
ಪರಿಶಿಷ್ಟ ಪಂಗಡದ 7.5ರಷ್ಟು ಮೀಸಲಾತಿಗೆ ಒತ್ತಾಯಿಸಿ ವಾಲ್ಮೀಕಿ ಸಮುದಾಯ ಪ್ರತಿಭಟನೆ ನಡೆಸುತ್ತಿದೆ. ಈಗಾಗಲೇ ಇದಕ್ಕೆ ಶಾಸಕ ಶ್ರೀರಾಮುಲು, ಕಾಂಗ್ರೆಸ್ ಮುಖಂಡ ಉಗ್ರಪ್ಪ, ಬಿಜೆಪಿ ಮುಖಂಡ ನಾಗೇಂದ್ರ ಸೇರಿಂದಂತೆ ವಾಲ್ಮೀಕಿ ಸಮುದಾಯದ ರಾಜಕೀಯ ನಾಯಕರು ಬೆಂಬಲ ಸೂಚಿಸುತ್ತಿದ್ದಾರೆ.
ಹೀಗಿರುವಾಗಲೇ ನಟ ಕಿಚ್ಚ ಸುದೀಪ್ ಸಹ ಈ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ. ಹೌದು, ವಿದ್ಯಾರ್ಥಿಗಳ ಒಳಿತಿಗಾಗಿ ಸ್ವಾಮೀಜಿ ಅವರು ಪಾದಯಾತ್ರೆ ನಡೆಸುತ್ತಿದ್ದು, ಅವರ ಪರವಾಗಿ ತಾನಿದ್ದೇನೆ ಎಂದು ಕಿಚ್ಚ ಟ್ವೀಟ್ ಮಾಡಿದ್ದಾರೆ.
ಶ್ರೀ ಶ್ರೀ ಶ್ರೀ ಪರಮಪೂಜ್ಯ ಪ್ರಸನ್ನಾನಂದ ಮಹಾಸ್ವಾಮಿಗಳಿಗೆ ಆ ಎಲ್ಲಾ ವಿದ್ಯಾರ್ಥಿಗಳ ಪರವಾಗಿ ಧನ್ಯವಾದಗಳು.
🙏🙏 pic.twitter.com/KUkbXI8t5z— Kichcha Sudeepa (@KicchaSudeep) June 25, 2019
ವಿದ್ಯಾರ್ಥಿಗಳ ಭವಿಷ್ಯಕ್ಕಾಗಿ ಸ್ವಾಮೀಜಿ ಅವರು ಈ ನಿರ್ಧಾರ ತೆಗೆದುಕೊಂಡಿದ್ದು, ಇದಕ್ಕೆ ಕೂಡಲೇ ಸರ್ಕಾರ ಸ್ಪಂದಿಸಬೇಕೆಂದೂ ಸುದೀಪ್ ಒತ್ತಾಯಿಸಿದ್ದಾರೆ.
ವಾಲ್ಮೀಕಿ ಸಮುದಾಯದ ಪರ ವಿಷಯ ಬಂದಾಗಲೆಲ್ಲ ಸುದೀಪ್ ಸದಾ ಬೆಂಬಲವಾಗಿ ನಿಲ್ಲುತ್ತಾರೆ. ಈ ಹಿಂದೆ ‘ವೀರ ಮದಕರಿ’ ಸಿನಿಮಾ ಮಾಡುವ ವಿಷಯ ಬಂದಾಗಲೂ ಸ್ವಾಮೀಜಿ ಅವರು ಸುದೀಪ್ ಅವರೇ ಈ ಪಾತ್ರವನ್ನು ಮಾಡಬೇಕೆಂದು ಆಗ್ರಹಿಸಿದ್ದರು. ಆಗ ಸುದೀಪ್ ಸಹ ಅದಕ್ಕೆ ಸಮ್ಮತಿ ಸೂಚಿಸಿದ್ದರು.
ಈ ವಿಷಯವಾಗಿ ನಟ ದರ್ಶನ್ ಹಾಗೂ ಸುದೀಪ್ ಅಭಿಮಾನಿಗಳ ನಡುವೆ ಆಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟ್ವೀಟ್ ವಾರ್ ನಡೆದಿತ್ತು. ನಂತರ ಸುದೀಪ್ ಈ ವಿಷಯದಿಂದ ಹಿಂದೆ ಸರಿಯುವ ಮೂಲಕ ಆ ವಿವಾದಕ್ಕೆ ತೆರೆ ಎಳೆದರು.
Comments are closed.