
ಅವ್ರಿಬ್ಬರು ಒಂದೇ ರಕ್ತ ಹಂಚಿಕೊಂಡು ಹುಟ್ಟಿದ ಅಣ್ಣ ತಂಗಿ.ಆದ್ರೆ ಅದೊಂದು ವಿಚಾರಕ್ಕೆ ಒಡಹುಟ್ಟಿದವನ್ನೆ ಕೊಲ್ಲಿಸಿದ್ದಾಳೆ ಆ ಪಾಪಿ ತಂಗಿ. ಹಾಗಾದ್ರೆ ಆ ವಿಚಾರ ಯಾವುದು.? ಅಣ್ಣನನ್ನೆ ಕೊಲ್ಲಿಸಿದ ಪಾಪಿ ಯಾರು ಅಂತೀರಾ ಈ ಸ್ಟೋರಿ ನೋಡಿ.
ಯೆಸ್ ಇವಳೇ ನೋಡಿ ಸ್ವಂತ ಅಣ್ಣನನ್ನೆ ಸುಫಾರಿ ಕೊಟ್ಟು ಕೊಲ್ಲಿಸಿದ ಖತರ್ನಾಕ್ ತಂಗಿ. ಹೆಸ್ರು ಗೌರಮ್ಮ ಅಂತಾ. ಕೆಂಗೇರಿ ಠಾಣಾ ವ್ಯಾಪ್ತಿಯ ಮಾರುತಿ ನಗರ ನಿವಾಸಿ. ತನಗಿಷ್ಟವಿಲ್ಲದೆ ಇದ್ರು ನನ್ನ ಮಗಳ ಮದುವೆ ಮಾಡಿಸ್ತಾ ಇದ್ದಾನೆ ಅಂತಾ ತನ್ನ ಸ್ವಂತ ಅಣ್ಣನನ್ನೆ ಕೊಲ್ಲಿಸಿದ ಪುಣ್ಯಾತಗಿತ್ತಿ. ಯೆಸ್ ಇದೆ ತಿಂಗಳು ೨೨ ನೇ ತಾರೀಖು ವಿಶ್ವೇಶ್ವರಯ್ಯ ಲೇಔಟ್ ನಲ್ಲಿ ನಡೆದಿದ್ದ ರಾಜಶೇಖರ್ ಕೊಲೆ ಪ್ರಕರಣವನ್ನು ಕೆಂಗೇರಿ ಪೊಲೀಸ್ರು ಬೇಧಿಸಿದ್ದು, ತಂಗಿ ಗೌರಮ್ಮ ಮುಮತಾಜ್ ಹಾಗೂ ಅವಳ ಸಹಚರರಿಗೆ ಸುಫಾರಿ ಕೊಟ್ಟು ಕೊಲ್ಲಿಸಿದ್ದ ಸತ್ಯ ಬಟಾಬಯಲಾಗಿದೆ.
ಯೆಸ್ ಗೌರಮ್ಮನ ಗಂಡ ತೀರಿಕೊಂಡು ತುಂಬಾ ದಿನ ಆಗಿತ್ತು. ಆದ್ರೆ ಈ ನಡುವೆ ಗೌರಮ್ಮನ ಮಗಳು ಹುಡುಗನೊಬ್ಬನನ್ನ ಪ್ರೀತಿಸಿದ್ದಳು. ಮೊದಲಿಗೆ ಗೌರಮ್ಮನೆ ಮಗಳು ಪ್ರೀತಿಸಿದ ಹುಡುಗನನ್ನ ಮನೆಗೆ ಕರೆಸಿ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಳು. ಎಂಗೇಜ್ಮೆಂಟ್ ಸಹ ಆಗಿತ್ತು. ಹೀಗಿರುವಾಗ ಗಂಡು ದಿಕ್ಕಿಲ್ಲದ ಮನೆ ಅಂತಾ ರಾಜಶೇಖರ ತಂಗಿ ಮಗಳ ಮದುವೆ ಮಾಡಲು ಮುಂದೆ ಬಂದಿದ್ದ. ಹೀಗೆ ಬಂದವನಿಗೆ ಗೌರಮ್ಮನ ಮಗಳು ಹಾಗೂ ಭಾವಿ ಆಳಿಯ ತೀರ ಹತ್ತಿರವಾಗಿದ್ದರು.
ಇದೇ ಸಮಯಕ್ಕೆ ಭಾವಿ ಅಳಿಯನ ಮೇಲೆ ಗೌರಮ್ಮನಿಗೆ ಅನುಮಾನ ಶುರುವಾಗಿತ್ತು. ಆದರೆ ರಾಜಶೇಖರ ಮದುವೆ ಮಾಡಲು ನಿಶ್ಚಯಿಸಿದ್ದ. ಕೊನೆ ಕೊನೆಗೆ ಗೌರಮ್ಮನಿಗೆ ಈ ಮದುವೆ ಇಷ್ಟವೇ ಇಲ್ಲದಂತಾಯಿತು. ಇದ್ರಿಂದಾಗಿ ಹೇಗಾದ್ರು ಮಾಡಿ ಮದುವೆ ನಿಲ್ಲಿಸಲು ಎದುರು ಮನೆಯ ಮುಮತಾಜ್ ಗೆ ಮೂರು ಲಕ್ಷಕ್ಕೆ ಸುಫಾರಿ ಕೊಟ್ಟೆ ಬಿಟ್ಟಳು. ಆಗ ಈ ಮುಮತಾಜ್ ತನ್ನ ಜೊತೆ ಸಾಕೀಬ್ ಎಂಬುವರಿಗೆ ಹೇಳಿ ಕೊಲ್ಲಿಸಿ ಬಿಟ್ಟಿದ್ದಾಳೆ.
ಹೀಗೆ ಗೌರಮ್ಮ ಅಣ್ಣ ತಂಗಿ ಎಂಬ ಸುಂದರ ಸಂಬಂಧಕ್ಕೆ ತನ್ನ ಕೈಯಾರ ಕೊಡಲಿಯಿಟ್ಟಳು. ಸದ್ಯ ಪೊಲೀಸ್ರು ಆರೋಪಿಗಳನ್ನೆಲ್ಲ ಬಂಧಿಸಿದ್ದು ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಕಳುಹಿಸಿದ್ದಾರೆ.
Comments are closed.