್ ನಲ್ಲಿ ಹೃತಿಕ್ ರೋಷನ್ ಗೆ ಜೋಡಿಯಾಗಿ ಮೆಹೆಂಜೋದಾರೊ ಚಿತ್ರದಲ್ಲಿ ನಟಿಸಿದ್ದರು. ಸದ್ಯ NTR ಸೇರಿದಂತೆ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ಬ್ಯುಸಿ ಯಾಗಿರುವ ಪೂಜಾ ಈ ಮಧ್ಯೆ ಹಳದಿ ಬಣ್ಣದ ಬಿಕಿನಿ ಉಡುಗೆ ತೊಟ್ಟು ತಮ್ಮ ಇನ್ಸ್ಟಾಗ್ರಾಂ ಅಕೌಂಟ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ.
ಈ ಹಿಂದೆ ಖಾಸಗಿ ಕ್ಯಾಲೆಂಡರ್ ಒಂದಕ್ಕೆ ಬಿಕಿನಿ ಉಡುಗೆಯಲ್ಲಿಯೇ ಫೋಟೋ ಶೂಟ್ ಗೆ ಫೋಸ್ ನೀಡಿದ್ದರು.
Comments are closed.